ಶತಾಯುಷಿ ಅಮ್ಮನಿಗೆ ಕಂದಾಯ ಇಲಾಖೆ ಮತ್ತು ಗ್ರಾಮಸ್ಥರಿಂದ ಗೌರವ ಸಮರ್ಪಣೆ
ಕಲಕೇರಿ: ಅಂತರ ರಾಷ್ಟ್ರೀಯ ಹಿರಿಯ ವ್ಯಕ್ತಿಗಳ ದಿನದ ಆಚರಣೆ ಪ್ರಯುಕ್ತ ಶತಾಯುಷಿ ಮತದಾರರಿಗೆ ಅಭಿನಂದಿಸುವ ಸಲುವಾಗಿ ಕರ್ನಾಟಕ ಸರಕಾರ, ಚುನಾವಣಾ ಆಯೋಗದ ನಿರ್ದೇಶನದಂತೆ ಕಂದಾಯ ಇಲಾಖೆಯ ಪರವಾಗಿ ಗ್ರಾಮದ ಶತಾಯುಷಿ ೧೦೧ ವರ್ಷದ ಮಾತೋಶ್ರೀ ಶ್ರೀಮತಿ ಗುರುಬಾಯಿ ಶಿವಲಿಂಗಯ್ಯ ಚಿಕ್ಕಮಠ ಅವರನ್ನು ಗ್ರಾಮ ಆಡಳಿತಾಧಿಕಾರಿ ಪ್ರಕಾಶ ಹೊಸಕೇರಿ ಹಾಗೂ ಗ್ರಾಮಸ್ಥರಿಂದ ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮ ನಡೆಯಿತು.
ಈ ವೇಳೆ ಹಿರಿಯ ಮಾತೋಶ್ರೀ ಶ್ರೀಮತಿ ಗುರುಬಾಯಿ ಶಿವಲಿಂಗಯ್ಯ ಚಿಕ್ಕಮಠ ಅವರನ್ನು ಕಂದಾಯ ಇಲಾಖೆಯ ಪರವಾಗಿ ಗೌರವಿಸಿ ಮಾತನಾಡಿದ ಗ್ರಾಮ ಆಡಳಿತಾಧಿಕಾರಿ ಪ್ರಕಾಶ ಹೊಸಕೇರಿ ಅವರು, ಸರಕಾರದ ಆದೇಶದಂತೆ ತಾಳಿಕೋಟಿ ತಾಲೂಕಿನ ಕಲಕೇರಿಯ ೧೦೧ ವರ್ಷದ ಹಿರಿಯ ಮಾತೋಶ್ರೀಯವನ್ನು ಗೌರವಿಸಲಾಗುತ್ತಿದೆ, ಇದು ನಮ್ಮ ಸೌಭಾಗ್ಯವಾಗಿದ್ದು, ಹಿರಿಯರ ಮಾರ್ಗದರ್ಶನದಲ್ಲಿ ಅವರ ಆಶಿರ್ವಾದವನ್ನು ಪಡೆದು ನಮ್ಮ ಜೀವನವನ್ನು ಪಾವನಗೊಳಿಸಿಕೊಳ್ಳೋಣ ಎಂದು ಹೇಳಿದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಎಸ್.ಬಿ.ಪಾಟೀಲ ಮತ್ತು ಆದರ್ಶ ಪದವಿ ಕಾಲೇಜಿನ ಪ್ರಾಚಾರ್ಯ ಎಸ್.ಎಮ್.ಸಜ್ಜನ ಮಾತನಾಡಿದರು. ಸರಕಾರ ಮತ್ತು ಗ್ರಾಮಸ್ಥರ ಪರವಾಗಿ ಏರ್ಪಡಿಸಿದ ಗೌರವ ಸಮರ್ಪಣೆ ಕಾರ್ಯಕ್ರಮ ಅತ್ಯಂತ ವಿಶೇಷವಾಗಿದ್ದು,
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗದ್ದಗಿಮಠದ ಷ.ಬ್ರ.ಶ್ರೀಗುರು ಮಡಿವಾಳೇಶ್ವರ ಶಿವಾಚಾರ್ಯರು ಸೇರಿದಂತೆ ನೂರಾರು ಹಿರಿಯರು, ತಾಯಂದಿರು, ಹಿತೈಷಿಗಳು ಶತಾಯುಷಿ ಮಾತೆಯನ್ನು ಅತ್ಯಂತ ಗೌರವಪೂರ್ವಕವಾಗಿ ಸತ್ಕರಿಸಿ ಗೌರವಿಸಿದರಲ್ಲದೆ,ತೊಟ್ಟಿಲಿನಲ್ಲಿ ಕುಳ್ಳಿರಿಸಿ ತೂಗುವ ಮೂಲಕ ಇನ್ನೂ ಧೀರ್ಘಾಯುಷಿಯಾಗಿ ಆರೋಗ್ಯಪೂರ್ಣವಾಗಿ ಬಾಳಿ ಬದುಕಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ರಾಜಅಹ್ಮದ ಸಿರಸಗಿ, ಪರಶುರಾಮ ದೊರೆಗೋಳ, ವಿನೋದ ವಡಗೇರಿ, ಮುಖಂಡರಾದ ದೇವಿಂದ್ರ ಜಂಬಗಿ, ಸುಭಾಸ ಅಡಕಿ, ಎಸ್.ಸಿ.ಗುಮಶೆಟ್ಟಿ, ದುಂಡಯ್ಯ ಚಿಕ್ಕಮಠ, ಅರವಿಂದ ಬೇನಾಳ, ವಿಶ್ವನಾಥ ಚಿಕ್ಕಮಠ, ಶಂಕ್ರಯ್ಯ ಗಣಾಚಾರಿ, ಈರಯ್ಯ ಶಿವಲಿಂಗಯ್ಯ ಚಿಕ್ಕಮಠ, ರುದ್ರಸ್ವಾಮಿ ಚಿಕ್ಕಮಠ, ಶಿವುಕುಮಾರ ಪಡಶೆಟ್ಟಿ, ಜವಾಹರ ಕುಲಕರ್ಣಿ, ಗೂಳಪ್ಪ ವಡ್ಡೊಡಗಿ, ಡಾ.ಈರಣ್ಣ ಗುಮಶೆಟ್ಟಿ, ಸಿದ್ದಣ್ಣ ಚಳ್ಳಗಿ, ಬಸವಂತ್ರಾಯ ವಂದಾಲ, ಅನಿಲ ಕಪ್ಪಡಿಮಠ ಸೇರಿದಂತೆ ಇತರರು ಇದ್ದರು.