ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನಲ್ಲಿ ಹರಿಯುವ ಭೀಮಾ ನದಿಗೆ ಸೀನಾ ನದಿ ಪಾತ್ರದಿಂದ ಒಂದು ಲಕ್ಷ ಐವತ್ತು ಸಾವಿರ ಉಜನಿ ಜಲಾಶಯದಿಂದ ೫೫ ಸಾವಿರ ಮತ್ತು ನದಿ ಪಾತ್ರದ ಇತರೆ ಮೂಲಗಳಿಂದ ೪೫ ಸಾವಿರ ಒಟ್ಟು ಎರಡು ಲಕ್ಷ ಐವತ್ತು ಸಾವಿರ ನೀರು ಬಿಡಲಾಗಿದೆ ಎಂದು ಕಂದಾಯ ಉಪವಿಭಾಗಾಧಿಕಾರಿ ಅನುರಾಧಾ ವಸ್ತçದ ತಿಳಿಸಿದ್ದಾರೆ.
ಈ ನೀರು ಸೋಮವಾರ ರಾತ್ರಿ ೧೦ ಗಂಟೆಗೆ ಬಿಟ್ಟಿದ್ದು ಈಗಾಗಲೇ ಕರ್ನಾಟಕದ ನದಿ ಪಾತ್ರ ತಲುಪಿದ್ದು ಎಲ್ಲ ಗ್ರಾಮಗಳು ಸುರಕ್ಷಿತ ಇವೆ. ಯಾವದೇ ಪ್ರದೇಶದಲ್ಲಿ ನೀರು ಹೋದ ವರದಿ ಇಲ್ಲ. ನಾನು ಖುದ್ದಾಗಿ ಭ್ಯೂಯ್ಯಾರ ಹಲವಾರು ಗ್ರಾಮಗಳಿಗೆ ಭೇಟಿ ನಿಡಿದ್ದೇನೆ.ಮತ್ತು ತಹಸೀಲ್ದಾರರು ಸೇರಿದಂತೆ ಇತರೆ ತಂಡ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ವರದಿ ಸಂಗ್ರಹಿಸಲಾಗುತ್ತಿದೆ.
ಎಲ್ಲ ಪಿಡಿಓಗಳನ್ನು ಗ್ರಾಮದಲ್ಲಿಯೇ ಠಿಕಾಣಿ ಹೂಡಲು ತಿಳಿಸಲಾಗಿದೆ. ಗ್ರಾಮಸ್ಥರು ಪಿಡಿಓ ಇಲ್ಲ ಎಂದು ತಿಳಿಸಿದರೆ ಅಂತಹ ಪಿಡಿಒಗಳ ಮೇಲೆ ಕ್ರಮ ಜರುಗಿಸಲಾಗುವದು ಎಂದರು.
ಜನರು ಜಾಗೃತಿ ಯಿಂದ ಇದ್ದು ಪರಿಸ್ಥಿತಿ ಎದುರಿಸುವ ಅವಶ್ಯಕತೆ ಇದೆ. ತಮ್ಮ ಸಮಸ್ಯೆಗೆ ಕೂಡಲೇ ಸ್ಪಂದಿಸಲು ತಿಳಿಸಲಾಗಿದೆ ಎಂದರು.
ಮಣೂರ ಯಲ್ಲಮ್ಮಾ ದೇವಸ್ಥಾನಕ್ಕೆ ಹೋಗಲು ಬ್ರಿಡ್ಜ ಮೇಲೆ ನೀರು ಬಂದಿದ್ದು ದಸರಾ ನಿಮಿತ್ಯ ದೂರದಿಂದಲೇ ದರ್ಶನ ಪಡೆಯಬೇಕು ಎಂದು ಎಸಿ ಅನುರಾಧಾ ತಿಳಿಸಿದ್ದಾರೆ.

