ಜಾಲವಾದ ಖಾಜಾಸಾಹೇಬ ದರ್ಗಾ ಉರುಸ್ | ಚಿಂತನಗೋಷ್ಠಿ | ಬಹುಮಾನ ವಿತರಣೆ
ದೇವರಹಿಪ್ಪರಗಿ: ಧಾರ್ಮಿಕ ಚಿಂತನಗೋಷ್ಠಿಗಳು ಸಾಮಾಜಿಕ ಸಾಮರಸ್ಯಕ್ಕೆ ಸಹಕಾರಿಯಾಗಿವೆ ಎಂದು ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆಯ ನೇತ್ರತಜ್ಞ ಪ್ರಭುಗೌಡ ಲಿಂಗದಳ್ಳಿ(ಚಬನೂರ) ಹೇಳಿದರು.
ತಾಲ್ಲೂಕಿನ ಜಾಲವಾದ ಗ್ರಾಮದಲ್ಲಿ ಖಾಜಾಸಾಹೇಬ ದರ್ಗಾ ಉರುಸ್ ಅಂಗವಾಗಿ ಭಾನುವಾರ ಜರುಗಿದ ಚಿಂತನಗೋಷ್ಠಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸೌಹಾರ್ದಯುತ ಜೀವನಕ್ಕೆ ಜಾಲವಾದ ಗ್ರಾಮ ಮಾದರಿಯಾಗಿದೆ. ಇಂದಿನ ಉರುಸ್ ಕಾರ್ಯಕ್ರಮದಲ್ಲಿ ಜಾತ್ಯಾತೀತ ತತ್ವದಡಿ ಸಹೋದರರಂತೆ ಎಲ್ಲರೂ ಪಾಲ್ಗೊಂಡಿರುವುದು ಹೆಮ್ಮೆಯ ವಿಷಯ ಎಂದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ವಿಜಯಪುರ ಸಿಕ್ಯಾಬ್ ಮಹಿಳಾ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಯು.ಎನ್.ಕುಂಟೋಜಿ ಮಾತನಾಡಿದರು.
ಸಾನಿಧ್ಯ ವಹಿಸಿದ್ದ ದೇವರಹಿಪ್ಪರಗಿ ಗದ್ದುಗೆಮಠದ ಮಡಿವಾಳೇಶ್ವರ ಸ್ವಾಮೀಜಿ, ಕಿರಿಯ ಮಹಾಂತಶ್ರೀ ಮಸಬಿನಾಳದ ಸಿದ್ಧರಾಮಸ್ವಾಮಿಜೀ ಆಶೀರ್ವಚನ ನೀಡಿದರು.
ಜೆಡಿಎಸ್ ಧುರೀಣ ಸಚೀನಗೌಡ ಪಾಟೀಲ(ಕುದರಿ ಸಾಲವಾಡಗಿ) ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಚ್.ವಾಲೀಕಾರ, ಶಿಕ್ಷಕ ಕಬೂಲ್ ಕೊಕಟನೂರ, ಡಿ.ಎ. ಇನಾಮದಾರ, ಶಂಕರ ಮಣೂರ, ವೀರೇಶ ಕುದರಿ, ಲಕ್ಷಣ ಕೆಂಗಟುಗಿ, ಮಾಳು ಚಿತ್ತಾಪೂರ, ಸಿದ್ಧರಾಮ ಗುಂಡಗಿ, ರಾಮನಗೌಡ ಪಾಟೀಲ, ಸತೀಶ ರಾಠೋಡ, ಸುರೇಶ ರಾಠೋಡ, ಅಮೀನಸಾ ಇನಾಮದಾರ, ಚಂದ್ರಶೇಖರ ದೊಡಮನಿ ಸೇರಿದಂತೆ ಗ್ರಾಮದ ಹಿರಿಯರು ಇದ್ದರು.