ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ತಾಲ್ಲೂಕಿನ ಭೈರವಾಡಗಿ ಗ್ರಾಮದ ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ದಶಮಾನೋತ್ಸವ ಹಾಗೂ ಸಹಕಾರಿಸೌಧ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಗ್ರಾಮದ ಸಾಹಿತಿ ಸಂಗಮೇಶ ಕೆರೆಪ್ಪಗೋಳ ರಚಿಸಿದ “ಭೈರವಾಡಗಿ ಪ್ರದಕ್ಷಿಣ ಕೈಲಾಸ ದರ್ಶನ(ಚರಿತ್ರೆ ಗ್ರಂಥ) ಪುಸ್ತಕವನ್ನು ಕೃಷಿ ಮಾರುಕಟ್ಟೆ ಸಚಿವ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಸಂಘದ ಸಂಸ್ಥಾಪಕ ಅಧ್ಯಕ್ಷ ಗುರುಪ್ರಸಾದ ಸ್ವಾಮೀಜಿ ಹಾಗೂ ನಿರ್ದೇಶಕರು ಇದ್ದರು.

