ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪುರುಷರ ದೈಹಿಕ ಸಾಮರ್ಥ್ಯವನ್ನು ಮತ್ತು ಮಹಿಳೆಯರ ಜ್ಞಾನ ವೃದ್ದಿಯನ್ನು ಕಲೆಯನ್ನು ಬಿಂಬಿಸಲು ಕಲಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಂಡಾಗ ಮಾತ್ರ ಸಾಧ್ಯವಾಗುತ್ತದೆ ಇದು ನಮ್ಮ ಹಿರಿಯರು ಹಾಕಿಕೊಟ್ಟ ಗ್ರಾಮೀಣ ಪ್ರದೇಶದ ಆಟಗಳಲ್ಲಿ ಒಂದಾಗಿವೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಪಟ್ಟಣದ ಸರಕಾರಿ ಕನ್ನಡ ಗಂಡುಮಕ್ಕಳ ಶಾಲಾ ಆವರಣದಲ್ಲಿ ಗ್ರಾಮೀಣ ಆಟಗಳಲ್ಲಿ ಒಂದಾದ ಹಗ್ಗ ಜಗ್ಗಾಟ, ಮತ್ತು ರಂಗೋಲಿ ಸ್ಪರ್ದೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ರಂಗೋಲಿ ಬಿಡಿಸುವದು ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸುವದಲ್ಲದೇ ಕಲೆಯ ಅನಾವರಣವನ್ನು ನಾಡಿಗೆ ಪರಿಚಯಿಸುವದಾಗಿದ್ದರೆ ಹಗ್ಗ ಜಗ್ಗಾಟ ಪುರುಷರ ಕೌಶಲ್ಯವನ್ನು ಎತ್ತಿ ತೋರಿಸುತ್ತದೆ ಎಂದರು.
ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ ಪ್ರದಾನಿ ನರೇಂದ್ರ ಮೋದಿಯವರ ಸಂಕಲ್ಪದಂತೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಗ್ರಾಮೀಣ ಆಟಗಳನ್ನು ಇಂದಿನ ಯುವಕರು ಮರೆಯಬಾರದು ಅಂತಹ ಹಳೆಯ ಆಟಗಳಲ್ಲಿ ಅವರು ತೊಡಗಿಕೊಂಡು ಉತ್ತೇಜನ ಪಡೆಯುವಂತಾಗಲು ಹಗ್ಗ ಜಗ್ಗಾಟ ಕುಸ್ತಿ ಕಬಡ್ಡಿ ಇನ್ನೀತರ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವ ಕ್ರೀಡೆಗಳನ್ನು ಪರಿಚಯಿಸುವದಲ್ಲದೇ ಪಾಲ್ಗೊಳ್ಳುವಂತೆ ಮಾಡುವದೇ ಉದ್ದೇಶವಾಗಿದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು, ಜಿಲ್ಲಾ ಬಜೆಪಿ ಅಧ್ಯಕ್ಷ ಗುರಲಿಂಗಪ್ಪ ಅಂಗಡಿ, ಪಟ್ಟಣ ಪಂಚಾಯತ ಸದಸ್ಯ ಬಾಬು ಭಜಂತ್ರಿ, ಮಾಜಿ ಅಧ್ಯಕ್ಷ ಕಲ್ಲಪ್ಪ ಸಿ ಸೊನ್ನದ, ಪುಂಡಲೀಕ ಬಾಟಿ, ಮಲ್ಲಿಕಾರ್ಜುನ ಬೆಳ್ಳುಬ್ಬಿ, ಚಂದ್ರಶೇಖರಯ್ಯ ಗಣಕುಮಾರ, ಟಿ.ಟಿ.ಹಗೇಧಾಳ, ಶ್ರೀಶೈಲ ಉಪ್ಪಲದಿನ್ನಿ ಅನೇಕರು ಉಪಸ್ಥಿತರಿದ್ದರು.

