ಮುದ್ದೇಬಿಹಾಳ: ಮಹಾತ್ಮ ಗಾಂಧೀಜಿಯವರು ಸತ್ಯ ಮತ್ತು ಅಹಿಂಸಾ ಮಾರ್ಗದ ಮೂಲಕ ಬ್ರಿಟೀಷರ ಕಪಿ ಮುಷ್ಠಿಯಲ್ಲಿದ್ದ ಭಾರತವನ್ನು ಸ್ವತಂತ್ರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಸಂಪತಕುಮಾರ ಬಳೂಲಗಿಡದ ಹೇಳಿದರು.
ಪಟ್ಟಣದ ನ್ಯಾಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಾತ್ಮ ಗಾಂಧೀಜಿ ದೇಶದ ಹೆಮ್ಮೆ, ಜಗತ್ತಿನ ಆದರ್ಶ. ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಉನ್ನತ ಮಟ್ಟಕ್ಕೇರಲು ಸಾಧ್ಯ. ಗಾಂಧೀಜಿ ಅವರ ಅತೀ ದೊಡ್ಡ ಕನಸು ಎಂದರೆ ಅದು ಸ್ವಚ್ಛ ಭಾರತ. ಅವರ ಕನಸನ್ನು ನನಸಾಗಿಲು ಇಂದು ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು ಅವುಗಳ ಸದುಪಯೋಗವಾಗಬೇಕು. ಸಾರ್ವಜನಿಕರು ಸಹ ಅಲ್ಲಲ್ಲಿ ಕಸ, ತ್ಯಾಜ್ಯ ವಿಲೇವಾರಿ ಮಾಡದೇ ನಿಗಧಿತ ಸ್ಥಳಗಳಲ್ಲಿ ವಿಲೇವಾರಿ ಮಾಡಿ ಸಹಕರಿಸುವಂತೆ ಸಲಹೆ ನೀಡಿದರು.
ಈ ವೇಳೆ ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ ಪಿ.ಬಿ.ಗೌಡರ, ನ್ಯಾಯಾಲಯದ ಸಿಬ್ಬಂದಿಗಳಾದ ಸುರೇಶ ಬಳಗಾನೂರ, ಅರವಿಂದ ಕುಂಬಾರ, ವಿಜು ಶಿವಣಗಿ, ಗುರು ಲಾಳಿ, ನಾಗೇಶ ಮಾದಿಹಳ್ಳಿ, ಅಶೋಕ ಕುಂಬಾರ, ಇಸಾಕ ಒಚಿಟಿ, ಸುಶ್ಮಾ ಬಾಣಿ, ಮಹಾಂತೇಶ ಹಚರೆಡ್ಡಿ, ಪೊಲೀಸ್ ಪೇದೆ ಪರಶುರಾಮ ನಾಗರೆಡ್ಡಿ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

