ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಯ ಕರ್ನಾಟಕ ಸಂಘಟನೆ ಜಿಲ್ಲಾ ಘಟಕದ ವತಿಯಿಂದ ಕೋರವಾರ ಗ್ರಾಮದಲ್ಲಿ ವಿವಿಧ ಬೇಡಿಕೆಗಳು, ಹಾಗೂ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮುಖಂಡರು ಮಾತನಾಡಿ, ಕೋರವಾರ ಗ್ರಾಮವನ್ನು ಹೋಬಳಿ ಮಾಡುವುದು, ಕೋರವಾರ ಗ್ರಾಮದ ಶ್ರೀ ಬಸವೇಶ್ವರ ವೃತ್ತದಿಂದ ಕೆ,ಇ,ಬಿ,ಯವರೆಗೆ ಸರಕಾರಿ ರಸ್ತೆ ಅಗಲಿಕರಣ ಮಾಡುವುದು, ಕೋರವಾರ ಗ್ರಾಮದ ಸರಕಾರಿ ಪ್ರೌಢ ಶಾಲೆಯಲೆ ಮತ್ತು ಪದವಿಪೂರ್ವ ಕಾಲೇಜು ಮಂಜೂರು ಮಾಡುವುದು, ಕೋರವಾರ ಗ್ರಾಮದ ಪೋಲಿನ ಸ್ಟೇಷನ್ ಎದುರಿಗೆ ಶ್ರೀ ಮಹೇಶ್ವರಿ ಲಿಕ್ಕರ್, ಮದ್ಯದ ಅಂಗಡಿಯನ್ನು ಬೇರೆಕಡೆ ಸ್ಥಳಾಂತರಿಸುವುದು, ಕೋರವಾರ ಗ್ರಾಮದಲ್ಲಿ ಇರುವ ಸಾರ್ವಜನಿಕ ಗ್ರಂಥಾಲಯ ಸ್ಥಳ ೧೦೦/೬೦, ಜಾಗ ಅತೀಕ್ರಮಣ ಮಾಡಿರುತ್ತಾರೆ, ಗ್ರಾಮದಲ್ಲಿ ಬರುವ ವಿವಿಧ ರಸ್ತೆಗಳು, ಮತ್ತು ಚರಂಡಿಗಳು ಸಾರ್ವಜನಿಕರು, ಅತಿಕ್ರಮಣ ಮಾಡಿರುವ ಬಗ್ಗೆ, ಗ್ರಾಮದ ಎಲ್ಲಾ ವಾರ್ಡಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಇದ್ದು ಅದು ಸರಿಯಾಗಿ ಪೂರೈಕೆ ಆಗುತ್ತಿಲ್ಲ.
ಈ ಮೇಲಿನ ಎಲ್ಲಾ ಸಮಸ್ಯೆಗಳ ಬಗ್ಗೆ ಸಂಬಂದಿಸಿದಂತೆ ಹಲವು ಬಾರಿ ಮೇಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕುಡಾ ಇದುವರೆಗೂ ಸ್ಪಂದಿಸಿರುವುದಿಲ್ಲ. ಒಂದು ವೇಳೆ ನಮ್ಮ ಮನವಿಗೆ ಒಂದು ವಾರದೊಳಗಾಗಿ ಸ್ಪಂದಿಸದಿದ್ದರೆ ಜಯ ಕರ್ನಾಟಕ ಸಂಘಟನೆ ಹಾಗೂ ವಿವಿಧ ಸಂಘಟನೆಗಳು, ಮತ್ತು ಗ್ರಾಮಸ್ಥರು ಸೇರಿ ರಸ್ತೆ ತಡೆ ಮಾಡಿ ಉಗ್ರವಾದ ಹೋರಾಟವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಗಮೇಶಗೌಡ ದಾಶ್ಯಾಳ ಜಿಲ್ಲಾಧ್ಯಕ್ಷರು, ಸಿದ್ದರಾಜ ಹೋಳಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ, ಪಿಂಟು ಗಬ್ಬೂರ ಜಿಲ್ಲಾ ಕಾರ್ಯಧ್ಯಕ್ಷರು, ಮುಕದಸ್ ಇನಾಮದಾರ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಚನ್ನಪ್ಪಗೌಡ ಎಸ್, ಜಿಲ್ಲಾ ವಕ್ತಾರರು, ರೀಯಾಜ ಪಾಂಡು ಜಿಲ್ಲಾ ಉಪಾಧ್ಯಕ್ಷರು, ಶಿವರಾಜಗೌಡ ಪಾಟೀಲ, ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳು, ಖಾಜಾಸಾಬ ಪಾಂಡು, ಜಿಲ್ಲಾ ಕಾರ್ಯದರ್ಶಿಗಳು, ಹಾಗೂ ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಮುಖಂಡರಾದ ಗೀರಿಶಕುಮಾರ ಇಟ್ಟಂಗಿ, ತುಕಾರಾಮ ರಾಠೋಡ, ರಾಜೇಂದ್ರ ಉಪ್ಪಾರ,ಅಪ್ಪು ಹಳ್ಳಿ, ಶಾಂತೇಶ ವಸ್ತ್ರದ, ಮತ್ತು ಮಹಿಳಾ ಘಟಕದ ಪದಾಧಿಕಾರಿಗಳು ಲಕ್ಷ್ಮೀ ದಾಶ್ಯಾಳ, ನಿಲಾಂಬಿಕಾ ಬಿರಾದಾರ, ಅನೀತಾ ಬಾಲಗಾಂವ, ಸಂಗೀತಾ ಕಾಲ್ಯಾಣಿ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.