ದೇವರಹಿಪ್ಪರಗಿ: ಪಟ್ಟಣಕ್ಕೆ ಅ.೧೦ ಮಂಗಳವಾರದಂದು ಆಗಮಿಸುವ ಶೌರ್ಯ ಜಾಗರಣ ರಥಯಾತ್ರೆಗೆ ಸಾಂಪ್ರದಾಯಿಕ ಸ್ವಾಗತ ಕೋರಿ ನಂತರ ಬಿಳ್ಕೋಡಲಾಗುತ್ತದೆ ಎಂದು ವಿಶ್ವ ಹಿಂದೂ ಪರಿಷದ್ ವಿಭಾಗ ಸತ್ಸಂಗ ಪ್ರಮುಖ ಶ್ರೀಮಂತ ದುದ್ದಗಿ ಹೇಳಿದರು.
ಪಟ್ಟಣದ ಕಲ್ಮೇಶ್ವರ ದೇವಸ್ಥಾನದ ಆವರಣದಲ್ಲಿ ಗುರುವಾರ ಜರುಗಿದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ವಿಶ್ವ ಹಿಂದೂ ಪರಿಷದ್ ೬೦ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಶುಭ ಸಂದರ್ಭದಲ್ಲಿ ರಾಷ್ಟಾçದ್ಯಂತ ಆಯೋಜಿಸಿರುವ ಶೌರ್ಯ ಜಾಗರಣ ರಥಯಾತ್ರೆ ಸೆಪ್ಟೆಂಬರ್ ೩೦ರಂದು ಆರಂಭಗೊಂಡು ಅಕ್ಟೋಬರ್ ೧೬ಕ್ಕೆ ಕೊನೆಗೊಳ್ಳಲಿದೆ. ಈ ರಥಯಾತ್ರೆ ಪಟ್ಟಣಕ್ಕೆ ಆಗಮಿಸುವ ಸಂದರ್ಭದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಭವ್ಯ ಸ್ವಾಗತ ಕೋರುವುದರ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು.
ವಿಶ್ವ ಹಿಂದೂ ಪರಿಷದ್ ಧರ್ಮೋ ರಕ್ಷತಿ ರಕ್ಷಿತಃ ಎಂಬ ಧ್ಯೆಯಮಂತ್ರದೊಂದಿಗೆ ರಾಷ್ಟ್ರ ರಕ್ಷಣೆಯ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಂಘಟನೆಯಾಗಿದೆ. ಪಟ್ಟಣದ ತಾವೆಲ್ಲ ಯುವಕರು ತಮ್ಮ ತನು, ಮನದೊಂದಿಗೆ ಆಗಮಿಸಿ ರಥಯಾತ್ರೆಯ ಸಂದೇಶವನ್ನು ಅರಿತು ಜನತೆಗೆ ಸಾದರಪಡಿಸಬೇಕು ಎಂದರು.
ತಾಲ್ಲೂಕು ಅಧ್ಯಕ್ಷ ಶ್ರೀಧರ ನಾಡಗೌಡ, ಸೋಮಶೇಖರ ಹಿರೇಮಠ, ಚಿದಾನಂದ ಕುಂಬಾರ, ಶ್ರೀಶೈಲ ಯಂಭತ್ನಾಳ, ಪ್ರವೀಣ ದೇಸಾಯಿ, ರಮೇಶ ಯಾಳಗಿ, ಪುನೀತ ಹಿಪ್ಪರಗಿ, ಕಲ್ಮೇಶ ಬುದ್ನಿ, ಸುರೇಶ ಕುಂಬಾರ, ಗೌಡು ಯಾಳಗಿ, ನಿಂಗು ನಾಗರಳ್ಳಿ, ಶಿವು ವಸ್ತçದ, ಶಿವು ಕೋಟಿನ್, ಪ್ರಶಾಂತ ಮಿಂಚನಾಳ, ಆದಿತ್ಯ ಪಾಟೀಲ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

