ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಕಳೆದ 15 ದಿನಗಳಿಂದ ಸತತವಾಗಿ ಏರು ಮುಖವಾಗಿ ಸಾಗಿ ಪ್ರವಾಹ ಪರಿಸ್ಥಿತಿ ತಂದೊಡ್ಡಿದ್ದ ಭೀಮಾ ನದಿಯ ನೀರು ಶನಿವಾರ ಮತ್ತು ರವಿವಾರ ಇಳಿಮುಖ ಕಂಡಿದ್ದರಿಂದ ಜನತೆಯಲ್ಲಿ ನಿರಾಳ ಭಾವ ಉಂಟಾಗಿದೆ.
ಶನಿವಾರ ದಿವಸ 3 ಲಕ್ಷ ಕ್ಯೂಸೆಕ್ ನೀರು ಹರಿಯುತ್ತಿದ್ದ ಅಭಿಮಾನದಿಯಲ್ಲಿ ಸ್ವಲ್ಪಮಟ್ಟಿಗೆ ಕಡಿಮೆಯಾಗಿ ರವಿವಾರ ದಿನ 2 ಲಕ್ಷ 80 ಸಾವಿರ ಕ್ಯೂಸೆಕ್ಸ್ ನೀರು ಹರಿಯುತ್ತಿದೆ
ಆಲಮೇಲ ತಾಲೂಕಿನ ದೇವಣಗಾಂವ ಸಮೀಪದ ಸೊನ್ನ ಬ್ಯಾರೇಜ್ ನಲ್ಲಿ ಒಟ್ಟು 28 ಗೇಟುಗಳ ಮೂಲಕ 2 ಲಕ್ಷ 80 ಸಾವಿರ ಕ್ಯೂಸೆಕ್ಸ್ ನೀರು ಹೊರ ಬಿಡಲಾಗುತ್ತಿದೆ ಬ್ಯಾರೇಜ್ ಗೆ ಅಷ್ಟೇ ಪ್ರಮಾಣದ ಒಳಹರಿವು ಕೂಡ ಇದೆ ಎಂದು ಅಫಜಲಪುರ ಕೆಎನ್ಎನ್ಎಲ್ ಎ ಇ ಇ ಸಂತೋಷಕುಮಾರ ಸಜ್ಜನ ತಿಳಿಸಿದ್ದಾರೆ.
ಉಜನಿ ಜಲಾಶಯದಿಂದ ಬಿಡಲಾಗಿರುವ ಒಂದು ಲಕ್ಷ ಕ್ಯೂಸೆಕ್, ಸೀನಾ ನದಿಯಿಂದ ರೂ.1 ಲಕ್ಷ 50 ಸಾವಿರ ಕ್ಯೂಸೆಕ್ಸ್, ಬೋರಿ ಹಳ್ಳ ಮತ್ತು ಕರ್ನಾಟಕ ಮಹಾರಾಷ್ಟ್ರದ ಭೀಮಾ ನದಿ ಪಾತ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ರೂ.30 ಸಾವಿರ ಕ್ಯೂಸೆಕ್ಸ್ ನೀರು ಸದ್ಯ ನದಿಯಲ್ಲಿ ಹರಿಯುತ್ತಿದೆ.
ಭೀಮಾ ನದಿಯ ಪ್ರವಾಹಕ್ಕೆ ಒಳಗಾಗಿರುವ ಗ್ರಾಮಗಳಾದ ತಾರಾಪುರ, ತಾವರಖೇಡ, ದೇವಣಗಾಂವ, ಕುಮಸಗಿ, ಶಂಭೇವಾಡ, ಗ್ರಾಮಗಳಲ್ಲಿ ಪ್ರವಾಹ ಸಂತ್ರಸ್ತರು ಈಗಲೂ ಕಾಳಜಿ ಕೇಂದ್ರದಲ್ಲಿ ಇದ್ದಾರೆ ಎಲ್ಲೆಂದರಲ್ಲಿ ಹೊಕ್ಕು ಜಮೀನುಗಳನ್ನು ನಾಶ ಮಾಡಿರುವ ನೀರು ಈಗಲೂ ಕೂಡ ಜಮೀನುಗಳಲ್ಲಿಯೇ ಉಳಿದುಕೊಂಡಿದೆ ಮಳೆಯ ಪ್ರಮಾಣ ಕಡಿಮೆಯಾದರೆ ಮಾತ್ರ ಪ್ರವಾಹ ಭಯದಿಂದ ಸಂತ್ರಸ್ತರು ಹೊರಗೆ ಬರಲು ಸಾಧ್ಯ ವಿದೆ.

