ಬೆಳಗಾವಿ: ತ್ರಿಭಾಷಾ ಕವಿ, ಶಿವಯೋಗಿ ‘ಪದ್ಮಭೂಷಣ’ ಡಾ. ಪಂ. ಪುಟ್ಟರಾಜ ಕವಿ, ಗವಾಯಿಗಳವರ ಸಾಹಿತ್ಯ ಸೇವೆಯ ಸ್ಮರಣೆಗಾಗಿ ಡಾ. ಪಂ.ಪುಟ್ಟರಾಜ ಸೇವಾ ಸಮಿತಿ (ರಿ) ಗದಗ ವತಿಯಿಂದ ‘ಪದ್ಮಭೂಷಣ’ ಡಾ. ಪಂ.ಪುಟ್ಟರಾಜ ಶಿವಯೋಗಿ ಭಕ್ತಿ ಸಾಹಿತ್ಯೋತ್ಸವ-೨೩ ಸಮಾರಂಭವನ್ನು ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ (ರಿ) ಗದಗ ಸಂಯುಕ್ತ ಆಶ್ರಯದಲ್ಲಿ ಅ.೦೧ ರಂದು ಬೆಳಿಗ್ಗೆ ೧೦-೩೦ ರಿಂದ ಸಂಜೆ ೭-೩೦ ವರೆಗೆ ಬೆಳಗಾವಿ ನಗರದ ಸರಸ್ವತಿ ವಾಚನಾಲಯ ಕೋರೆಗಲ್ಲಿ ಶಹಪೂರದಲ್ಲಿ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ ೧೦-೩೦ ನಡೆಯುವ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ಬೆಳಗಾವಿ ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ ವಹಿಸಿಕೊಳ್ಳುವರು. ದುರದುಂಡೇಶ್ವರ ಶಾಖಾಮಠದ
ಶಿವ ಪಂಚಾಕ್ಷರಿ ಸ್ವಾಮೀಜಿ ಇವರ ಸಮ್ಮುಖವಿರುತ್ತದೆ. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸಮಾರಂಭ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯೆ ಮಂಗಳಾ ಸುರೇಶ ಅಂಗಡಿ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಶರಣ ಸಾಹಿತ್ಯ ಪರಿಷತ್ತು ಗೋಕಾಕ ತಾಲೂಕಾಧ್ಯಕ್ಷ ಮಹಾಂತೇಶ ತಾಂವಶಿ ಆಗಮಿಸಲಿದ್ದಾರೆ.
ಪಂ.ಪುಟ್ಟರಾಜ ಸೇವಾ ಸಮಿತಿ ಸಂಘಟನಾ ಕಾರ್ಯದರ್ಶಿ
ಶಿವಬಸಯ್ಯ ಚರಂತಿಮಠ ಪೂಜ್ಯರ ಕುರಿತು ಉಪನ್ಯಾಸ ನೀಡಲಿದ್ದಾರೆ.
ಡಾ. ಪಂ.ಪುಟ್ಟರಾಜ ಸೇವಾ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಚನ್ನವೀರಸ್ವಾಮಿ ಹಿರೇಮಠ (ಕಡಣಿ) ಪ್ರಾಸ್ತಾವಿಕ ಮಾತುಗಳಾಡಲಿದ್ದಾರೆ.
Related Posts
Add A Comment