ಸಿಂದಗಿ: ದೇಶದ ಸ್ವಾತಂತ್ರ‍್ಯಕ್ಕಾಗಿ ಅನೇಕ ಚಳುವಳಿ ಹಾಗೂ ಹೋರಾಟಗಳನ್ನು ರೂಪಿಸಿ ಅಹಿಂಸಾ ಮಾರ್ಗದ ಮೂಲಕ ಸ್ವಾತಂತ್ರ‍್ಯ ಚಳುವಳಿಯನ್ನು ಮುನ್ನಡೆಸಿದ ಮಹಾತ್ಮ ಗಾಂಧಿಯವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಅವರ ಹಾದಿಯಲ್ಲಿ ಸಾಗೋಣ ಎಂದು ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಕಛೇರಿಯಲ್ಲಿ ಹಮ್ಮಿಕೊಂಡ ಮಹಾತ್ಮಾ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜಯಂತಿ ಆಚರಣೆಯಲ್ಲಿ ಮಾತನಾಡಿದ ಅವರು, ಗಾಂಧೀಜಿ ಅವರ ಸತ್ಯ, ಸಮಾನತೆ, ಅಹಿಂಸೆ, ಶಾಂತಿಯ ಬಹುದೊಡ್ಡ ಪ್ರತಿಪಾದಕರಾಗಿದ್ದಾರೆ. ಇಂದು ವಿಶ್ವದಾದ್ಯಂತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಜಿಯವರ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದರು.
ಇದೇ ವೇಳೆ ನಗರ ಸುಧಾರಣಾ ವೇದಿಕೆ ಅಧ್ಯಕ್ಷ ಅಶೋಕ ಅಲ್ಲಾಪೂರ ಮಾತನಾಡಿ, ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಕೊಡುಗೆ ಅಪಾರವಾದದ್ದು, ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಗಳ ಮೂಲಕ ದೇಶದಲ್ಲಿ ಜನಸ್ನೇಹಿ ಆಡಳಿತವನ್ನು ನೀಡಿದ ಅಪರೂಪದ ಪ್ರಧಾನಿಯಾಗಿದ್ದಾರೆ. ಅವರ ಜೀವನ ಮತ್ತು ತತ್ವಾದರ್ಶಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಈ ವೇಳೆ ಶಿರಸ್ತೇದಾರ ಸುರೇಶ ಮ್ಯಾಗೇರಿ, ಬಸವರಾಜ ಭೋವಿ, ಜಿ.ಎಸ್.ರೋಡಗಿ, ಕಂದಾಯ ನಿರೀಕ್ಷಕ ಆಯ್.ಎ ಮಕಾಂದಾರ, ಮಲ್ಲಿಕಾರ್ಜುನ ಮಾಲಗಾರ, ಜಗದೀಶ ಶಹಾಪೂರ, ನಿಖಿಲಅಹ್ಮದ್ ಖಾನಾಪುರ, ನಾಗಮ್ಮ ಸಾಲಿ, ದಾನಮ್ಮ ಹೂಗಾರ, ಹೀನಾಕೌಸರ ಮಂದೇವಾಲಿ, ಸಮೀರ ಮುಜಾವರ, ಸ್ನೇಹಾ ಕೊಪ್ಪ, ವಿಜಯಲಕ್ಷ್ಮಿ ಶಹಾಪೂರ, ಭೀಮಾಶಂಕರ ಕರಿಮುಂಗಿ, ಮಂಜುಳಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
*ಶ್ರೀ ಪದ್ಮರಾಜ ಮಹಿಳಾ ಕಾಲೇಜು*
ಪಟ್ಟಣದ ಶ್ರೀ ಪದ್ಮರಾಜ ಮಹಿಳಾ ಕಾಲೇಜಿನಲ್ಲಿ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜಯಂತಿಯನ್ನು ಆಚರಣೆ ಮಾಡಲಾಯಿತು.
ಇದೇ ವೇಳೆ ಪದವಿ ಪ್ರಾಚಾರ್ಯ ಎಸ್.ಎಂ ಪೂಜಾರಿ, ಉಪನ್ಯಾಸಕರಾದ ಜಿ.ಎ.ನಂದಿಮಠ, ಜಿ.ಎಸ್.ಕುಲಕರ್ಣಿ, ಮಹಾಂತೇಶ ನೂಲಾನವರ, ಎಸ್.ಸಿ ದುದ್ದಗಿ, ಎಲ್.ಎಮ್ ಮಾರ್ಸನಳ್ಳಿ, ಹೇಮಾ ಕಾಸರ, ಯು.ಸಿ ಪೂಜೇರಿ, ಎ.ಎ.ಕೊಕನಿ, ಸತೀಶ ಕಕ್ಕಸಗೇರಿ, ಶಂಕರ ಕುಂಬಾರ, ವಿಜಯಲಕ್ಷ್ಮಿ ಭಜಂತ್ರಿ ಸೇರಿದಂತೆ ಅನೇಕರಿದ್ದರು.
*ಬ್ಲಾಕ್ ಕಾಂಗ್ರೆಸ್ ಕಛೇರಿ*
ಪಟ್ಟಣದ ಎಪಿಎಂಸಿಯಲ್ಲಿರುವ ಸಿಂದಗಿ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜಯಂತಿಯನ್ನು ಆಚರಣೆ ಮಾಡಲಾಯಿತು.
ಇದೇ ವೇಳೆ ಬ್ಲಾಕ್ ಕಾಂಗ್ರೆಸ್ ಸಮಿತಿ ತಾಲೂಕಾಧ್ಯಕ್ಷ ಸುರೇಶ ಪೂಜಾರ ಮಾತನಾಡಿ, ಗಾಂಧಿಜಿ ಅವರ ಬದುಕು ಮತ್ತು ಶಾಸ್ತ್ರಿಜಿ ಅವರ ಜೀವನ ಶೈಲಿ ನಮಗೆಲ್ಲ ಮಾದರಿಯಾಗಬೇಕು. ಅವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಡಾ.ಚನ್ನವೀರ (ಮುತ್ತು) ಮನಗೂಳಿ, ಸಾಯಬಣ್ಣ ಪುರದಾಳ, ಮುಸ್ತಾಕ್ ಮುಲ್ಲಾ, ಪರಶುರಾಮ ಕಾಂಬಳೆ, ಜಯಶ್ರೀ ಹದನೂರ, ಶಾರದಾ ಬೆಟಗೇರಿ, ಮಹಾನಂದ ಬಮ್ಮಣ್ಣಿ, ಡಾ.ಸಂಗಮೇಶ ಪಾಟೀಲ, ಡಾ.ಶಿವಾನಂದ ಹೊಸಮನಿ, ಪುರಸಭೆ ಸದಸ್ಯ ಬಸವರಾಜ ಯರನಾಳ ಸೇರಿದಂತೆ ಕಾರ್ಯಕರ್ತರು ಇದ್ದರು.
*ತಾಲೂಕು ಸಾರ್ವಜನಿಕ ಆಸ್ಪತ್ರೆ*
ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜಯಂತಿಯನ್ನು ಆಚರಣೆ ಮಾಡಲಾಯಿತು.
ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಎ.ಎ ಮಾಗಿ, ರಾಜಶೇಖರ ನರಗೋದಿ, ಡಾ.ಮಹಾಂತೇಶ ಹಿರೇಮಠ, ಎಂ.ಪಿ ಸಾಗರ, ಡಾ. ಬಡಿಗೇರ ಹಾಗೂ ಡಾ.ರಾಠೋಡ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಇದ್ದರು.
*ಮಹಿಳಾ ಸಾಂತ್ವನ ಸಹಾಯವಾಣಿ ಕೇಂದ್ರ*
ಪಟ್ಟಣದ ಬಂದಾಳ ರಸ್ತೆಯಲ್ಲಿರುವ ಮಹಿಳಾ ಸಾಂತ್ವನ ಸಹಾಯವಾಣಿ ಕೇಂದ್ರದಲ್ಲಿ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜಯಂತಿಯನ್ನು ಆಚರಣೆ ಮಾಡಲಾಯಿತು.
ಈ ವೇಳೆ ಆಪ್ತ ಸಮಾಲೋಚಕಿ ಸುಜಾತಾ ಕಲಬುರ್ಗಿ, ರಶ್ಮಿ ನೂಲಾನವರ, ವಿದ್ಯಾ ದೇಸಾಯಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

