ನಿಡಗುಂದಿ: ವಿಜಯಪುರ ಜಿಲ್ಲೆಯ ಪ್ರಸಿದ್ಧ ಜಾನಪದ ಕಲಾವಿದ, ತತ್ವಪದಕಾರ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ನಿಡಗುಂದಿ ತಾಲೂಕು ಮುದ್ದಾಪುರ ಗ್ರಾಮದ ದಿ.ವೀರಭದ್ರಪ್ಪ ದಳವಾಯಿಯವರ ನಿಧನ ಜಿಲ್ಲೆಯ ಜಾನಪದ ಲೋಕಕ್ಕೆ ತುಂಬಲಾರದ ಹಾನಿಯಾಗಿದೆ ಎಂದು ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಎಸ್ ಪಾಟೀಲ (ಪಡಗಾನೂರ) ಸಂತಾಪ ತಿಳಿಸಿದ್ದಾರೆ.
ಮೃತ ವೀರಭದ್ರಪ್ಪ ದಳವಾಯಿಯವರು ರಾಜ್ಯ – ರಾಷ್ಟ್ರ ಮಟ್ಟದಲ್ಲಿ ಕಲಾ ಪ್ರದರ್ಶನ ನೀಡಿ ತಂಬೂರಿಯ ತಾಕತ್ತು ಮೆರೆದಿದ್ದಾರೆ. ತತ್ವಪದ, ಭಜನೆಪದ, ಹಂತಿಪದ, ಹೋಳಿಪದ ಹೀಗೆ ಹಲವಾರು ಜನಪದ ಪ್ರಕಾರಗಳಲ್ಲಿ ಹಾಡಿ ಸೈ ಎನಿಸಿಕೊಂಡಿದ್ದಾರೆ
ಮೃತರು ತತ್ವಪದ ಹಾಡುಗಾರರಾಗಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರದರ್ಶನ ನೀಡಿದ್ದಾರೆ. ಕಳೆದ ವರ್ಷ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ದೊರೆತಾಗ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ವಿಜಯಪುರ ವತಿಯಿಂದ ಜ್ಞಾನಯೋಗಾಶ್ರಮದಲ್ಲಿ ಸನ್ಮಾನ ಸಮಾರಂಭ ಏರ್ಪಡಿಸಿ ಗೌರವಿಸಲಾಗಿದೆ.
Related Posts
Add A Comment