ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಿ.ಎಲ್.ಡಿ.ಇ ಡಿಮ್ಡ್ ವಿಶ್ವವಿದ್ಯಾನಿಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಕಾಲೇಜು ಆಸ್ಪತ್ರೆ ಹಾಗೂ ಸಂಶೋಧನೆ ಕೇಂದ್ರದ ಹೃದಯ ರೋಗ ಹಾಗೂ ಹೃದಯ ರೋಗ ಶಾಸ್ತ್ರ ಚಿಕಿತ್ಸೆ ವಿಭಾಗದ ವತಿಯಿಂದ ವಿಶ್ವ ಹೃದಯ ದಿನ ಅಂಗವಾಗಿ ವಾಕಥಾನ ಕಾರ್ಯಕ್ರಮ ಸೋಮವಾರ ನಡೆಯಿತು.
ಹೃದಯರೋಗ ವಿಭಾಗದ ತಜ್ಞ ವೈದ್ಯ ಡಾ. ಸಂಜೀವ ಸಜ್ಜನರ ವಾಕಥಾನ್ ಗೆ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಹೃದಯ ಶಸ್ತ್ರಚಿಕಿತ್ಸಕ ಡಾ.ರವಿ ಗಟ್ನಟ್ಟಿ, ಇಂದಿನ ಕಲುಷಿತ ದಿನಮಾನಗಳಲ್ಲಿ ವಿಷಯುಕ್ತ ಆಹಾರ, ಗಾಳಿ, ನೀರು ಜೀವನ ಶೈಲಿಯ ಚಟುವಟಿಕೆಗಳಿಂದ ಹೃದಯ ರೋಗ ಮತ್ತು ಅದಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುತ್ತಿವೆ. ಹೃದಯಾಘಾತ, ಬಿಪಿ, ಶುಗರದಂಥ ರೋಗಗಳಿಗೆ ಜನರು ಬಲಿಯಾಗುತ್ತಿದ್ದಾರೆ. ಇವುಗಳಿಂದ ಆರೋಗ್ಯ ಕಾಪಾಡಿಕೊಳ್ಳಲು ಯೋಗ, ವ್ಯಾಯಾಮ, ಧ್ಯಾನ ಮುಂತಾದ ಜೀವನ ಶೈಲಿಗಳ ಚಟುವಟಿಕೆಗಳನ್ನೂ ಅಳವಡಿಸಿಕೊಳ್ಳಬೇಕು. ಈ ಮೂಲಕ ಆರೋಗ್ಯಯುತ ಸಮಾಜ ಕಟ್ಟಲು ಸಾಧ್ಯ. ಪ್ರತಿಯೊಬ್ಬರು ಕನಿಷ್ಠ ಆರು ತಿಂಗಳಿಗೊಮ್ಮೆ ಒಮ್ಮೆಯಾದರೂ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಡಿಮ್ಡ್ ವಿವಿ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಹಿರಿಯ ಪ್ರಭಾರ ಪ್ರಾಂಶುಪಾಲ ವಿಜಯಕುಮಾರ ಕಲ್ಯಾಣಪ್ಪಗೊಳ, ಡಾ. ಎಸ್. ವಿ. ಪಾಟೀಲ, ಡಾ. ಮಡಿವಾಳಸ್ವಾಮಿ ಡವಳಗಿಮಠ, ಆಸ್ಪತ್ರೆಯ ಬೋಧಕ ಮತ್ತು ಬೋಧಕರ ಹೊರತಾದ ಸಿಬ್ಬಂದಿ, ವೈದ್ಯಕೀಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಗರದ ಬಿ.ಎಲ್.ಡಿ. ಇ ಡಿಮ್ಡ್ ವಿವಿಯಿಂದ ಪ್ರಾರಂಭವಾದ ವಾಕಥಾನ್ ಜಾಥಾ ಶ್ರೀ ಸಿದ್ದೇಶ್ವರ ದೇವಸ್ಥಾನದವರೆಗೆ ನಡೆಯಿತು.
ಈ ವೇಳೆ ಆರೋಗ್ಯದ ಕುರಿತು ಕಿರು ನಾಟಕ ಮತ್ತು ಘೋಷಣೆ ಹಾಕುವ ಮೂಲಕ. ಜನರಲ್ಲಿ ಆರೋಗ್ಯದ ಅರಿವು ಮೂಡಿಸಲಾಯಿತು.

