ಯಡ್ರಾಮಿ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸಗರಾದ್ರಿ ಸಾಂಸ್ಕೃತಿಕ ಸಂಗಮ ಟ್ರಸ್ಟ್ ಸಹಯೋಗದಲ್ಲಿ ಹುಣ್ಣಿಮೆ ಸಂಗಮ ಕಾರ‍್ಯಕ್ರಮ ಹಾಗೂ ಕಲ್ಯಾಣ ಕರ್ನಾಟಕ ವಿಮೋಚನಾ ಹೋರಾಟಗಾರರ ಕುರಿತು ವಿಚಾರ ಸಂಕಿರಣ ವಿರಕ್ತಮಠದಲ್ಲಿ ಶುಕ್ರವಾರ ಆಯೋಜಿಸಲಾಗಿದೆ.
ಕಾರ‍್ಯಕ್ರಮದಲ್ಲಿ ಯಡ್ರಾಮಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಸಾನಿಧ್ಯದಲ್ಲಿ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಅಧ್ಯಕ್ಷ ನಾಗಪ್ಪ ಎಂ. ಸಜ್ಜನ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ನೌಕರರ ಸಂಘದ ಅಧ್ಯಕ್ಷ ಬಲವಂತ್ರಾಯಗೌಡ ಬಿರಾದಾರ, ಕ.ಸಾ.ಪ. ಪ್ರಧಾನ ಕಾರ್ಯದರ್ಶಿ ರೇವಣಸಿದ್ದಯ್ಯ ಪುರಾಣಿಕ, ಸಗರಾದ್ರಿ ಸಾಂಸ್ಕೃತಿಕ ಸಂಗಮ ಟ್ರಸ್ಟ್ ಕಾರ್ಯದರ್ಶಿ ಪ್ರಕಾಶ ಸಾಹು ಬೆಲ್ಲದ ಭಾಗವಹಿಸುವರು. ಹೈದರಾಬಾದ್ ಕರ್ನಾಟಕ ವಿಮೋಚನಾ ಚಳುವಳಿಯ ಮುಂಚೂಣಿ ಹೋರಾಟಗಾರರಾದ ಸರ್ದಾರ್ ಶರಣಗೌಡ ಇನಾಮದಾರ ದುಮ್ಮದ್ರಿ ಅವರ ಹೋರಾಟದ ಕುರಿತು ಶಿಕ್ಷಕ ಸಾಹಿತಿ ಅಮೃತ ದೊಡಮನಿ, ಕೆ. ಚೆನ್ನಬಸಪ್ಪ ಸಾಹು ಕುಳಗೇರಿ ಅವರ ಹೋರಾಟದ ಕುರಿತು ಸಾಹಿತಿ ಡಾ. ಕೆ,ಕೆ. ದೇಸಾಯಿ ಉಪನ್ಯಾಸ ನೀಡುವರು. ಇದೇ ವೇಳೆ, ಶಿಕ್ಷಕರಾದ ಬಸವರಾಜ ಪಾಟೀಲ ಯತ್ನಾಳ, ಈರಣ್ಣ ಕಾಖಂಡಕಿ ಕುಳಗೇರಿ, ಶಿಕ್ಷಕಿ ಸಿದ್ದಮ್ಮ ಕರೆಪ್ಪಗೋಳ, ವಿಜ್ಞಾನ ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದ ಸಾಧಕಿ ಕು. ಮಲ್ಲಿಕಾ ಹರವಾಳ, ಸಮಾಜ ಸೇವಕಿ ಅಕ್ಕಮ್ಮ ಹರವಾಳ, ಯುವ ಗಾಯಕ ವಿನೋದ ಹೂಗಾರ ಯಡ್ರಾಮಿ ಇವರನ್ನು ವೇದಿಕೆಯಿಂದ ಸತ್ಕರಿಸಲಾಗುವುದು.
ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ‍್ಯಕ್ರಮ ಯಶಸ್ವಿಗೊಳಿಸಬೇಕೆಂದು ಕಸಾಪ ಅಧ್ಯಕ್ಷ ನಾಗಪ್ಪ ಸಜ್ಜನ, ಸಗರಾದ್ರಿ ಸಾಂಸ್ಕೃತಿಕ ಸಂಗಮದ ಕಾರ‍್ಯದರ್ಶಿ ಪ್ರಕಾಶ ಸಾಹು ಬೆಲ್ಲದ ಪ್ರಕಟಣೆಯಲ್ಲಿ ಕೋರಿದ್ದಾರೆ.
Related Posts
Add A Comment