ಉದಯರಶ್ಮಿ ದಿನಪತ್ರಿಕೆ
ಇಂಡಿ: ಪಟ್ಟಣದ ಶ್ರೀ ಅಂಬಾಭವಾನಿದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ನಿಮಿತ್ಯ ಚಂಡಿಹೋಮ ಹಮ್ಮಿಕೊಳ್ಳಲಾಗಿತ್ತು.
ಕಲಬುರಗಿಯ ಸಂಕೇತಾಚಾರ್ಯ ಅಗ್ನಿಹೋತ್ರಿ, ಮಾಧವಾಚಾರ್ಯ ಜೋಶಿ, ಅಖಿಲೇಶಾಚಾರ್ಯ ಚಂಗದಗಿಕರ ಚಂಡಿಹೋಮ ನಡೆಸಿ ಕೊಟ್ಟರು.
ಸವಿತಾ ಏಳಸಂಗ ಮತ್ತು ಬಸವರಾಜ ಏಳಸಂಗ ಚಂಡಿಹೋಮದಲ್ಲಿ ಪಾಲ್ಗೊಂಡಿದ್ದರು.
ಇಂಡಿಯ ಅರ್ಚಕ ಶಿವಾನಂದ ಪೂಜಾರಿ, ಶಾಂತು ಪೂಜಾರಿ,
ರಮೇಶ ಸುಲಾಖೆ, ಕಿರಣ ಬಳಮಕರ, ಸುಭಾಸ ಬಳಮಕರ, ಬಾಬು ಸುಲಾಖೆ, ಅಮರ ಪತಂಗೆ, ಗಣೇಶ ಮಹೀಂದ್ರಕರ, ಸುನೀಲ ಸುಲಾಖೆ, ಬಾಪು ಮಹೀಂಧ್ರಕರ, ಬಾಳು ಕಠಾರೆ, ಸಂಕೇತ ಮಹೀಂದ್ರಕರ, ಕೀರ್ತನ ಮಹೀಂದ್ರಕರ ಮತ್ತಿತರಿದ್ದರು.
ಚಂಡಿಹೋಮ ನಂತರ ಉಡಿ ತುಂಬುವ ಕಾರ್ಯಕ್ರಮ, ಆಶೀರ್ವಾದ ಮತ್ತು ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು.

