ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ತಾಲೂಕಿನಿಂದ ಡಾ ಬಿ ಆರ್ ಅಂಬೇಡ್ಕರ್ ಅವರು ಬೌದ್ಧ ಧರ್ಮದ ದಿಕ್ಷೆಯನ್ನು ಪಡೆದ ಪವಿತ್ರ ಭೂಮಿ ನಾಗಪುರ ಕ್ಕೆ ಹೋಗುತ್ತಿರುವ ಯಾತ್ರಾರ್ಥಿಗಳು ಭಾರತ ರತ್ನ , ಡಾ ಬಿ ಆರ್ ಅಂಬೇಡ್ಕರ್ ಅವರ ಜೀವನದ ಸಿದ್ಧಾಂತಗಳನ್ನು , ಆದರ್ಶಗಳನ್ನು ಪಾಲಿಸಬೇಕು, ಆ ಪುಣ್ಯ ಭೂಮಿಯನ್ನು ಸ್ಪರ್ಶಿಸುವವರು ಪುಣ್ಯವಂತರೆಂದು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಆಯ್ಕೆಗೊಂಡು ನಾಗಪುರ ದೀಕ್ಷಾ ಭೂಮಿ ಗೆ ತೆರಳುತ್ತಿರುವ ಬಸ್ಸ್ ಗೆ ಯುವ ನಾಯಕ ಸತ್ಯಜೀತ್ ಪಾಟೀಲ್ ಅವರು ಚಾಲನೆ ನೀಡಿ ಶುಭಹಾರೈಸಿದರು.
ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಸಿ ಎಸ್ ಗಿಡಪ್ಪಗೋಳ, ಕಲ್ಲು ದೇಸಾಯಿ, ಆರ್ ಬಿ ಪಕಾಲಿ, ತಾನಾಜಿ ನಾಗರಾಳ, ಶಿವಾನಂದ ಅಂಗಡಿ, ದಶರಥ ಈಟಿ, ಮಾರುತಿ ಕುದರಿ , ಶೇಖು ಈಟಿ, ಸಚಿನ್ ಈಟಿ, ಮುತ್ತು ಕೊರ್ತಿ, ಯಮನೂರಿ ಮಾದರಿ, ಮಲ್ಲು ಪೂಜಾರಿ, ತಾಲೂಕಿನ ಡಿಎಸ್ ಎಸ್ ಮುಖಂಡರು ಹಾಗೂ ತಹಶೀಲ್ದಾರ್ ಸಂತೋಷ ಮ್ಯಾಗೇರಿ, ಕಾರ್ಯನಿರ್ವಾಹಕ ಅಧಿಕಾರಿಗಳಾದ ಸುನೀಲ್ ಮದ್ದೀನ್, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ವೀರೇಶ್ ಹಟ್ಟಿ, ಪಟ್ಟಣ ಪಂಚಾಯತ್ ಸದಸ್ಯರು, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಮಂಜು ಹಿರೇಮನಿ, ಬಸವರಾಜ ಚಲವಾದಿ, ಸೈಫಾನ್ ಕೊರ್ತಿ, ಮನು ಪತ್ತಾರ ಕಲಕೇರಿ, ಲಕ್ಷ್ಮಣ್ ಕುಂಬಾರ, ಧರೆಪ್ಪ ಚವಾಣ್, ಪರಸು ಕಲಾದಗಿ, ತಿಪ್ಪಣ್ಣ ಕುದರಿ ಮುಂತಾದವರು ಉಪಸ್ಥಿತರಿದ್ದರು.

