ಲೇಖನ
– ರಶ್ಮಿ ಕೆ. ವಿಶ್ವನಾಥ್
ಮೈಸೂರು
ಉದಯರಶ್ಮಿ ದಿನಪತ್ರಿಕೆ
‘ಈ ಹಾಳಾದ್ ಮೊಬೈಲ್ ಬಂದು ಮಕ್ಕಳೆಲ್ಲ ಹಾಳು’ ಹೌದಾ.. ಹಾಳಾದ್ರಾ?..ಮಕ್ಕಳಾ?.. ಹಾಗಾದ್ರೆ ನೀವು…!? ಮುಟ್ಟೋದೇ ಇಲ್ವಾ.!? ಮೊಬೈಲ್ ನಿಂದ ಏನು ಪ್ರಯೋಜನವೇ ಆಗಿಲ್ವಾ.!? ಒಮ್ಮೆ ಯೋಚಿಸಿ
ಇಷ್ಟೆಲ್ಲ ಬುದ್ದಿವಂತಿಕೆ ಇರುವ ದೊಡ್ಡವರಿಗೇನೆ ಮೊಬೈಲ್ ಬಿಟ್ಟು ಇರ್ಲಿಕ್ಕೆ ಆಗ್ತಾ ಇಲ್ಲ, ಇನ್ನ ಮಕ್ಕಳು? ಸಮಸ್ಯೆ ಎಲ್ಲಿಲ್ಲ ಹೇಳಿ? ಎಲ್ಲ ಕಡೆ ಇದೆ ದೊಡ್ಡವರು -ಚಿಕ್ಕವರು, ಬಡವರು – ಶ್ರೀಮಂತರು ಎಲ್ಲ ಕಡೆ. ಅದನ್ನ ನಾವು ತೆಗೆದುಕೊಳ್ಳುವ ರೀತಿಯಲ್ಲಿ..
ಮೊಬೈಲ್ ಇದ್ದರೆ ಒಳ್ಳೆಯದಾಯಿತು ಎಲ್ಲಾ ಕೆಲಸಗಳು ಕೈ ಅಳತೆಯಲ್ಲಿಯೇ ಆಗುತ್ತಿವೆ ಎಂದುಕೊಳ್ಳಬಹುದು. ಮೊಬೈಲ್ ಇಲ್ಲ ಎಂದರೆ.. “ಒಳ್ಳೆಯದಾಯಿತು” ಎನ್ನಲು ಅದೀತೆ.?? ಹಾಗೆಂದುಕೊಳ್ಳೋಣ, ಮೊಬೈಲ್ ಹುಚ್ಚು ಕಡಿಮೆ ಮಾಡಿಕೊಳ್ಳೋಣ, ಮೊಬೈಲ್ ಸ್ಟ್ರಾಂಗಾ ನನ್ನ ಮನಸ್ಸು ಸ್ಟ್ರಾಂಗಾ ನೋಡೋಣ ಎಂದು ವಾಟ್ಸಾಪ್ ಅನ್ಇನ್ಸ್ಟಾಲ್ ಮಾಡಿದೆ. ಗೆಳತಿ ಬಂದವರೇ “ಅಯ್ಯೋ ದೇವಾ.. ನೀವು ಇನ್ನ ಅದನ್ನ ಮಾಡಿಲ್ವಾ ಮೊನ್ನೆನೇ ಗ್ರೂಪ್ ನಲ್ಲಿ ಮೆಸೇಜ್ ಹಾಕಿದ್ದಾರಲ್ಲ..?!” ಅಂದ್ರು. “ಹೌದಾ..” ಎಂದು ಎದ್ದು ಬಿದ್ದು ಇನ್ಸ್ಟಾಲ್ ಮಾಡಿಕೊಂಡೆ. ಇಷ್ಟೆರೀ ಕಥೆ. ನಾವು ಬೇಡಾ ಅಂದರು ಅದು ನಮ್ಮನ್ನು ಬಿಡದಷ್ಟು ಮಟ್ಟಿಗೆ ನಮ್ಮ ಜೀವನದ ಒಂದು ಭಾಗವೇ ಆಗಿಹೋಗಿದೆ. ಇವಾಗ ಹಣವಿಲ್ಲದೆ ಎಲ್ಲಿಗೆ ಬೇಕಾದರು ಹೋಗಬಹುದು ಆದರೆ ಮೊಬೈಲ್ ಇಲ್ಲದೆ… ಅದ್ಹೇಗೆ ಸಾಧ್ಯ?! ಒಂದು ಅಂಗವೇ ಕಳಚಿದಂತಲ್ಲವೆ?

ಮೊಬೈಲ್ ಬಳಕೆ ಇಂದಿನ ದಿನಗಳಲ್ಲಿ ಎಷ್ಟು ಅವಶ್ಯಕ ??
ಯಾರೋ ಒಬ್ಬರಿಗೆ ಆಕ್ಸಿಡೆಂಟ್ ಆದರೆ ಕ್ಷಣ ಮಾತ್ರದಲ್ಲಿ ಆಂಬುಲೆನ್ಸ್ ಕರೆಸಿ, ಬ್ಲಡ್ ಕೊಡಿಸಿ ಮನೆಯವರಿಗೆ ವಿಚಾರ ತಿಳಿಸಿ, ಹಣ ಹೊಂದಿಸಿ ಆತನನ್ನು ಬದುಕಿಸಿದ್ದು ಮೊಬೈಲೇ ಅಲ್ವಾ?!
ಯಾವುದೇ ಭಾಷೆ, ಯಾವುದೇ ಮಾಹಿತಿ, ಊರು ಕೇರಿ ಏನು ಬೇಕಿದ್ದರು ಕ್ಷಣ ಮಾತ್ರದಲ್ಲಿ ಕೊಡೋದು ಮೊಬೈಲೆ ಅಲ್ವಾ?!
ಜಸ್ಟ್ ಪಕ್ಕದ ಮನೆಯವರಿಗೇನೇ ನಮ್ಮ ಕೂಗು ಕೇಳೋಲ್ಲ ಅಂತದರಲ್ಲಿ ಜಗತ್ತಿನ ಯಾವುದೇ ಮೂಲೆಯಲ್ಲಿದ್ದರು ನಮಗೆ ಬೇಕಾದವರಿಗೆ ನಮ್ಮ ಮನದ ಮಾತು, ನಮಗೆ ಅವರ ಮನದ ಮಾತು ಕೇಳುವಂತೆ ನಮ್ಮವರನ್ನು ನಮ್ಮ ಹತ್ತಿರವೇ ಇಟ್ಟದ್ದು ಮೊಬೈಲ್ ಅಲ್ವೇ?!
ಕೂತಲ್ಲಿಂದಲೇ keb, tax, phone recharge, housing loanಗಳನ್ನ ಕಟ್ಟೋದು, ಕೊಡಬೇಕಾದವರಿಗೆ ಹಣ transfer ಮಾಡೋದು ಎಲ್ಲವೂ ಮೊಬೈಲ್ ನಿಂದಲೆ ಅಲ್ವಾ?!
ನಮ್ಮಲ್ಲಿರುವ ಕಲೆಗೆ ಬೆಲೆ ಕೊಟ್ಟದ್ದು, ಅದನ್ನು ಪ್ರಪಂಚಕ್ಕೆ ಪರಿಚಯಿಸಿದ್ದು ಮೊಬೈಲೆ ಅಲ್ವೇ?!
ಬೇಜಾರಾದಾಗಲೆಲ್ಲ ಮೂವಿ ಕಾಮಿಡಿ ಮೋಟಿವೇಷನಲ್ ಸ್ಪೀಚ್ ಕೇಳಿಸಿ ನಮ್ಮ ಮನಸ್ಸು ಸಮಾಧಾನವಾಗಿರುವಂತೆ ಮಾಡೋದು ಮೊಬೈಲೆ ಅಲ್ವೇ?!
Uspc, NEET, NDA ಈ ಯಾವ ಎಕ್ಸಾಮ್ ಬೇಕು ಅದಕ್ಕೆಲ್ಲ ಕೋಚಿಂಗ್, ಮಾಹಿತಿ ಎಲ್ಲವೂ ಸಿಗೋದು, ಅ ಮೂಲಕ ಉನ್ನತ ಹುದ್ದೆಗಳನ್ನ ಅಲಂಕರಿಸಲು ಸಾಧ್ಯ ಮಾಡಿದ್ದು ಮೊಬೈಲೆ ಅಲ್ವೇ?!
ಕೊರೋನದಂತಹ ಮಹಾಮಾರಿ ಬಂದಾಗಲೂ ಶಿಕ್ಷಕರು ಮನೆಯಲ್ಲಿದ್ದುಕೊಂಡೆ ಪಾಠ ಮಾಡುವುದಕ್ಕೆ ಮಕ್ಕಳು ಮನೆಯಲ್ಲಿದ್ದುಕೊಂಡು ಪಾಠ ಕೇಳಿ ಪರೀಕ್ಷೆ ಬರೆಯಲು ಸಹಕಾರಿಯಾದದ್ದು ಇದೇ ಮೊಬೈಲೆ ಅಲ್ವಾ?!
ಅಷ್ಟೇ ಯಾಕೆ..
ನಾನು ಟೈಪ್ ಮಾಡಿ ಕಳಿಸ್ತಾ ಇರೋದು, ನೀವು ನೋಡ್ತಾ ಇರೋದು ಮೊಬೈಲೆ ಅಲ್ವಾ?!
ನೋಡಿ ನಿಮ್ಮತ್ರ ಬೈಯಿಸಿಕೊಂಡು ಸಹ ಎಷ್ಟೊಂದು ಒಳ್ಳೆಯ ಕೆಲಸಗಳನ್ನ ಮಾಡ್ತಾ ಇದೆ ಈ ಮೊಬೈಲ್..? ಈಗಿನ ಕಾಲದಲ್ಲಿ ಇಷ್ಟು ಒಳ್ಳೆಯವರು ಎಲ್ಲಿ ಸಿಗ್ತಾರೆ ನಿಮಗೆ?!
ಇವಾಗ ದೊಡ್ಡಣ್ಣ ಅದೇ ಕಣ್ರಿ ಅದಿಲ್ದೆ ಏನೇನು ಇಲ್ಲ..
ಹೌದು ಗುಬ್ಬಚ್ಚಿ ಅಂತಹ ಪಕ್ಷಿಗಳ ಸಂತತಿ ಕಡಿಮೆ ಆಗ್ತಾ ಇರೋದು, ಮನುಷ್ಯನ ಮೆಮೋರಿ ಪವರ್ ಕಡಿಮೆ ಆಗ್ತಾ ಇರೋದು, ದೃಷ್ಟಿದೋಷ ಹೆಚ್ಚಾಗ್ತಾ ಇರೋದು ಸಹ ಇದೇ ಮೊಬೈಲ್ ನಿಂದಾನೆ. ಅದು ಗೊತ್ತಲ್ವಾ..?
ಮತ್ಯಾಕೆ ಹೆಚ್ಚಿಗೆ ಬಳಸೋದು ಎಷ್ಟು ಅವಶ್ಯಕತೆ ಇದೆಯೋ ಅಷ್ಟು ಬಳಸಿದರಾಯಿತಪ್ಪ. ಪದೇ ಪದೇ ಮೊಬೈಲ್ ಮುಟ್ಟೋದರ ಬದಲು, ನ್ಯೂಸ್ ಪೇಪರೋ, ಯಾವುದೊ ಒಂದು ಪುಸ್ತಕವೋ ತೆಗೆದುನೋಡಿ. ಕಣ್ಣಿಗೂ ಹಿತ ಮನಸ್ಸಿಗೂ ಹಿತ. ಅಲ್ವಾ ,,?!
ದೊಡ್ಡವರಾದ ನಾವು ಈ ತರ ಒಳ್ಳೆಯ ಅಭ್ಯಾಸ ಇಟ್ಟುಕೊಂಡರೆತಾನೆ ನಮ್ಮ ಮುಂದಿನ ಪೀಳಿಗೆ ನಮ್ಮನ್ನ ನೋಡಿ ಕಲಿಯುವುದಕ್ಕಾಗೋದು..? ನಮ್ಮ ಮಾತಿಗಿಂತ ಕೃತಿ ಹೆಚ್ಚಿಗೆ ಕೆಲಸ ಮಾಡಬೇಕಲ್ವಾ..?
ನಿಮ್ಮ ವರ್ತನೆ ನಿಮ್ಮ ಮಕ್ಕಳಿಗೆ ಗುರುವಾಗಲಿ, ನೀವು ಕಡಿಮೆ ಬಳಸಿ ಅವರಿಗೂ ಕಡಿಮೆ ಬಳಸುವಂತೆ ಮಾಡಿ. ಒಳ್ಳೆಯದಾಗಲಿ ಮೊಬೈಲ್ ನಿಂದ ನಿಮಗೂ ಮತ್ತು ನಿಮ್ಮಿಂದ ಮೊಬೈಲ್ ಪರಿಣಾಮಕ್ಕು..
