ವಿಜಯಪುರ: ಬಿಜಾಪುರ ಜಿಲ್ಲಾ ಆಫಸೆಟ್ ಪ್ರಿಂಟರ್ಸ್ ಅಸೋಸಿಯೇಶನ್ ವತಿಯಿಂದ ನಗರದ ಶಾಪೇಟೆಯಲ್ಲಿರುವ ಅಸೋಸಿಯೇಶನ್ ಕಚೇರಿಯಲ್ಲಿ ಸೋಮವಾರ ಮಹಾತ್ಮಗಾಂಧೀಜಿ ಹಾಗೂ ಲಾಲಬಹಾದ್ದೂರ ಶಾಸ್ತ್ರಿಜಿ ಜಯಂತಿ ಅಂಗವಾಗಿ ಇಬ್ಬರೂ ಮಹನೀಯರ ಭಾವಚಿತ್ರಕ್ಕೆ ಗೌರವನ ನಮನ ಸಲ್ಲಿಸುವ ಮೂಲಕ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು.
ಸೋಮವಾರ ಸಂಘದ ಕಚೇರಿಯಲ್ಲಿ ಆಯೋಜಿಸಲಾದ ಜಯಂತಿ ಕಾರ್ಯಕ್ರಮದಲ್ಲಿ ಅಸೋಸಿಯೇಶನ್ ಅಧ್ಯಕ್ಷ ಆನಂದ ಬಗಾದಿ ಅವರು ಮಾತನಾಡಿ, ಭಾರತವನ್ನು ಪರಕೀಯರ ಗುಲಾಮಗಿರಿಯಿಂದ ಮುಕ್ತಿಗೊಳಿಸಿ ಸ್ವಾತಂತ್ರ್ಯ ದೊರಕಿಸಿಕೊಡುವದರಲ್ಲಿ ಮುಖ್ಯವಾಗಿ ಶಾಂತಿ ಮತ್ತು ಅಹಿಂಸಾ ಮಾರ್ಗವನ್ನು ಅನುಸರಿಸಿ ಹೋರಾಟ ಮಾಡಿದ ಮಹಾತ್ಮಾ ಗಾಂಧಿಜಿ ಮತ್ತು ಭಾರತದ ದ್ವಿತೀಯ ಪ್ರಧಾನಿಯಾಗಿ ಸದೃಢ ಭಾರತವನ್ನು ಮಾರ್ಪಡಿಸಲು ಶ್ರಮವಹಿಸಿದ ನಾಯಕ ಲಾಲ ಬಹಾದ್ದೂರ ಶಾಸ್ತ್ರಿಜಿಯವರು ಎರಡು ಅಪರೂಪದ ರತ್ನಗಳು ಎಂದು ಹೇಳಿದರು.
ಅಸೋಸಿಯೇಶನ್ ಸದಸ್ಯರಾದ ರವೀಂದ್ರ ಕುಲಕರ್ಣಿ, ಪ್ರಕಾಶ ಮಠ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಘದ ಖಜಾಂಚಿ ಶಿವಮೂರ್ತಿ ಗೊಳಸಂಗಿಮಠ, ಕಾರ್ಯದರ್ಶಿ ಮಲ್ಲಿಕಾರ್ಜುನ ಆಲಗೂರ, ನಿರ್ದೇಶಕರಾದ ವಸಂತ ನಾಯಕರ, ಮಹಾಂತೇಶ ಹಿರೇಮಠ, ಶಿವಾನಂದ ಗುದ್ದಿ, ಸಂಗಮೇಶ ಹಿರೇಮಠ, ದಸ್ಯರಾದ ಈರಣ್ಣ ಅಣೆಪ್ಪನವರ, ಗೌತಮ ಪಾಟೀಲ, ಬಸವರಾಜ ಗೋಳಸಂಗಿಮಠ, ಮಲ್ಲಿಕಾರ್ಜುನ ಯರನಾಳ, ಸಂತೋಷ ಶ್ರೀಶೈಲಪ್ಪಗೋಳ ಹಾಗೂ ಮುದ್ರಣ ಬಾಂಧವರು ಉಪಸ್ಥಿತರಿದ್ದು ಗೌರವ ಸಲ್ಲಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

