ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಕೇಂದ್ರ ಸರ್ಕಾರ ೩೫೦ ಕ್ಕೂ ಅಧಿಕ ವಸ್ತುಗಳ ಮೇಲಿನ ಜಿ.ಎಸ್.ಟಿ ಯನ್ನು ಕಡಿತಗೊಳಿಸಿ ಜನ ಸಾಮಾನ್ಯರಿಗೆ ನೆರವಾಗಿದೆ. ಕ್ಯಾನ್ಸರ್ ರೋಗಿಗಳ ಔಷಧಿಗಳನ್ನ ತೆರಿಗೆ ಇಲ್ಲದೆ ಖರೀದಿಸಬಹು. ಹಾಗೆ ಶಿಕ್ಷಣದ ವಸ್ತುಗಳಿಗೂ ರಿಯಾಯಿತಿ ನೀಡಿ ಶೈಕ್ಷಣಿಕ ಬೆಳವಣಿಗೆಗೆ ಆದ್ಯತೆ ನೀಡಿದ್ದು ಜನ ಸಾಮಾನ್ಯರಿಗೆ ವರದಾನ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.
ಸೋಮವಾರ ಮಂಡಲ ಬಿಜೆಪಿ ವತಿಯಿಂದ ಪಟ್ಟಣದ ದ್ಯಾಮವ್ವ ದೇವಿ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಜಿ ಎಸ್ ಟಿ 2 ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಎಲ್ಲಾ ಸರ್ಕಾರಗಳು ಒಮ್ಮೆ ತೆರಿಗೆ ಏರಿಸಿದ ನಂತರ ಮುಂದಕ್ಕೆ ಹೆಚ್ಚಿಗೆ ಮಾಡಿಕೊಂಡೇ ಹೋಗುತ್ತವೆ. ಆದರೆ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ತೆರಿಗೆಯನ್ನು ಕಡಿಮೆ ಮಾಡುವ ಮೂಲಕ ದಾಖಲೆ ಬರೆದಿದೆ ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ವರ್ತಕರ ಸಂಘದ ಸದಸ್ಯರಾದ ಶಿವಾನಂದ ಶೀಲವಂತ, ಕಲ್ಲಬಸಪ್ಪ ಶಾವಿಗೊಂಡ, ಈರಯ್ಯ ಮಠಪತಿ, ಚಿನ್ನಪ್ಪ ಗಿಡ್ಡಪಗೋಳ, ಬಸಪ್ಪ ಉಪ್ಪಲದಿನ್ನಿ, ಮಲ್ಲಿಕಾರ್ಜುನ ಬೆಳ್ಳುಬ್ಬಿ, ಜಗದೀಶ ಸುನಗದ, ಮಂಜುನಾಥ ತುಂಬರಮಟ್ಟಿ, ಸವಿತಾ ಬೆಳ್ಳುಬ್ಬಿ, ಶಾಂತಾಬಾಯಿ ಬೀಳಗಿ, ಜಾವೀದ್ ಬಿಜಾಪುರ, ಬಾಬು ಭಜಂತ್ರಿ, ಅಶೋಕ ಗಿಡ್ಡಪ್ಪಗೊಳ, ಸುಭಾಸ ಭಜಂತ್ರಿ ಇತರರು ಇದ್ದರು.

