ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಮಾದಕ ವಸ್ತುಗಳ ಹಾವಳಿಯಿಂದಾಗಿ ಯುವಕರಾದಿಯಾಗಿ ಇಡೀ ಸಮಾಜವು ಅಪರಾಧಿಯಾಗುತ್ತಿದೆ. ಮಾದಕವಸ್ತುಗಳ ಸುಳಿಯಿಂದ ಯುವಜನಾಂಗವನ್ನು ತಪ್ಪಿಸಬೇಕಾದ ಅಗತ್ಯವಿದೆ ಎಂದು ಎಂಜಿವ್ಹಿಸಿಯ ಸಮಾಜಶಾಸ್ತ್ರದ ಸಹಾಯಕ ಪ್ರಾಧ್ಯಾಪಕಿ ಡಾ.ಸುನೀತ ಜಾಧವ ಹೇಳಿದರು.
ಪಟ್ಟಣದ ಬಿಎಲ್ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ಎನ್ಎಸ್ಎಸ್, ಯುಥ್ ರೆಡ್ ಕ್ರಾಸ್ ಸೊಸೈಟಿ ಹಾಗೂ ಸುಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಾದಕ ವಸ್ತು ಸೇವನೆ ಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಚಿಕ್ಕವಯಸ್ಸಿನ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ವಿಷಾದಕರ ಸಂಗತಿ. ಮಾದಕ ವಸ್ತುಸೇವನೆ ಎಂಬುವದು ಸಮಾಜಕ್ಕೆ ಅಂಟಿದ ಒಂದು ಅಂಟುರೋಗವಾಗಿದೆ. ಈ ಅಂಟುರೋಗವು ಹೀಗೆಯೇ ಮುಂದುವರಿದರೆ ಇಡೀ ಬದುಕನ್ನು ಕಳೆದುಕೊಳ್ಳಬೇಕಾಗುತ್ತದೆ.ಅಫೀಮು, ಗಾಂಜಾ, ತಂಬಾಕು, ಸಿಗರೇಟ್, ಸಾರಾಯಿ ಕೆಲವು ಪಾನೀಯಗಳಿಂದ ಮುಕ್ತರಾಗುವದು ಅವಶ್ಯವಾಗಿದೆ. ಪ್ರeವಂತರಾದ ಪ್ರತಿಯೊಬ್ಬರೂ ಸಮಾಜದಲ್ಲಿ ಮಾದಕ ವಸ್ತುಗಳಿಂದ ಆಗುವ ಪರಿಣಾಮದ ಕುರಿತು ಜಾಗೃತಿ ಮೂಡಿಸುವದು ತುಂಬಾ ಅಗತ್ಯವಿದೆ. ಮಾದಕ ವಸ್ತುಗಳ ದುಷ್ಪರಿಣಾಮದ ಕುರಿತು ಪ್ರಾತ್ಯಕ್ಷಿಕೆ ಮಾಡುವ ಮೂಲಕ ಸಮಾಜದ ಗಮನ ಸೆಳೆಯಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕ ಪ್ರೊ.ಸಿ.ಪಿ.ದಡೇಕರ, ಧರ್ಮಸ್ಥಳ ಸಂಘದ ಪ್ರತಿನಿಽ ಸಂಗೀತ ಮಡಿವಾಳರ, ಡಾ.ಎಸ್.ಎಂ.ಬಿಜಾಪುರ, ಪ್ರೊ.ಎಸ್.ಕೆ.ಚಿಕ್ಕನರ್ತಿ, ಎಂ.ಕೆ.ಯಾಧವ, ಡಾ.ಎಸ್.ಬಿ.ಜನಗೊಂಡ, ಪಿ.ಎಸ್.ನಾಟೀಕಾರ, ಆರ್.ಎಂ.ಮುಜಾವರ, ಆರ್.ಎನ್.ರಾಠೋಡ, ಅನ್ನಪೂರ್ಣ ಇತರರು ಇದ್ದರು.
ಸಮಾಜಶಾಸ್ತ್ರ ಪ್ರಾಧ್ಯಾಪಕ, ಎನ್ಎಸ್ಎಸ್ ವಿಭಾಗದ ಮುಖ್ಯಸ್ಥ ಡಾ.ವೈ.ಬಿ.ನಾಯಕ ಪ್ರಾಸ್ತವಿಕವಾಗಿ ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಬಿ.ಎಂ.ಸಾಲವಾಡಗಿ ನಿರೂಪಿಸಿ,ವಂದಿಸಿದರು.