ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದಲ್ಲಿ ಗುರುವಾರದಂದು ಶ್ರೀ ಶಿವಶರಣೆ ನಿಂಬೆಕ್ಕ ವಿದ್ಯಾ ಸಂಸ್ಥೆಯ ಅಡಿಯಲ್ಲಿನ ಶ್ರೀ ಡಿ.ಎಂ. ಕುಮಾನಿ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಶ್ರೀ ಶಿವಶರಣೆ ನಿಂಬೆಕ್ಕ ಪ್ರೌಢ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಜಿಯವರ ೧೫೬ ಹಾಗೂ ಲಾಲ್ ಬಹಾದ್ದೂರ ಶಾಸ್ತೀಯವರ ೧೨೧ನೇ ಜಯಂತಿ ಆಚರಣೆ ಸಮಾರಂಭ ಜರುಗಿತು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಎಸ್.ಡಿ. ಕುಮಾನಿ ಇವರು ಗಾಂಧೀಜಿ ಹಾಗೂ ಶಾಸ್ತ್ರೀಯವರ ಆದರ್ಶಗಳನ್ನು ಅಳವಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ತಿಳಿಸಿದರು.
ಮಲ್ಲಿಕಾರ್ಜುನ ಮಾಲಗಾರ ಅತಿಥಿಗಳಾಗಿ ಆಗಮಿಸಿದ್ದರು. ಪ್ರಾಚಾರ್ಯ ಎಸ್.ಎಂ. ಪಾಠಕ ಎಸ್.ಎಂ. ಮಣಿಯಾರ ಬಿ.ಜೆ. ಗರೇಬಾಳ ಪಿ.ಎಸ್. ಕುಮಾಣಿ ಇತರರು ಉಪಸ್ಥಿತರಿದ್ದರು.

