ಅಖಿಲ ಭಾರತ ಶಿಕ್ಷಕರ ಪೆಡರೇಷನ್ ಯೋಜನೆ ರೂಪಿಸುವ ಸಂಭವ
ನವದೆಹಲಿ: ಹಳೇ ಪಿಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ ಭಾರತ ಬಂದ್ ನಡೆಸಲು ಅಖಿಲ ಭಾರತ ಶಿಕ್ಷಕರ ಪೆಡರೇಷನ್ ಯೋಜನೆ ರೂಪಿಸುವ ಸಂಭವವಿದೆ ಎಂದು ಪೆಡರೇಶನ್ ವಿವಿಧ ರಾಜ್ಯಗಳ ಪದಾಧಿಕಾರಿಗಳು ನವದೆಹಲಿಯ ಸಿರಿ ಪೊರ್ಟ ಅಡಿಟೊರಿಯಂನಲ್ಲಿ ಗುರುವಾರ ನಡೆದ ಅಖಿಲ ಭಾರತ ಶಿಕ್ಷಕರ ಪೆಡರೇಷನ ಆರಂಭಿಸಿದ ಭಾರತ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ತಿರ್ಮಾನಿಸಿದರು.
ಬ್ರಹತ್ ಸಭೆ ಜರುಗಿಸುವ ಮುಖಾಂತರ ತಕ್ಷಣ ಹಳೇ ಪಿಂಚಣಿ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಕೊಳ್ಳಬೇಕೆಂದು ಸಭೆ ಒತ್ತಾಯಿಸಿತು. ಕನ್ಯಾಕುಮಾರಿಯಿಂದ ಆರಂಭವಾದ ಭಾರತ ಯಾತ್ರೆ ಹತ್ತು ಸಾವಿರ ಕೀಮಿ ಸಂಚರಿಸಿದೆ. ಇದೇ ಅಸ್ಸಾಂದ ಗೌಹಾಟಿಯಿಂದ ನವದೆಹಲಿ, ಪಂಜಾಬದ ವಾಘಾ ಬರ್ಡಾರದಿಂದ ನವದೆಹಲಿ, ಗುಜರಾತಿನ ಸೋಮನಾತಪುರದಿಂದ ನವದೆಹಲಿವರೆಗೆ ನಾಲ್ಕು ತಂಡಗಳಲ್ಲಿ ಭಾರತ ಯಾತ್ರೆ ಜರುಗಿದೆ. ಎಲ್ಲ ರಾಜ್ಯಗಳಲ್ಲಿ ಉತ್ತಮವಾದ ಯಶ್ವಸನ್ನು ಸಾಧಿಸಿದೆ. ಹಳೇ ಪಿಂಚಣಿ ಯೋಜನೆ ಜಾರಿಗೊಳಿಸುವದು ಸೇರಿದಂತೆ, ಇನ್ನಿತರ ನಾಲ್ಕು ಬೇಡಿಕೆಗಳನ್ನು ಈಡೇರಿ ಸುವಂತೆ ಸರಕಾರವನ್ನು ಒತ್ತಾಯಿಸಿತು.
ಅಂತರರಾಷ್ಟ್ರೀಯ ಶಿಕ್ಷಕ ಸಂಘಟನೆಯು ಅದಕ್ಕೆ ಸುಸ್ಮನ್ ಹೂ ಪಡ್ ಕಾರ್ಯದರ್ಶಿ ರಾಬರ್ಟ್, ಉಪಾಧ್ಯಕ್ಷೆ ಕರೆನಾ ಪದಾದಿಕಾರಿಗಳು ಎಐಟಿಎಪ್ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ, ಮಹಾಪ್ರಧಾನ ಕಾರ್ಯದರ್ಶಿ ಕಮಲ ಕಾಂತ ತ್ರಿಪಾಠಿ ಹರಿಗೋವಿಂದನ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರ ಶೇಖರ ನುಗ್ಗಲಿ, ರಾಮ ಚಂದ್ರಬಾಸ್ ಲ, ಸೀಮಾ ಮಾತುರ, ರಮಾದೇವಿ ರೇಲ್ವೆ ಯೂನಿಯನ್ ಅಧ್ಯಕ್ಷ ಶಿವಪಾಲ್ ಮಿಶ್ರಾ ರೋನಿ ರೋಶನ್ ಮಾತನಾಡಿದರು.
ಈ ಸಂದರ್ಭದಲ್ಲಿ ಧಾರವಾಡ ಜಿಲ್ಲೆಯ ಅಧ್ಯಕ್ಷರಾದ ವಿ.ಎಫ್.ಚುಳಕಿರವರು, ಮಂಜುನಾಥ ಜಂಗ್ಲಿ, ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ತಾಲ್ಲೂಗಳಿಂದ ಎನ್ಪಿಎಸ್ ನೌಕರರು ಭಾಗವಹಿಸಿದ್ದರು.