ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪೌರ ಕಾರ್ಮಿಕ ದಿನಾಚರಣೆ ಅಂಗವಾಗಿ ಸ್ದಳೀಯ ಪಟ್ಟಣ ಪಂಚಾಯತ ಕಾರ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮೀಕರನ್ನು ಗೌರವ ಪೂರ್ವಕವಾಗಿ ಸತ್ಕರಿಸಲಾಯಿತು.
ಈ ಸಮಯದಲ್ಲಿ ಸರಕಾರದಿಂದ ಪೌರಕಾರ್ಮೀಕರಿಗೆ ಕೊಡಮಾಡಿದ ಕಿಟ್ ಮತ್ತು ಧನ ಸಹಾಯವನ್ನು ಒದಗಿಸಲಾಯಿತು.
ಒಂದು ಊರು ಪಟ್ಟಣ ನಗರ ಮಹಾನಗರ ಪಾಲಿಕೆಗಳು ಸ್ವಚ್ಛಂದ ಸುಂದರವಾಗಿ ಕಾಣಲು ಬೆಳಗಿನ ಜಾವ ಎದ್ದು ನಿತ್ಯ ಕಾಯಕವಾದ ಕಸಗುಡಿಸುವದು ಮನೆಗಳಲ್ಲಿ ಅಂಗಡಿಗಳಲ್ಲಿ ಇನ್ನಿತರ ಕಡೆ ಹಾಕುವ ಕಸವನ್ನು ದೂರದಲ್ಲಿ ಸಾಗಿಸಿ ಊರಿನಲ್ಲಿ ಸ್ವಚ್ಚತೆ ಕಾಪಾಡುವ ಶ್ರಮಜೀವಿಗಳೇ ಪೌರಕಾರ್ಮೀಕರು ಎಂದು ಮುಖ್ಯಾಧಿಕಾರಿ ವಿರೇಶ ಹಟ್ಟಿ ಹೇಳಿದರು.
ಪಟ್ಟಣ ಪಂಚಾಯತ ಅಧ್ಯಕ್ಷ ಚನಮಲ್ಲಪ್ಪ ಗಿಡ್ಡಪ್ಪಗೋಳ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಾಧಿಕಾರಿ ವಿರೇಶ ಹಟ್ಟಿ ಹಾಗೂ ಸಿಬ್ಬಂದಿ ವರ್ಗ, ಸದಸ್ಯರಾದ ನಿಂಗಪ್ಪ ಗಣಿ, ವಿಜಯಮಹಾಂತೇಶ ಗಿಡ್ಡಪ್ಪಗೋಳ, ತೌಸೀಪ್ ಗಿರಗಾಂವಿ, ದಸಗೀರಸಾಬ ಕಲಾದಗಿ, ಅಪ್ಪಶಿ ಮಟ್ಟಿಹಾಳ, ಬಾಬು ಭಜಂತ್ರಿ, ಮುಖಂಡರಾದ ದಶರಥ ಈಟಿ, ಮಲ್ಲು ಹೆರಕಲ, ಎಮ್.ಆರ್. ಕಲಾದಗಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

