ಸಿಂದಗಿ: ಸ್ವಚ್ಛತಾ ಆಂದೋಲನ ಕೇವಲ ಜಾತ್ರೆ, ಸಮಾರಂಭ ಹಾಗೂ ಮಹಾನ್ ನಾಯಕರ ಜಯಂತಿಗಳಿಗೆ ಮಾತ್ರ ಸೀಮಿತವಾಗದೇ ಪ್ರತಿನಿತ್ಯ ನಮ್ಮ ಮನೆಯ ಆವರಣದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ ಎಂದು ಗ್ರಾ.ಪಂ ಅಧ್ಯಕ್ಷೆ ಶಾಂತಾಬಾಯಿ ಉಮರಗಿ ಹೇಳಿದರು.
ತಾಲೂಕಿನ ಗಬಸಾವಳಗಿ ಗ್ರಾಮದಲ್ಲಿ ಗಾಂಧಿ ಜಯಂತಿಯ ಪ್ರಯುಕ್ತ ಹಮ್ಮಿಕೊಂಡ ಸ್ವಚ್ಛತಾ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸುತ್ತಮುತ್ತಲಿನ ವಾತವರಣವನ್ನು ನಾವು ಸ್ವಚ್ಚವಾಗಿಡಬೇಕು. ಮನೆಗೊಂದು ಮರ ನೆಟ್ಟು ಬರುವ ರೋಗಗಳನ್ನು ತಡೆಗಟ್ಟಬೇಕು. ಗ್ರಾಮೀಣ ಭಾಗದ ಜನತೆ ಜಾಗೃತರಾಗಿ ಸ್ವಚ್ಛತ್ವಗೆ ಮುಂದಾಗಿ ನಿಮ್ಮ ಮಕ್ಕಳ ಅರೋಗ್ಯ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಇದೇ ವೇಳೆ ಪಿಡಿಒ ಬಿ.ಆರ್ ಶಾಹಾಪುರ, ಕಾರ್ಯದರ್ಶಿ ಬಸಲಿಂಗಯ್ಯ ರಾಮಗಿರಿಮಠ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ ವರ್ಗ ಸೇರಿದಂತೆ ಗ್ರಾಮಸ್ಥರಿದ್ದರು.
Related Posts
Add A Comment