ವಿಜಯಪುರ: ಸಾರ್ವಜನಿಕ ಜಿಲ್ಲಾ ಆಸ್ಪತ್ರೆಗೆ ಗುರುವಾರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಭೇಟಿ ನೀಡಿ ಹೆರಿಗೆ ವಾರ್ಡ್, ಬಾಣಂತಿಯರ ವಾರ್ಡ್ , ನವಜಾತ ಶಿಶುಗಳ ತೀವ್ರ ನಿಗಾ ಘಟಕ, ಕಾಂಗ್ರೊ ಮದರ್ ಕೇರ್, ಮಕ್ಕಳ ಪೌಷ್ಟಿಕ ಪುನಶ್ಚೇತನ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವೈದ್ಯರೊಂದಿಗೆ ವ್ಯವಸ್ಥೆ ಕುರಿತು ಚರ್ಚಿಸಿದರು.
ಆಸ್ಪತ್ರೆಯ ಬಾಣಂತಿಯರ ವಾರ್ಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಬಾಣಂತಿಯರಿಗೆ ಸ್ನಾನಕ್ಕಾಗಿ ಬಿಸಿ ನೀರು, ಸರಿಯಾದ ಬೆಡ್ ವ್ಯವಸ್ಥೆ, ಬೆಡ್‌ಶಿಟ್, ಶುದ್ಧ ಕುಡಿಯುವ ನೀರು ಸೇರಿದಂತೆ ಬಾಣಂತಿಯರಿಗೆ ಆರೈಕೆಯಲ್ಲಿ ಯಾವುದೇ ಕೊರತೆಯಾಗದಂತೆ ನಿಷ್ಕಾಳಜಿ ವಹಿಸದೇ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು.
ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಒಂದು ವಾರ್ಮರ್ಸ್ನಲ್ಲಿ ಎರಡು ಮಕ್ಕಳ ವೈದ್ಯಕೀಯ ಉಪಚಾರ ಮಾಡಬಾರದೆಂದು ವೈದ್ಯಾಧಿಕಾರಿಗಳಿಗೆ ತಿಳಿಸಿದರು. ನವಜಾತಾ ಶಿಶುಗಳ ಆರೈಕೆಯ ಸಲಕರಣಿಗಳು, ವಾರ್ಮರ್ಸ್, ಫೋಟೋ ತೆರೆಫಿ ಯೂನಿಟ್, ಇನ್ಫೂಜನ್ ಪಂಪ್, ಟ್ರಾನ್ಫೋಟ್ ಇನ್ ಕ್ಯೂಬೆಟರ್ ಸೇರಿದಂತೆ ಎಲ್ಲ ಸಲಕರಣೆಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವಂತೆ ಸೂಚಿಸಿದರು.
ನವಜಾತ ಶಿಶುಗಳ ತೀವ್ರ ನಿಗಾ ಘಟಕ ಸೇರಿದಂತೆ ಆಸ್ಪತ್ರೆಯ ವಿವಿಧ ಘಟಕಗಳ ಹೊರಗಡೆ ಮಕ್ಕಳ ಸುರಕ್ಷಿತಾ ದೃಷ್ಟಿಯಿಂದ ಸಿ ಸಿ ಕ್ಯಾಮೆರಾಗಳ ಅಳವಡಿಕೆ ವ್ಯವಸ್ಥೆಗೆ ಈ ಮೊದಲೇ ಸೂಚಿಸಿದ ಹಿನ್ನಲೆಯಲ್ಲಿ ಕೂಡಲೇ ಕ್ರಮ ವಹಿಸಬೇಕು. ಪೌಷ್ಟಿಕ ಪುನಶ್ಚೇತನ ಘಟಕದಲ್ಲಿ ಶುದ್ಧ ಕುಡಿಯುವ ನೀರು, ಪೌಷ್ಠಿಕವಾದ ಹಣ್ಣು ಒದಗಿಸಬೇಕು. ಘಟಕದಲ್ಲಿ ಸ್ವಚ್ಛತೆಯನ್ನು ಕಾಪಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಸಂದರ್ಭಧಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಾವಿತ್ರಿ ಗುಗ್ಗರಿ, ಸಮಾಜ ಕಾರ್ಯಕರ್ತ ಗುರುರಾಜ ಇಟಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸರ್ಕಾರಿ ಆಸ್ಪತ್ರೆಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಕೋಸಂಬೆ ಭೇಟಿ
Related Posts
Add A Comment