ದೇವರಹಿಪ್ಪರಗಿ: ಕೃಷಿ ಚಟುವಟಿಕೆ ಹಾಗೂ ಕುಡಿಯುವ ನೀರಿನ ಅನುಕೂಲಕ್ಕಾಗಿ ಚಿಮ್ಮಲಗಿ ಮುಖ್ಯ ಕಾಲುವೆಯ ನಾಗಠಾಣ ಉಪಕಾಲುವೆಗೆ ನೀರು ಹರಿಸಿ ಈ ಭಾಗದ ಕೆರೆಗಳ ಭರ್ತಿಗೆ ಶಾಸಕ ರಾಜುಗೌಡ ಪಾಟೀಲ (ಕುದರಿ ಸಾಲವಾಡಗಿ) ಆಸಕ್ತಿ ವಹಿಸಿ ಕೂಡಲೇ ಕ್ರಮಕೈಗೊಳ್ಳಲು ಮುಂದಾಗಬೇಕು ಎಂದು ರೈತರು, ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮಂಗಳವಾರ ಪತ್ರಿಕೆಯೊಂದಿಗೆ ತಾಲ್ಲೂಕು ರೈತಸಂಘದ ಅಧ್ಯಕ್ಷ ಅಜೀಜ್ ಯಲಗಾರ ಹಾಗೂ ಬಸವರಾಜ ಕಲ್ಲೂರ (ಮುಳಸಾವಳಗಿ) ಮಾತನಾಡಿ, ತಾಲ್ಲೂಕಿನಲ್ಲಿ ಹರಿಯುವ ಮುಳವಾಡ ಏತ ನೀರಾವರಿ ಕಾಲುವೆಗೆ ಸತತವಾಗಿ ನೀರು ಹರಿಸಲಾಗುತ್ತಿದೆ. ಆದರೆ ತಾಲ್ಲೂಕಿನ ಗಂಗನಳ್ಳಿ ಗ್ರಾಮದವರೆಗೆ ನೀರು ಸಂಪರ್ಕಿಸುವ ನಾಗಠಾಣ ಉಪಕಾಲುವೆ ನೀರು ಹರಿಯದೇ ಭಣಗುಡುತ್ತಿದೆ. ಈ ಕಾಲುವೆಯ ನೀರಿನ ಮೇಲೆ ಅವಲಂಬಿತವಾದ ಕೃಷಿಕರು ವ್ಯವಸ್ಥೆಯ ತಾರತಮ್ಯ ನೀತಿಯಿಂದ ನೀರಿಗಾಗಿ ಪರಿತಪಿಸುವಂತಾಗಿದೆ.
ಚಿಮ್ಮಲಗಿ ಏತ ನೀರಾವರಿಯ ನಾಗಠಾಣ ಉಪಕಾಲುವೆಯಲ್ಲಿ ಸುಮಾರು ೧೪೬ ಕಿ.ಮೀ ನೀರು ಹರಿಯಬೇಕು. ನಿನ್ನೆಯಷ್ಟೇ ಮಾಜಿಶಾಸಕ ಸೋಮನಗೌಡ ಪಾಟೀಲ ಸಾಸನೂರ ಕೆಬಿಜೆಎನ್‌ಎಲ್ ಅಧಿಕಾರಿಗಳಲ್ಲಿ ಮನವಿಮಾಡಿ ೨ ಮೋಟಾರ್‌ಗಳ ಮೂಲಕ ನೀರು ಹರಿಸಲು ಕ್ರಮಕೈಗೊಂಡಿದ್ದಾರೆ. ಆದರೆ ಕಾಲುವೆಯ ಕೊನೆಯ ಹಂತದವರೆಗೆ ನೀರು ತಲುಪಬೇಕೆಂದರೇ ಕನಿಷ್ಟ ೩ ಮೋಟಾರ್‌ಗಳು ಕಾರ್ಯನಿರ್ವಹಿಸಬೇಕಾಗಿದೆ. ಆದರೆ ಇನ್ನೊಂದು ಮೋಟರು ಚಾಲನೆಗೆ ಟಿ.ಸಿ ಹಾಗೂ ತಾಂತ್ರಿಕ ಕೊರತೆ ಇದೆ ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ. ಅಲ್ಲದೇ ಕಳೆದ ಕೆಲವು ದಿನಗಳ ಹಿಂದೆ ಧರಣಿ ಕುಳಿತ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಕೆಬಿಜೆಎನ್‌ಎಲ್ ಅಧಿಕಾರಿಗಳು ಕಾಲುವೆಗೆ ನೀರು ಹರಿಸಲು ನೀರು ನಿರ್ವಹಣಾ ಸಲಹಾ ಸಮೀತಿಯ ಅಧ್ಯಕ್ಷರಿಗೆ ಈ ಭಾಗದ ಶಾಸಕರು ಸೂಚಿಸಬೇಕು ಆಗ ಮಾತ್ರ ನಾವು ಕ್ರಮ ಕೈಗೊಳ್ಳಲು ಸಾಧ್ಯ ಎಂಬ ಮಾತನ್ನು ಹೇಳಿದ್ದರು. ಈಗ ನಮ್ಮ ಭಾಗದ ಶಾಸಕರು ಕಾಲುವೆಗೆ ನೀರು ಹರಿಸಲು ಸಮೀತಿಯ ಅಧ್ಯಕ್ಷರಾದ ತಿಮ್ಮಾಪೂರ ಅವರಿಗೆ ಒತ್ತಡಹಾಕಬೇಕು. ಇದರಿಂದ ಈ ಭಾಗದ ಕೆರೆಗಳು ಭರ್ತಿಯಾಗಲು ಸಾಧ್ಯ ಎಂದರು.
ಕಾಲುವೆಗಳಿಗೆ ತಕ್ಷಣವೇ ದೇವರಹಿಪ್ಪರಗಿ-ಗಂಗನಳ್ಳಿ ನಡುವಿನ ಕಾಲುವೆಗೆ ನೀರು ಹರಿಸಲು ಶಾಸಕ ರಾಜುಗೌಡ ಪಾಟೀಲರು ಕ್ರಮ ಕೈಗೊಳ್ಳಬೇಕು ಎಂದು ಶಾಂತಗೌಡ ಮೂಲಿಮನಿ, ಶಂಕರಗೌಡ ಕೋಟಿಖಾನಿ, ಸಾಹೇಬಗೌಡರೆಡ್ಡಿ (ಕಡ್ಲೇವಾಡ ಪಿಸಿಎಚ್) ಶ್ರೀಮಂತ ತಳವಾರ (ನಿವಾಳಖೇಡ), ಬಾಶೇಸಾಬ್ ಬಿಜಾಪುರ, ಅಮೀನ್ ಕಲಾಲ್ ಸೇರಿದಂತೆ ವಿವಿಧ ಗ್ರಾಮಗಳ ರೈತರು ಆಗ್ರಹಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

