ತಿಕೋಟಾ ಬಿ.ಎಲ್.ಡಿ.ಇ ನೂತನ ಕಲಾ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ
ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಬಿ.ಎಲ್.ಡಿ.ಇ. ಸಂಸ್ಥೆಯ ನೂತನ ಕಲಾ ಮಹಾವಿದ್ಯಾಲಯದಲ್ಲಿ ಬುಧವಾರ ಕಾಲೇಜಿನ ಎನ್.ಎಸ್.ಎಸ್. ಘಟಕ, ವೈ .ಆರ್. ಸಿ, ಅಲುಮಿನಿ ಹಾಗೂ ಶ್ರೀ ಬಿ.ಎಂ. ಪಾಟೀಲ್ ಮೆಡಿಕಲ್ ಕಾಲೇಜು ಹಾಗೂ ಸಂಶೋಧನಾ ಕೇಂದ್ರ ಇವರ ಸಹಯೋಗದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ.ಎಸ್.ತೋಳನೂರ ಮಾತನಾಡಿ, ರಕ್ತದಾನದಿಂದ ಒಂದು ಜೀವದ ರಕ್ಷಣೆಯನ್ನು ಮಾಡಿದಂತಾಗುತ್ತದೆ. ಎಲ್ಲ ರೀತಿಯ ದಾನಗಳಲ್ಲಿ ರಕ್ತದಾನ ಬಹಳ ಶ್ರೇಷ್ಠವಾಗಿದೆ. ಇದು ಕೇವಲ ದಾನ ಪರಂಪರೆ ಅಷ್ಟೇ ಅಲ್ಲದೆ ದಾನ ನೀಡುವ ವ್ಯಕ್ತಿಯ ಆರೋಗ್ಯದ ಸುರಕ್ಷತೆಯ ದೃಷ್ಟಿಯಿಂದಲೂ ಬಹಳ ಮಹತ್ವವನ್ನು ಪಡೆದಿದೆ. ಹೀಗಾಗಿ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡುವುದು ಅತ್ಯಂತ ಸೂಕ್ತವೆನಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಬಿ.ಎಂ. ಪಾಟೀಲ ಆಸ್ಪತ್ರೆ, ಮೆಡಿಕಲ್ ಕಾಲೇಜಿನ ವೈದ್ಯರಾದ ಡಾ. ಸತೀಶ ಅರೆಕೇರಿ, ಆರೋಗ್ಯ ಸಿಬ್ಬಂದಿ, ಕಾಲೇಜಿನ ಐ.ಕ್ಯೂ. ಎ.ಸಿ. ಸಂಯೋಜಕ ಪ್ರೊ .ಬಿ. ಎಸ್.ಬೆಳಗಲಿ, ಎನ್.ಎಸ್.ಎಸ್. ಘಟಕದ ಮುಖ್ಯಸ್ಥರಾದ ಡಾ. ರವಿಚಂದ್ರನ್ ವಾಲಿಕಾರ, ಡಾ. ಕೃಷ್ಣಮೂರ್ತಿ ಸಿ.ಎನ್, ಡಾ. ಎಸ್.ಎನ್. ವಾಘ್ಮೋರೆ , ಡಾ. ಎಂ.ಬಿ .ಹೂಗಾರ, ಪ್ರೊ. ಎಸ್. ಎಲ್ .ರಾಠೋಡ, ಡಾ. ಬಿ.ಆರ್, ದೇಸಾಯಿ , ಡಾ.ಸಂತೋಷ ನವಲಗುಂದ, ಎಸ್.ಪಿ.ಪಾಟೀಲ, ಸಂತೋಷ ಹೆಗಡೆ, ಗಣೇಶ ಕಾಂಬಳೆ, ಸುಶಾಂತ ಜಿವನಾರ, ಮಂಜುನಾಥ ಕಾಶೆ, ಸುರೇಶ ಉಪ್ಪಾರ, ಹಾಗೂ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

