ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಿಕೋಟಾ ತಾಲೂಕಿನ ಅಧ್ಯಕ್ಷರನ್ನಾಗಿ ಎನ್‌ಪಿಎಸ್ ಸಂಘಟನೆ ನೇತಾರ, ಶಿಕ್ಷಕ ಚನ್ನಯ್ಯ ಈ. ಮಠಪತಿ ಇವರನ್ನು ನೇಮಿಸಲಾಗಿದೆ.
ನೂತನ ಅಧ್ಯಕ್ಷ ಚನ್ನಯ್ಯ ಮಠಪತಿ ಹಲವಾರು ವರ್ಷಗಳಿಂದ ನೌಕರರ ಸಂಘದ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಸಂಘದ ಬೆಳೆವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇವರ ಕ್ರೀಯಾಶೀಲ ಸಂಘಟನೆ ಗುರುತಿಸಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿಯಮನುಸಾರ ೨೦೨೪-೨೦೨೯ನೇ ಸಾಲಿನ ಅವಧಿಗೆ ಸತತ ಎರಡನೇ ಬಾರಿ ತಿಕೋಟಾ ತಾಲೂಕಿನ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಸುರೇಶ ಶೆಢಶ್ಯಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.