ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೨೦೨೫-೨೬ನೇ ಶೈಕ್ಷಣಿಕ ಸಾಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಡಾ. ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ ಹಾಗೂ ಸರ್ಕಾರಿ ಮುಸ್ಲಿಂ ವಸತಿ ಶಾಲೆಗಳ ೬ನೇ ತರಗತಿ ಪ್ರವೇಶಾತಿಗಾಗಿ ವಿದ್ಯಾರ್ಥಿಗಳಿಂದ ಆನ್ ಲೈನ್ ಮೂಲಕ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಸೇವಾ ಸಿಂಧು ಪೋರ್ಟಲ್ ಮೂಲಕ ದಿನಾಂಕ:೧೦-೦೨-೨೦೨೬ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ಸಮುದಾಯದ ವಿದ್ಯಾರ್ಥಿಗಳಿಗೆ ಶೇ. ೭೫% ರಷ್ಟು ಹಾಗೂ ಇತರೆ ವರ್ಗಕ್ಕೆ ಶೇ.೨೫% ರಷ್ಟು ವಿದ್ಯಾರ್ಥಿಗಳಿಗೆ ಮೆರಿಟ್ ಅಥವಾ ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು.
ಈ ವಸತಿ ಶಾಲೆಗಳಲ್ಲಿ ಶೇ. ೫೦% ರಷ್ಟು ಹೆಣ್ಣು ಮಕ್ಕಳಿಗಾಗಿ ಮೀಸಲಿರಿಸಿದೆ. ಪೋಷಕರ ಆದಾಯ ರೂ.೨.೫೦ ಲಕ್ಷಗಳಿಗಿಂತ ಕಡಿಮೆ ಇರಬೇಕು. ವಿದ್ಯಾರ್ಥಿಗಳು ಸೇವಾಸಿಂಧುಪೋರ್ಟಲ್ ನೇರವಾಗಿ ವೆಬ್ಸೈಟ್ hಣಣಠಿs://sevಚಿsiಟಿಜhuseಡಿviಛಿes.ಞಚಿಡಿಟಿಚಿಣಚಿಞಚಿ.gov.iಟಿ ಈ ವಿಳಾಸಕ್ಕೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳ ಕಛೇರಿಯ ದೂರವಾಣಿ ಸಂಖ್ಯೆ: ೦೮೩೫೨-೨೯೫೫೨೩, ವಿಜಯಪುರ ತಾಲ್ಲೂಕು ಉಪ ವಿಭಾಗದ ವಿಸ್ತರಣಾಧಿಕಾರಿಗಳು ಮೊ.೮೯೭೦೭೦೪೯೮೬, ಇಂಡಿ ತಾಲೂಕ ಉಪ ವಿಭಾಗದ ವಿಸ್ತರಣಾಧಿಕಾರಿಗಳ ಮೊ:೯೯೦೦೨೨೯೭೮೯,ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ವಿಜಯಪುರ ಮೊ:೮೧೨೩೭೧೦೭೬೬,ಬಸವನ ಬಾಗೇವಾಡಿ ಮೊ:೯೯೭೨೩೪೦೭೨೧,ಮುದ್ದೇಬಿಹಾಳ ಮೊ:೮೭೨೨೪೪೫೫೫೨,ಇಂಡಿ ತಾಲೂಕ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಮೊ:೯೯೦೦೧೦೯೭೫೯,ಸಿಂದಗಿ ಮೊ:೯೦೩೫೫೫೮೬೦೯ ಹಾಗೂ ಅರಕೇರಿಯ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆಯ ಪ್ರಾಂಶುಪಾಲರುಗಳಾದ ಮಲ್ಲಿಕಾರ್ಜುನ ಹುಬ್ಬಳ್ಳಿ ಮೋ:೯೬೨೦೮೨೮೧೮೫, ಹಾಲಹಳ್ಳಿ, ಇಂಡಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆಯಗಳ ರವಿಚಂದ್ರ ಕಾಂಬಳೆ ಮೋ:೭೮೯೨೩೭೧೭೦೯, ಸಿಂದಗಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆಯ ಸಿದ್ದಪ್ಪ ಕಾರಿಮುಂಗಿ ಮೋ:೯೯೮೦೯೫೨೯೬೦, ಮುದ್ದೇಬಿಹಾಳ ನಂ-೧ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆಯ ರಮೇಶ ಪಾಟೀಲ ಮೋ:೯೮೪೪೪೯೩೩೦೬, ಮುದ್ದೇಬಿಹಾಳ ನಂ-೨ ಹಾಗೂ ತಾಳಿಕೋಟಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆಯಗಳ ಖೇಮು ರಾಠೋಡ, ವಿಜಯಪುರ ಅಫಜಲಪುರ ಟಿಕ್ಕೆ ಸರ್ಕಾರಿ ಮುಸ್ಲಿಂ ಶಾಲೆ, ಇಟ್ಟಿಂಗಿಹಾಳ ಹಾಗೂ ಮನಗೂಳಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆಯಗಳ ಸಿದ್ರಾಮ ಎಂಟೆತ್ತೆ ಮೋ:೯೮೮೦೧೦೩೧೨೨, ಬಬಲೇಶ್ವರ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆಯ ಸಂಗಣ್ಣ ಆಲಗೂರ ಮೋ:೯೫೯೧೬೧೨೦೭೩
ಇವರನ್ನು ಸಂಪರ್ಕಿಸುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
