ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಬಿ.ಎಲ್.ಡಿ.ಇ ಸಂಸ್ಥೆಯ ಎ.ವ್ಹಿ.ಎಸ್ ಆರ್ಯುವೇದ ಮಹಾವಿದ್ಯಾಲಯ ಇವರ ಸಹಯೋಗದಲ್ಲಿ ೨೦೨೫-೨೬ನೇ ಸಾಲಿನ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವ್ಹಿ.ಎಸ್. ಆರ್ಯುವೇದ ಮಹಾವಿದ್ಯಾಲಯದ ವಾಗ್ಭಟ ಸಂಭಾಂಗಣದಲ್ಲಿ ಅಕ್ಟೋಬರ್ ೧೫ರ ಬೆಳಿಗ್ಗೆ ೧೦.೩೦ಕ್ಕೆ ಹಮ್ಮಿಕೊಳ್ಳಲಾಗಿದೆ.
೧೫ ರಿಂದ ೨೯ ವರ್ಷದೊಳಗಿನ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ ಜನಪದ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ಒಂದು ತಂಡದಲ್ಲಿ ೧೦ ಸ್ಪರ್ಧಿಗಳನ್ನು ಹಾಗೂ ೧೫ ನಿಮಿಷ ಅವಧಿ ನಿಗದಿಪಡಿಸಲಾಗಿದ್ದು, ಕನ್ನಡ, ಆಂಗ್ಲ ಅಥವಾ ಹಿಂದಿ ಭಾಷೆಯನ್ನು ಆಯ್ದುಕೊಳ್ಳಬಹುದಾಗಿದೆ. ಜನಪದ ಗೀತೆಯಲ್ಲಿ ಭಾಗವಹಿಸಲು ಒಂದು ತಂಡದಲ್ಲಿ ೧೦ ಸ್ಪರ್ಧಿಗಳನ್ನು ಹಾಗೂ ೦೭ ನಿಮಿಷದ ಅವಧಿ ನಿಗದಿ ಪಡಿಸಲಾಗಿದ್ದು, ಕನ್ನಡ, ಆಂಗ್ಲ ಅಥವಾ ಹಿಂದಿ ಭಾಷೆಯನ್ನು ಆಯ್ದುಕೊಳ್ಳಬಹುದಾಗಿದೆ.
ಕಥೆ ಬರೆಯುವ ಸ್ಪರ್ಧೆಯಲ್ಲಿ ಭಾಗವಹಿಸುವವರು ೬೦ ನಿಮಿಷಗಳಲ್ಲಿ ೧೦೦೦ ಪದಗಳಿಗೆ ಮೀರದಂತೆ ಕನ್ನಡ, ಆಂಗ್ಲ ಅಥವಾ ಹಿಂದಿ ಭಾಷೆಗಳಲ್ಲಿ ಕಥೆ ಬರೆಯಬಹುದಾಗಿದೆ. ಚಿತ್ರಕಲೆ ಸ್ಪರ್ಧೆಯಲ್ಲಿ ಭಾಗವಹಿಸುವರಿಗೆ ೯೦ ನಿಮಿಷಗಳ ಕಾಲಮಿತಿ ನಿಗದಿ ಪಡಿಸಲಾಗಿದ್ದು, ಕನ್ನಡ, ಆಂಗ್ಲ ಅಥವಾ ಹಿಂದಿ ಭಾಷೆಗಳಲ್ಲಿ ಒಬ್ಬರು ಭಾಗವಹಿಸಬಹುದು. ಕವಿತೆ ಬರೆಯುವ ಸ್ಪರ್ಧೆಯಲ್ಲಿ ಭಾಗವಹಿಸುವವರು ೯೦ ನಿಮಿಷಗಳ ಕಾಲ ಮಿತಿಯಲ್ಲಿ ಕನ್ನಡ, ಆಂಗ್ಲ ಅಥವಾ ಹಿಂದಿ ಭಾಷೆಗಳಲ್ಲಿ ಕವಿತೆ ಬರೆಯಬಹುದಾಗಿದ್ದು, ಒಬ್ಬರು ಭಾಗವಹಿಸಬಹುದು. ಸಾಯಿನ್ಸ್ ಮೇಳದ ಸ್ಪರ್ಧೆಯಲ್ಲಿ ಒಂದು ತಂಡದಲ್ಲಿ ೫ ಜನ ಒಳಗೊಂಡಿರಬೇಕು.
ಆಸಕ್ತ ವಿದ್ಯಾರ್ಥಿಗಳು ಹಾಗೂ ಯುವಜನ ಸಂಘಗಳ ಸದಸ್ಯರು ನಗರದ ಡಾ.ಬಿ.ಆರ್.ಅಂಬೇಡ್ಕರ ಕ್ರೀಡಾಂಗಣದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಅಕ್ಟೋಬರ್ ೧೩ರೊಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ೦೮೩೫೨-೨೫೧೦೮೫, ೭೦೧೯೦೦೮೪೩ ಹಾಗೂ ೯೫೩೫೫೦೧೮೭೨ ಸಂಪರ್ಕಿಸಬಹುದಾಗಿದೆ ಎಂದು ಕ್ರೀಡಾಧಿಕಾರಿ ರಾಜಶೇಖರ ಧೈವಾಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
