ಉದಯರಶ್ಮಿ ದಿನಪತ್ರಿಕೆ
ಚಡಚಣ: ಸಂಗಮೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವಿಜಯಪುರ ಇವರ ಸಹಯೋಗದಲ್ಲಿ ಒಂದು ದಿನದ ಯುವನಿಧಿ ಯೋಜನೆಯ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಜಿಲ್ಲಾ ಉದ್ಯೋಗ ವಿನಿಮಯ ಉದ್ಯೋಗಧಿಕಾರಿ ಮಹೇಶ ಮಾಳವಾಡೇಕರ ಪ್ರಾಸ್ತಾವಿಕವಾಗಿ ಮಾತನಾಡಿ, ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿಗಳ ಯೋಜನೆಯಲ್ಲಿ ಒಂದಾದ ಯುವ ನಿಧಿ ಯೋಜನೆಯು ನಿರುದ್ಯೋಗ ಪದವೀಧರರು ಮತ್ತು ಡಿಪ್ಲೋಮಾ ಹೊಂದಿದವರಿಗೆ ನಿರುದ್ಯೋಗ ಭತ್ಯೆ ಒದಗಿಸುತ್ತಿದ್ದು ಪದವಿದರರಿಗೆ ೩೦೦೦ ರೂಪಾಯಿ ಮತ್ತು ಡಿಪ್ಲೋಮಾ ಹೊಂದಿದವರಿಗೆ ೧೫೦೦ ನಿರುದ್ಯೋಗ ಭತ್ಯೆಯನ್ನು ಕೊಡುತ್ತಿದ್ದು, ಕಾರಣ ನಿರುದ್ಯೋಗ ಯುವಕ ಮಿತ್ರರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಂಜಯ ಖಡಗೇಕರ ಮಾತನಾಡಿ, ಚಡಚಣ ತಾಲ್ಲೂಕಿನ ಯುವಕರು ಜಿಲ್ಲೆಯಲ್ಲೇ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಯುವನಿಧಿಗೆ ಹೆಸರು ನೋಂದಾಯಿಸಿಕೊಂಡಿದ್ದು, ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮದ ಯುವಕರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಯುವನಿಧಿಗೆ ನೊಂದಾಯಿಸಿ ಕೊಳ್ಳಬೇಕು ಎಂದರು.
ಚಡಚಣ ತಾಲ್ಲೂಕು ಪಂಚ ಗ್ಯಾರಂಟಿಗಳ ಅಧ್ಯಕ್ಷ ರವಿದಾಸ ಜಾಧವ ಮಾತನಾಡಿ, ವಿದ್ಯಾರ್ಥಿಗಳು ಪದವಿ, ಡಿಪ್ಲೊಮಾ ಮುಗಿಸಿದ ಮೇಲೆ ಕೆಲಸ ಹುಡುಕಲು, ಇತರೆ ಪರೀಕ್ಷೆಗಳನ್ನು ಬರೆಯಲು ಯುವನಿಧಿ ಆರ್ಥಿಕವಾಗಿ ಸಹಕಾರ ನೀಡುವ ಒಂದು ಯೋಜನೆಯಾಗಿದೆ ಎಂದು ಹೇಳಿದ ಅವರು, ಪದವಿ ಮುಗಿದ ನಂತರ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಅಥವಾ ಉತ್ತಮ ಉದ್ಯೋಗ ಪಡೆಯಬೇಕೆಂದು ಅನೇಕ ಕನಸುಗಳನ್ನು ಕಾಣುತ್ತಾರೆ. ಆದರೆ ಮನೆಯಲ್ಲಿ ಕೆಲಸ ಹುಡುಕಲು, ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು ಹಣ ಕೇಳಲು ಕಷ್ಟವಾಗುತ್ತದೆ. ಯುವಜನತೆಯ ಈ ಭಾರ ಕಡಿಮೆ ಮಾಡಲೆಂದೇ ರಾಜ್ಯ ಸರ್ಕಾರ ಯವಕರಲ್ಲಿ ಆರ್ಥಿಕ ಸ್ವಾವಲಂಬನೆ ತರಲು ಈ ಯೋಜನೆಯನ್ನು ಜಾರಿಗೊಳಿಸಿದೆ, ಅದನ್ನು ಫಲಾನುಭವಿಗಳಿಗೆ ತಲುಪಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಚಾರ್ಯರಾದ ಡಾ| ಎಸ್.ಬಿ. ರಾಠೋಡ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸರ್ಕಾರದ ಯುವನಿಧಿ ಯೋಜನೆಯ ಬಿತ್ತಿ ಪತ್ರಗಳನ್ನು ಬಿಡುಗಡೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಚಡಚಣ ತಾಲ್ಲೂಕು ಪಂಚ ಗ್ಯಾರಂಟಿಗಳ ಸದ್ಯಸರುಗಳಾದ ಮಲ್ಲಮ್ಮಾ ಪೂಜಾರಿ, ಅಶೋಕ ಬಳ್ಳೊಳ್ಳಿ, ಶಿವರಾಜ ಮಾನೆ, ಭೀಮಾಶಂಕರ ಪರಮಾನಂದ, ಮುಸ್ತಾಕ ಮುಲ್ಲಾ, ಪ್ರಭು ಹೀರೆಮಠ, ಚಡಚಣ ಪಟ್ಟಣದ ಬಸ ನಿಲ್ದಾಣದ ನಿಯಂತ್ರಕರಾದ ಬಸವರಾಜ ಕುಂಬಾರ, ಚಡಚಣ ತಾಲ್ಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕರು (ಪಂ ರಾಜ್) ಶಿವದತ್ತ ಕೊಟ್ಟಲಗಿ ಹಾಗೂ ಚಡಚಣ ತಾಲ್ಲೂಕು ಪಂಚಾಯಿತಿಯ ಸಿಬ್ಬಂದಿಗಳು, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಿಬ್ಬಂದಿಗಳು, ಮುಂತಾದವರು ಉಪಸ್ಥಿತರಿದ್ದರು.
ಐ.ಕ್ಯೂ.ಎ.ಸಿ ಸಂಯೋಜಕ ಡಾ.ಎಸ್.ಎಸ್.ದೇಸಾಯಿ ಸ್ವಾಗತಿಸಿದರು, ಪ್ರೊ. ಎಸ್.ಎಫ್.ಬಿರಾದಾರ ನಿರೂಪಿಸಿದರು, ವಿದ್ಯಾರ್ಥಿ ಕಲ್ಯಾಣ ವಿಭಾಗದ ಸಂಯೋಜಕ ಡಾ.ಮಯೂರ ಕುದರಿ ವಂದನಾರ್ಪಣೆ ಮಾಡಿದರು.