ವಿಜಯಪುರ: ಅಸೋಸಿಯೇಶನ್ ಆಫ್ ಸ್ಟೇಟ್ ರೋಡ್ ಟ್ರಾನ್ಸ್ಪೋರ್ಟ್ ಅಂಡರ್ ಟೆಕ್ಕಿಂಗ್ ವತಿಯಿಂದ ಸೆ.೨೧ ರಿಂದ ೨೩ರವರೆಗೆ ಗುಜರಾತಿನ ಅಹಮದಾಬಾದ್‌ನಲ್ಲಿ ಹಮ್ಮಿಕೊಳ್ಳಲಾದ ಅಂತರ ನಿಗಮದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ತೃತೀಯ ಸ್ಥಾನ ಪಡೆದುಕೊಂಡಿದೆ.
ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ತಾಳಿಕೋಟೆ ಘಟಕದ ಅಮರೇಶ ಎಸ್.ಮೇಟಿ, ಬಸವನಬಾಗೇವಾಡಿ ಘಟಕದ ಎಸ್.ಆರ್.ಶೇಖ ಹಾಗೂ ಆಯ್.ಆಯ್.ಐರೊಡಗಿ ಅವರ ಸಾಧನೆಯನ್ನು ಮೆಚ್ಚಿ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಮೊಹ್ಮದ ಫೈಜ್ ಹಾಗೂ ಅಧಿಕಾರಿ ಸಿಬ್ಬಂದಿಗಳು ಕ್ರೀಡಾಪಟುಗಳನ್ನು ಸನ್ಮಾನಿಸಿ ಗೌರವಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿ: ಕೆಕೆಆರ್‌ಟಿಸಿಗೆ ತೃತೀಯ ಸ್ಥಾನ
Related Posts
Add A Comment