ಚಿಮ್ಮಡ: ಗ್ರಾಮದಲ್ಲಿ ಕಳೆದ ಎರಡು ದಿನಗಳ ಕಾಲ ಗ್ರಾಮದಲ್ಲಿ ಸಂಭ್ರಮ ಮೂಡಿಸಿದ್ದ ಆರಾದ್ಯದೈವ ಶ್ರೀ ಪ್ರಭುಲಿಂಗೇಶ್ವರ ಕಿಚಡಿ ಜಾತ್ರೆ ಹಲವಾರು ವಿಶೇಷಗಳೊಂದಿಗೆ ವಿಜ್ರಂಭಣೆಯಿಂದ ನೆರವೇರಿತು.
ಬುಧವಾರ ಮುಂಜಾನೆಯೇ ಸರದಿಯಲ್ಲಿ ನಿಲ್ಲಲು ಪ್ರಾರಂಭಿಸಿದ ಕಿಚಡಿ ತಯಾರಿಸುವ ಸಾಮಗ್ರಿ ಒಯ್ಯುವ ಸೇವಾ ನಿರತ ಅಲಂಕೃತ ಟ್ರ್ಯಾಕ್ಟರ್ಗಳನ್ನು ಸಂಜೆಯ ಹೊತ್ತಿಗೆ ನೂರರ ಗಡಿ ದಾಟಿದ್ದವು. ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಿಂದ ಸುಮಾರು ಎರಡು ಕಿ. ಮಿ. ವರೆಗೆ ಸರದಿ ಸಾಲಿನಲ್ಲಿ ನಿಂತಿದ್ದವು ರಾತ್ರಿ ೧೦ ಘಂಟೆಯಿಂದ ಓಂ ಪ್ರಭುಲಿಂಗೇಶ್ವರ ಸೇವಾ ಸಮೀತಿಯ ಪ್ರಮುಖರಿಂದ ಕಿಚಡಿ ಪ್ರಸಾದದ ಸಾಮಗ್ರಿಯನ್ನು ದೂರದ ಗುಡ್ಡದ ಪ್ರಭುಲಿಂಗೇಶ್ವರ ದೇವಸ್ಥಾನಕ್ಕೆ ಸಾಗಿಸಲಾಯಿತು. ಈ ಅಲಂಕೃತ ಟ್ರ್ಯಾಕ್ಟರ್ಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಒಂದೊಂದು ಟ್ರ್ಯಾಕ್ಟರ್ಗಳ ಶೃಂಗಾರಕ್ಕೆ ರೈತರು ಹತ್ತರಿಂದ ಐವತ್ತು ಸಾವಿರ ರೂ.ಗಳವರೆಗೆ ಖರ್ಚು ಮಾಡಿರುತ್ತಾರೆ.
ಗುರುವಾರ ಬೆಳಿಗ್ಗೆ ೬ ಘಂ,ಗೆ ನಡೆಯುವ ರುದ್ರಾಭಿಷೇಕದೊದಿಗೆ ಪ್ರಾರಂಭಗೊಂಡ ಜಾತ್ರೆಯಲ್ಲಿ ಷಟಸ್ಥಲ ಧ್ವಜಾರೋಹಣ, ಅಡ್ಡ ಪಲ್ಲಕ್ಕಿ ಮಹೋತ್ಸವ ನಂತರ ನಡೆದ ಶಿವಾನುಭವಗೋಷ್ಟಿಯಲ್ಲಿ ನಾಡಿನ ಅನೇಕ ಶ್ರೀಮಠಗಳ ಮಠಾಧೀಶರು ಪಾಲ್ಗೊಂಡಿದ್ದರು.
ಸಂಜೆ ಕರಡಿ ಮಜಲು, ಡೊಳ್ಳು, ಬ್ಯಾಂಡ ಬಾಜಾ, ಹಲಗಿ ಮೇಳ ಸೇರಿದಂತೆ ವಿವಿಧ ವಾದ್ಯವೃಂದಗಳೊಂದಿಗೆ ನಡೆದ ಅಲಂಕೃತ ಜೋಡಿ ನಂದಿಕೋಲ ಉತ್ಸವ ಆಕರ್ಷಣೀಯವಾಗಿತ್ತು.
ಜಾತ್ರಾ ಮಹೋತ್ಸವದಲ್ಲಿ ಸಂಸದ ಪಿಸಿ ಗದ್ದಿಗೌಡರ್, ಕ್ಷೇತ್ರ ಶಾಸಕ ಸಿದ್ದು ಸವದಿ, ಸಿದ್ದು ಕೊಣ್ಣೂರ ಸೇರಿದಂತೆ ಹಲವಾರು ಪ್ರಮುಖ ರಾಜಕಾರಣಿಗಳು ಹಿರಿಯ ಅಧಿಕಾರಿಗಳು ಆಗಮಿಸಿದ್ದರು.
ಬನಹಟ್ಟಿ ಸಿಪಿಐ ಸಂಜೀವ ಬಳಗಾರ ಮಾರ್ಗದರ್ಶದಲ್ಲಿ ಠಾಣಾಧಿಕಾರಿ ರಾಘವೇಂದ್ರ ಖೋತ, ಎಎಸೈ ಶಿವಪ್ಪಾ ಹುದ್ದಾರ ತಮ್ಮ ಸಿಬ್ಬಂದಿಯೊಂದಿಗೆ ಸೂಕ್ತ ಬಂದೋಬಸ್ತ ಕೈಗೊಂಡಿದ್ದರು.
Related Posts
Add A Comment