ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್ ಡೆಹರಾಡೂನ ಗೆ ಪರೀಕ್ಷೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜುಲೈ ೨೦೨೬ನೇ ಅಧೀವೇಶನಕ್ಕಾಗಿ ಉತ್ತರಾಖಂಡ ರಾಜ್ಯದ ಡೆಹರಾಡೂನ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜಿನ ಡೆಹರಾಡೂನಗೆ ೮ನೇ ತರಗತಿಗಾಗಿ ಪ್ರವೇಶ ಬಯಸುವ ಕರ್ನಾಟಕ ರಾಜ್ಯದ ಬಾಲಕರು ಮತ್ತು ಬಾಲಕಿಯರ ಅರ್ಹತಾ ಪ್ರವೇಶ ಪರೀಕ್ಷೆಯನ್ನು ಬೆಂಗಳೂರು ಕೇಂದ್ರದಲ್ಲಿ ಡಿಸೆಂಬರ್ ೦೭ ರಂದು ನಡೆಸಲಾಗುವುದು.
ಸರ್ಕಾರದಿಂದ ಮಾನ್ಯತೆ ಪಡೆದಿರುವ ಯಾವುದೇ ಶಾಲೆಯಲ್ಲಿ ೭ನೇ ತರಗತಿ ವ್ಯಾಸಂಗ ಮಾಡುತ್ತಿರುವ ಅಥವಾ ಉತ್ತೀರ್ಣರಾಗಿರುವ ಹಾಗೂ ದಿನಾಂಕ ೦೧-೦೭-೨೦೨೬ರಂತೆ ೧೧ ವರ್ಷದಿಂದ ೧೩ ವರ್ಷದೊಳಗಿರುವ ಅಂದರೆ ೦೨-೦೭-೨೦೧೩ ರಿಂದ ೦೧-೦೧-೨೦೧೫ರವರೆಗೆ ಜನಿಸಿರುವ ಬಾಲಕರು ಮತ್ತು ಬಾಲಕಿಯರು ಮಾತ್ರ ಈ ಪ್ರವೇಶ ಪರೀಕ್ಷೆಗೆ ಅರ್ಹರಿರುತ್ತಾರೆ.
ಅರ್ಜಿ ನಮೂನೆ ಮತ್ತು ಹಳೆಯ ಪ್ರಶ್ನೆ ಪತ್ರಿಕೆಗಳ ಕಿರು ಪುಸ್ತಕವನ್ನು ರಾಷ್ಟ್ರೀಯ ಭಾರತೀಯ ಮಿಲಿಟರಿ ಕಾಲೇಜ, ಗರಹಿ ಕ್ಯಾಂಟ್, ಡೆಹರಾಡೂನ, ಉತ್ತರಾಖಂಡ-೨೪೮೦೦೩ ಮೂಲಕ ಪಡೆಯಬಹುದು. ಭರ್ತಿ ಮಾಡಿದ ನಿಗದಿತ ಅರ್ಜಿ ನಮೂನೆಯನ್ನು ದ್ವಿ-ಪ್ರತಿಯಲ್ಲಿ ಅಗತ್ಯ ದಾಖಲೆ ಸಹಿತ ಅಕ್ಟೋಬರ್ ೧೫ರೊಳಗಾಗಿ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನವರ್ಸತಿ ಇಲಾಖೆ, ಫೀಲ್ಡ್ ಮಾರ್ಷಲ್, ಕೆ.ಎಂ.ಕಾರ್ಯಪ್ಪ ಭವನ, ನಂ.೫೮, ಫೀಲ್ಡ್ ಮಾರ್ಷಲ್, ಕೆ.ಎಂ.ಕಾರ್ಯಪ್ಪ ರಸ್ತೆ ಬೆಂಗಳೂರು-೫೬೦೦೨೫ ಇವರಿಗೆ ಸಲ್ಲಿಸಬಹುದಾಗಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ೦೮೦-೨೫೫೮೯೪೫೯ ಹಾಗೂ ೦೮೩೫೨-೨೫೦೯೧೩ ಅಥವಾ ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಕಚೇರಿಗೆ ಸಂಪರ್ಕಿಸಬಹುದಾಗಿದೆ ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಪ್ರಕಟಣೆ ತಿಳಿಸಿದೆ.