ತಿಕೋಟಾ: ಸರಕಾರಿ ಸಂಯುಕ್ತ ಪ್ರೌಢಶಾಲೆ ಬಾಬಾನಗರ 2003-04 ನೇ ಸಾಲಿನ ಎಸ್. ಎಸ್. ಎಲ್. ಸಿ ವಿದ್ಯಾರ್ಥಿಗಳಿಂದ ಮರಳಿ ಗೂಡಿಗೆ ವಂದನಾರ್ಪಣೆ ಸಮ್ಮಿಲನ ಕಾರ್ಯಕ್ರಮ ರವಿವಾರ ನಡೆಯಿತು.
ಮುಖ್ಯೋಪಾಧ್ಯಾಯ ಎಲ್.ಟಿ. ಮುಲ್ಲಾ ಮಾತನಾಡಿ ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಕಲಿಸಿದ ಶಿಕ್ಷಕರಿಗೆ ಗೌರವ ಸಮರ್ಪಿಸುವ ಮೂಲಕ ನಿಮ್ಮ ಗುರುವಿನ ಶ್ರೇಷ್ಠತೆಯನ್ನು ತಿಳಿಸಿದ್ದಿರಿ ಎಂದರು.
ಅತಿಥಿಯಾಗಿ ಭಾಗವಹಿಸಿದ ಆರ್.ಎಸ್.ನಿಡೋಣಿ ಮಾತನಾಡಿ, ಅಕ್ಷರ ಜ್ಞಾನ ಕಲಿಸಿದರೆ ಅಷ್ಟೇ ಗುರು ಅಲ್ಲ, ಪ್ರತಿ ಸಣ್ಣ ಅರಿವಿನ ಬಗ್ಗೆ ತಿಳಿಸಿದವರು ಕೂಡ ಗುರು ಎಂದು ಹೇಳಿದರು.
ಬದುಕು ರೂಪಿಸಿದ ಶಿಕ್ಷಕರಿಗೆ ಎಲ್ಲ ಶಿಕ್ಷಕರಿಗೆ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಎಸ್. ಎಲ್. ಇಂಗಳೇಶ್ವರ, ಎಸ್.ಜಿ.ಪುಕಾಳೆ, ಪರಶು ಕಡಪಟ್ಟಿ, ಮುತ್ತಪ್ಪ ತೇಲಿ, ಪ್ರೀತಿ ಬಿರಾದಾರ, ಶಿವಲೀಲಾ ಯಾಳಗಿ,ಮಲ್ಲು ಚೌಧರಿ, ಈರಯ್ಯ ವಿರಕ್ತಮಠ, ಶ್ರೀಶೈಲ ವಿರಕ್ತಮಠ, ದುಂಡಪ್ಪ ಶಿಂದೆ, ಕಿರಣ ಪಂಡರೆ, ರಾಜು ನಿಂಬರಗಿ, ಪ್ರಕಾಶ ಪೂಜಾರಿ, ಪಾಲೀಶ್ ಆಯತವಾಡ, ಕಲ್ಲಪ್ಪ ಕರಜಗಿ, ಶಂಕರ ತೇಲಿ, ಸಿದ್ದು ಮುತ್ತುರ, ಮತ್ತು ವಿದ್ಯಾರ್ಥಿನಿಯರಾದ ಬೋರಮ್ಮ ಮಸಳಿ, ಬಾಗಿರಥಿ ಕುಸನಾಳ, ಭಾಗೀರಥಿ ಶಡಶ್ಯಾಳ ನೀಲಮ್ಮ ಮಠಪತಿ, ಝರೀನಾ, ಶ್ರೀದೇವಿ, ಶಾರದಾ, ರಾಜೇಶ್ವರಿ, ತಾರಾ,
ಗೀತಾ, ಶಿವಲೀಲಾ, ನೀಜಾಮಲಿ, ಸಿರಾಜಲಿ, ಮಲ್ಲಪ್ಪ ತೇಲಿ, ರೇಣುಕಾ ದೇಮಣ್ಣವರ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

