ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಗ್ರಾಹಕರೇ ನಮ್ಮ ಸಂಸ್ಥೆಯ ಜೀವಾಳವಾಗಿದ್ದು, 2024-25ನೇ ಸಾಲಿನಲ್ಲಿ 25.59 ಲಕ್ಷ ಲಾಭ ಮಾಡಿ,ಶೇಕಡಾ 15 ರಂತೆ ಲಾಭಾಂಶ ಸದಸ್ಯರುಗಳ ಶೇರ ಮೇಲೆ ಹಂಚಿಕೆ ಮಾಡಲಾಗುತ್ತದೆ ಎಂದು ದಿ ಕರ್ನಾಟಕ ಕೋ-ಆಪ್ ಕ್ರೆಡಿಟ್ ಸೊಸೈಟಿ ಲಿ,ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಹೇಳಿದರು.
ಅವರು ರವಿವಾರದಂದು ನಗರದ ವನಶ್ರೀ ಭವನದಲ್ಲಿ
ದಿ ಕರ್ನಾಟಕ ಕೋ-ಆಪ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ನ 25ನೇ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಬ್ಯಾಂಕು ಸದಸ್ಯರಿಗೆ ಆರ್ಥಿಕ ಸೌಲಭ್ಯಗಳನ್ನು ನೀಡುವ ಮೂಲಕ ಅವರಿಗೆ ಲಾಭದಾಯಕವಾದ ಬದುಕನ್ನು ರೂಪಿಸಿಕೊಳ್ಳಲು ಸಹಕರಿಸುತ್ತಿದೆ ಎಂದು ಹೇಳಿದರು.
ನಿರ್ದೇಶಕ ಎಸ್ ಎಸ್ ಶಿರಾಡೋಣ ಮಾತನಾಡಿ,
ನಮ್ಮ ಸೊಸೈಟಿಯಲ್ಲಿ ಗ್ರಾಹಕರ ಧರ್ಮ, ಲಿಂಗ ಮತ್ತು ಜಾತಿಯನ್ನು ಲೆಕ್ಕಿಸದೇ, ಸದಸ್ಯತ್ವವು ಎಲ್ಲರಿಗೂ ಮುಕ್ತವಾಗಿದೆ. ಇದು ಎಲ್ಲರ ಶ್ರೇಯೋಭಿವೃದ್ಧಿ ಬಯಸುವ ಸೊಸಾಯಿಟಿ ಆಗಿದೆ ಎಂದು ಹೇಳಿದರು.
ನಿರ್ದೇಶಕರಾದ ಬಿ ಜಿ ಪಾಟೀಲ ಹಲಸಂಗಿ, ಎಸ್ ಎಸ್ ಶಿರಾಡೋಣ, ಜಿ ಟಿ ಪಾಟೀಲ, ಎ ಎಸ್ ಹೊಸಮನಿ, ಎಸ್ ಡಿ ಶಹಾಪೇಟಿ,ಎಸ್ ಸಿ ಸಜ್ಜನ, ಎನ್ ಎ ಕೊಂಡಗೂಳಿ,ಎಸ್ ವ್ಹಿ ಕತ್ನಳ್ಳಿ,ವ್ಹಿ ಎಸ್ ಹತ್ತಳ್ಳಿ, ವ್ಹಿ ಸಿ ರಾಯಚೂರ ಹಾಗೂ ವಿವಿಧ ಶಾಖೆಯ ಗೌರವ ಸಲಹೆಗಾರರಾದ ಕಾಶೀಬಾಯಿ ವಾಲೀಕಾರ, ಭೂಮಣ್ಣ ಪಾಸೋಡಿ, ಬಾಬುಗೌಡ ಪಾಟೀಲ, ಸೋಮಣ್ಣ ಬಾಗಲಕೋಟ, ವ್ಯವಸ್ಥಾಪಕಿ ಶಕುಂತಲಾ ಮಿಶೆನ್ನವರ ಸೇರಿದಂತೆ ಎಲ್ಲ ಶಾಖೆಯ ಸಿಬ್ಬಂದಿ ವರ್ಗದವರು, ಸದಸ್ಯರು ಉಪಸ್ಥಿತರಿದ್ದರು.
ವಿಶೇಷ ಸಾಧಕರನ್ನು, ಉತ್ತಮ ಗ್ರಾಹಕರನ್ನು ಹಾಗೂ ವಿವಿಧ ಶಾಖೆಯ ಗೌರವ ಸಲಹೆಗಾರರನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷ ಆರ್ ಎಲ್ ಇಂಗಳೇಶ್ವರ ಸ್ವಾಗತಿಸಿದರು. ಶಿಕ್ಷಕ ಸಂತೋಷ ಬಂಡೆ ನಿರ್ವಹಿಸಿದರು. ನಿರ್ದೇಶಕ ಎಸ್ ಎಸ್ ಅರಕೇರಿ ವಂದಿಸಿದರು. ಸಂಗೀತ ಶಿಕ್ಷಕ ಬಾಬಾಸಾಹೇಬ ಕಾಂಬಳೆ ಸ್ವಾಗತ ಗೀತೆ ಹಾಡಿದರು.

