ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದ ಕಿಲ್ಲಾಗಲ್ಲಿಯಲ್ಲಿರುವ ಶ್ರೀ ಗುಗ್ಗಳ ಬಸವೇಶ್ವರ ಹಾಗೂ ಶ್ರೀ ವೀರಭದ್ರೇಶ್ವರರ ಜಾತ್ರಾ ಮಹೋತ್ಸವ ವೈಭವದಿಂದ ಜರುಗಿತು.
ಮಂಗಳವಾರ ಶ್ರೀ ವೀರಭದ್ರೇಶ್ವರರ ಪಲ್ಲಕ್ಕಿ ಹಾಗೂ ಕಳಸವು ತಂಗಡಗಿಯ ಕೃಷ್ಣಾ ನದಿಯ ಗಂಗಸ್ಥಳಕ್ಕೆ ಕರೆದುಕೊಂಡು ಹೋಗಲಾಗಿತ್ತು, ಇತ್ತ ದೇವಸ್ಥಾನದಲ್ಲಿ ಮೂಲ ಮೂರ್ತಿಗಳಿಗೆ ಮಹಾರುದ್ರಾಭಿಷೇಕ ನೆರವೇರಿಸಲಾಯಿತು. ಬಳಿಕ ಪಟ್ಟಣದ ಪಿಲೇಕಮ್ಮದೇವಿ ದೇವಸ್ಥಾನದಿಂದ ಸಕಲ ವಾದ್ಯ ವೈಭವಗಳೊಂದಿಗೆ ಹಾಗೂ ಪುರವಂತರ ಸೇವೆಯೊಂದಿಗೆ ಬಸವೇಶ್ವರ ವೃತ್ತ, ಮುಖ್ಯ ಬಜಾರ, ದ್ಯಾಮವ್ವದೇವಿ ದೇವಸ್ಥಾನ, ಸರಾಫ್ ಬಜಾರ್ ಮಾರ್ಗವಾಗಿ ವೀರಭದ್ರೇಶ್ವರರ ಪಲ್ಲಕ್ಕಿ ಹಾಗೂ ಕಳಷಗಳನ್ನು ದೇವಸ್ಥಾನಕ್ಕೆ ಕರೆತರಲಾಯಿತು. ಬಳಿಕ ಮಹಾ ಮಂಗಳಾರುತಿ, ಮಾಹಾ ನೈವೇದ್ಯ ಹಾಗೂ ಮಹಾಪ್ರಸಾದ ಸೇವೆ ಜರುಗಿತು.
ಈ ವೇಳೆ ಪ್ರಮುಖರಾದ ಉದಯ ರಾಯಚೂರ, ರಾಜೇಂದ್ರಗೌಡ ರಾಯಗೊಂಡ, ನಿವೃತ್ತ ಶಿಕ್ಷಕ ಎಸ್.ಬಿ.ಕನ್ನೂರ ಮಾತನಾಡಿ ಜಾತ್ರೆಯ ವಿಶೇಶತೆಯನ್ನು ಬಣ್ಣಿಸಿದರು. ಅಪ್ಪಣ್ಣ ಸಿದ್ದಾಪೂರ, ಗುರಯ್ಯ ಮುದ್ನೂರಮಠ, ಚಂದ್ರಶೇಖರ ಪ್ಯಾಟಿಗೌಡರ, ಶಶಿ ಮುತ್ತಗಿ, ರುದ್ರಯ್ಯ ಹಿರೇಮಠ, ನಾಗಭೂಷಣ ಸಿದ್ದಾಪೂರ, ರಾಮಚಂದ್ರ ಕುಪ್ಪಸ್ತ, ಶಾಂತಪ್ಪ ಚಟ್ಟಿ, ವಿರೇಶ ಅಂಗಡಿ, ವಿರೇಶ ಕುಂಬಾರ ಪರವಂತರ ಸೇವೆ ನೀಡಿದರು. ಅರುಣ ಹಿರೇಮಠ, ಸಂಪತ್ತ ಪ್ಯಾಟಿಗೌಡರ, ಬಸು ನಾಶಿ, ಸಿದ್ದಲಿಂಗಯ್ಯ ಹಿರೇಮಠ, ಸಿದ್ದಲಿಂಗ ಮೋಟಗಿ, ವೃಷಭ ಮುದ್ನೂರಮಠ, ಮಹೇಶ ಹಿಕ್ಕಿಮಠ, ವಿಶ್ವ ಹಿಕ್ಕಿಮಠ, ಶಿವಾನಂದ ಹಿರೇಮಠ, ಅಶೋಕ ಹುರಕಡ್ಲಿ, ಮಲ್ಲು ಸಿದ್ದಾಪೂರ, ಡಿ.ಎಸ್.ಚಳಗೇರಿ ಸೇರಿದಂತೆ ಹಲವರು ಜಾತ್ರೆಯ ವೈಭವದಲ್ಲಿ ತಮ್ಮ ಸೇವೆ ನೀಡಿದರು.