ಸಹ ಪ್ರಾಧ್ಯಾಪಕ ಡಾ.ಹೆಚ್.ಎಂ.ಮುಜಾವರ ಬೀಳ್ಕೊಡುಗೆ ಸಮಾರಂಭ
ವಿಜಯಪುರ: ಒಳೆಯ ಮನೋಭಾವವುಳ್ಳ ವ್ಯಕ್ತಿತ್ವ, ಕರ್ತವ್ಯದಲ್ಲಿ ಪ್ರಾಮಾಣಿಕತೆ, ಸೇವೆಯಲ್ಲಿ ಸಾರ್ಥಕತೆ ಮೆರೆದು ನೀವೃತ್ತಿ ಹೊಂದುತ್ತಿರುವ ಡಾ.ಹೆಚ್.ಎಂ. ಮುಜಾವರ ಅವರ ಸೇವೆ ಅನನ್ಯ ಎಂದು ಪ್ರಾಚಾರ್ಯ ಡಾ.ಆರ್.ಎಂ.ಮಿರ್ದೆ ಹೇಳಿದರು.
ನಗರದ ಬಿ ಎಲ್ ಡಿ ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸಹ ಪ್ರಾಧ್ಯಾಪಕರಾದ ಡಾ.ಹೆಚ್.ಎಂ ಮುಜಾವರ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ವೃತ್ತಿಯಲ್ಲಿ ದಕ್ಷತೆ ಪ್ರಾಮಾಣಿಕತೆ ಮೆರೆದು ಮಹಾವಿದ್ಯಾಲಯದ ಸಿಬ್ಬಂದಿಗೆ ಪ್ರೇರಣೆದಾಯಕವಾಗಿದ್ದಾರೆ. ಎನ್ ಎನ್ಎಸ್ಎಸ್ ಸ್ವಯಂ ಸೇವಕ, ಸೇವಾದಳ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು ಯುವ ಪ್ರತಿಭಾವಂತರಿಗೆ ಸ್ಪೂರ್ತಿಯಾಗಿದ್ದಾರೆ. ಇಲ್ಲಿಯವರೆಗೆ ಅವರು ನಮಗೆ ನೀಡಿದ ಸಲಹೆ ಸೂಚನೆಗಳು ಎಂದೆಂದಿಗೂ ಅದರ್ಶಪ್ರಾಯವಾಗಿವೆ. ಮುಂದಿನ ನಿವೃತ್ತಿ ಜೀವನ ಸುಖಕರ ಸಾಗಲಿ ಎಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಜಾವೀದ ಜಮಾದಾರ ಮಾತನಾಡಿದರು.
ಬಿ.ಎಲ್.ಡಿ.ಇ ಸಂಸ್ಥೆಯ ಆಡಳಿತಾಧಿಕಾರಿ ಡಾ.ಕೆ.ಜಿ.ಪೂಜಾರಿ, ಉಪಪ್ರಾಚಾರ್ಯ ಪ್ರೊ.ಎ.ಬಿ.ಪಾಟೀಲ, ಡಾ.ಹೆಚ್.ಎಂ ಮುಜಾವರ ದಂಪತಿ, ಜಾವೀದ ಜಮಾದಾರ, ನೀವೃತ್ತ ಪ್ರಾಚಾರ್ಯ ಡಾ.ಯು.ಎಸ್ ಪೂಜೇರಿ, ಪ್ರೊ.ಸಿ.ಎನ.ಚೌಗಲೆ, ಡಾ. ಎಸ್.ಟಿ ಮೇರವಾಡೆ, ಐಕ್ಯೂಎಸಿ ನಿರ್ದೇಶಕ ಡಾ.ಪಿ.ಎಸ್.ಪಾಟೀಲ, ಡಾ.ಕೆ ಮಹೇಶ ಕುಮಾರ, ಡಾ.ಶ್ರೀನಿವಾಸ ದೊಡ್ಡಮನಿ, ಸೇವಾದಳ ಸ್ವಯಂ ಸೇವಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರೊ.ಜಯಶ್ರೀ.ಡಿ.ಹೊರಕೇರಿ ಕಾರ್ಯಕ್ರಮ ನಿರೂಪಿಸಿದರು. ಡಾ.ಸ್ವಾತಿ ಪಾಟೀಲ ಪರಿಚಯಿಸಿದರು.