ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಹವೇಲಿಗಲ್ಲಿಯ ಹಿಂದುಗಡೆಯ ಲಾಲಬಂಗಲೆ ಹತ್ತಿರದ ಟಿಪ್ಪು ಸುಲ್ತಾನ ನಗರದಲ್ಲಿನ ಟಿಪ್ಪು ಸುಲ್ತಾನ್ ಯಂಗ್ ಕಮೀಟಿ ವತಿಯಿಂದ ಗೌಸ್‌ಪಾಕ್ ಮೆಹಬೂಬ ಸುಬಾನಿ ಹಜರತ್ ಅಬ್ದುಲ್ ಖಾದಿರ್ ಜಿಲಾನಿ ರಹಮತುಲ್ಲಾಅಲೈ ಗ್ಯಾರವಿ ಶರೀಪ್ ಕಾರ್ಯಕ್ರಮ ಆಚರಿಸಲಾಯಿತು.
ಟಿಪ್ಪು ಸುಲ್ತಾನ್ ಯಂಗ್ ಕಮೀಟಿಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಅಬ್ದುಲ್‌ಹಮೀದ ಮುಶ್ರೀಫ್, ಜಮೀರ್ ಬಕ್ಷಿ, ಮೊಯೀನ್ ಶೇಖ, ಫಯಾಜ ಸಾಸನೂರ, ಅಬ್ದುಲ್‌ಪೀರಾ ಜಮಖಂಡಿ ಸೇರಿದಂತೆ ವಿವಿಧ ಮುಖಂಡರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಕು.ಇಂತೆಜಾರ ಚಿಷ್ಠಿ ಹಾಗೂ ಕು.ಅರಮಾನ ಜಾವೀದ ಅವರು ಕವ್ವಾಲಿ ಕಾರ್ಯಕ್ರಮ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಟಿಪ್ಪು ಸುಲ್ತಾನ್ ಯಂಗ್ ಕಮೀಟಿಯ ಗಫೂರಸಾಬ ಮುಲ್ಲಾ, ದಾದಾಪೀರ ಅಂಕಲಗಿ, ತೌಫಿಕ ಅಮಿನಗಡ, ಆಸೀಫ್ ಕಾಖಂಡಕಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

