ವಿಜಯಪುರ: ನಗರದ ಶ್ರೀ ಸಿದ್ಧೇಶ್ವರ ಸಂಸ್ಥೆಯ ಅಂಗವಾದ ಸಂಗನಬಸವ ಅಂತಾರಾಷ್ಟ್ರೀಯ ವಸತಿ ಶಾಲೆ, ಕವಲಗಿಯಲ್ಲಿ ‘ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ’ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಭಾವಚಿತ್ರಗಳಿಗೆ ಪುಷ್ಪಾರ್ಚನೆಯನ್ನು ಮಾಡಲಾಯಿತು.
ಶಾಲೆಯ ಪ್ರಾಂಶುಪಾಲರಾದ ಶರ್ಮಿಳಾ ಹೇಮಂತ್ “ಗಾಂಧೀಜಿ ಮತು ಶಾಸ್ತ್ರಿಜಿಯವರು ಪ್ರಾತಃಸ್ಮರಣೀಯರು. ಮಹಾತ್ಮ ಗಾಂಧೀಜಿಯ ಅಸ್ತçಗಳಾದ ಸತ್ಯ, ಅಹಿಂಸೆ ಮತ್ತು ಸ್ವಚ್ಛತೆಯ ಬಗ್ಗೆ ತಿಳಿಸುತ್ತಾ, ತುಂಬಾ ಸರಳ ಜೀವಿಯಾದ ಭಾರತದ ಎರಡನೆಯ ಪ್ರಧಾನ ಮಂತ್ರಿಯಾದ ಲಾಲ್ ಬಹಾದ್ದೂರ್ ಶಾಸ್ತ್ರಿಜಿಯವರ ಬಗ್ಗೆ ವರ್ಣಿಸುತ್ತಾ ಅವರ ಘೋಷವಾಕ್ಯವಾದ ‘ಜಯ್ ಜವಾನ್, ಜಯ್ ಕಿಸಾನ್’ (ಯೋಧ ಮತ್ತು ರೈತ) ಎಂಬುದನ್ನು ನೆನಪಿಸಿದರು.
ವಿದ್ಯಾರ್ಥಿಗಳು ಎಲ್ಲಾ ಧರ್ಮಗಳ ಬೋಧನೆಯನ್ನು ತಿಳಿಸಿ ಸರ್ವಧರ್ಮ ಏಕತೆಯನ್ನು ಮಾರ್ಮಿಕವಾಗಿ ಸಾರಿದರು. ವಿದ್ಯಾರ್ಥಿಗಳಿಂದ ಸಮೂಹ ಗೀತೆ, ನೃತ್ಯಗಳು, ಭಾಷಣಗಳು & ಶಿಕ್ಷಕರಿಂದ ಭಜನ್‌ಗಳು, ಜರುಗಿದವು.
ಕಾರ್ಯಕ್ರಮದಲ್ಲಿ ಶಾಲೆಯ ಉಪಪ್ರಾಚಾರ್ಯ ಅಣ್ಣಪ್ಪ ಶಿರೂರ, ಜ್ಯೂನಿಯರ್ ವಿಂಗ್‌ನ ಉಪಪ್ರಾಚಾರ್ಯ ಜ್ಯೋತಿ ಪಡಸಲಗಿ, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ಆಂಗ್ಲ ಶಿಕ್ಷಕ ಗುರುದೇವ ಹೋಳಿ ಸ್ವಾಗತಿಸಿದರು. ಸಾಕ್ಷಿ ರಾಚಗೊಂಡ ನಿರೂಪಿಸಿದರು. ಶಾಲೆಯ ಗಣಕ ವಿಜ್ಞಾನ ಶಿಕ್ಷಕಿ ಗೀತಾ ಸಜ್ಜನ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

