ಆಲಮಟ್ಟಿ: ಸ್ಥಳಿಯ ಮಂಜಪ್ಪ ಹರ್ಡೇಕರ ಪ್ರೌಢ ಶಾಲೆಯಲ್ಲಿ ರಾಷ್ಟ್ರಪಿತ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಶಾಸ್ತ್ರಿಜಿಯವರ ಜನ್ಮದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯ ಗುರು ಎಸ್.ಆಯ್.ಗಿಡ್ಡಪ್ಪಗೋಳ, ಗ್ರಾಮಗಳೇ ದೇಶದ ಬೆನ್ನೆಲುಬು ಎಂದು ಅಂತಿದ್ದ ಗಾಂಧೀಜಿ ಸ್ವಚ್ಛತೆ ಬಗ್ಗೆ ತೀವ್ರ ಲಕ್ಷವಹಿಸಿದ್ದರು. ಮಹಾತ್ಮರ ಚರಿತ್ರೆಗಳನ್ನು ಇಂದಿನ ಮಕ್ಕಳು ಅವಲೋಕಿಸಿ ಅವರ ತತ್ವಾದರ್ಶಗಳನ್ನು ಸ್ವಲ್ಪವಾದರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು. ಗಾಂಧೀಜಿಯವರಂತೆಯೇ ವಿಶಾಲ ಸಹೃದಯ ಹೊಂದಿದ ಶಾಸ್ತ್ರಿ ಜಿ ಕೂಡಾ ಸರಳಜೀವಿಗಳು. ಅವರ ಘೋಷಣೆ ‘ಜೈ ಜವಾನ ಜೈ ಕಿಸಾನ’ ಎಂಬಂತೆಯೇ ಅವರು ರೈತರ ಅಭಿವೃದ್ಧಿಗಾಗಿ ನಾನಾ ಯೋಜನೆಗಳನ್ನು ಜಾರಿಗೆ ತಂದಿದ್ದರು ಎಂದರು.
ದೈಹಿಕ ಶಿಕ್ಷಣದ ಶಿಕ್ಷಕ ಜಿ.ಎಂ.ಹಿರೇಮಠ ಮಾತನಾಡಿ, ಜಾತಿ-ಬೇಧ ಎಂದಿಗೂ ಸಹಿಸದ ಗಾಂಧೀಜಿ ಸತ್ಯ-ನೀತಿ-ಸದಾಚಾರಗಳಿಗೆ ಮನ ಒಲಿಸಿಕೊಂಡಿದ್ದರು. ಸ್ವಾತಂತ್ರ್ಯ ಹಾಗೂ ಸ್ವಾತಂತ್ರ್ಯದ ನಂತರವೂ ಮಾನವನ ಸೇವೆಗಾಗಿ ತಮ್ಮ ಬದುಕನ್ನು ಗಾಂಧೀಜಿ ಹಾಗೂ ಶಾಸ್ತ್ರಿಜಿ ತೇಯ್ದಿದಾರೆ. ಇಂಥ ಮಹಾತ್ಮರನ್ನು ನೆನೆಯುವದು ನಮ್ಮಲ್ಲರ ಕರ್ತ್ಯವ್ಯ ಎಂದರು.
ಶ್ರೀಮತಿ, ಜಗದೇವಿ ಕೆ. ಶ್ರೀಮತಿ, ಕಾಲೇಖಾನ ಮೊದಲಾದವರು ಉಪಸ್ಥಿತರಿದ್ದರು.
Related Posts
Add A Comment