ರತನೆ
– ಅನು ಸತೀಶ
’ನಮ್ಮ ಕಥಾ ಅರಮನೆ ’
ಬರಹಗಾರರು
ಉದಯರಶ್ಮಿ ದಿನಪತ್ರಿಕೆ
ದೂರ ತೀರದಲ್ಲಿ ಮುರಳಿ ನಾದ
ನಾದವು ತಂದಿತು ಮೋಹನ ರಾಗ
ರಾಗದಲ್ಲಿ ಹೊಮ್ಮಿದೆ ಅನುರಾಗದ ಅಲೆಗಳು
ಅಲೆಗಳಲ್ಲಿ ಮೂಡಿತು ಒಲವಿನ ರಂಗು
ರಂಗು ತಂದಿತು ಬೆಸುಗೆಯ ಬಂಧ
ಬಂಧನವು ಆಗಿದೆ ಪ್ರೇಮದ ಅನುಬಂಧ
ಅನುಬಂಧದ ಅನುರಾಗವು ಮೂಡಿದೆ ಮನದಲ್ಲಿ
ಮನದಲ್ಲಿ ನಿಂತಿರುವನು ನನ್ನಿ ಇನಿಯ
ಇನಿಯನ ಸ್ಪರ್ಶವು ತಂದಿದೆ ಬಯಕೆ
ಬಯಕೆಯು ತಂದಿದೆ ಹೊಸ ಹರುಷ
ಹರುಷವು ಇರಲಿ ಎಂದೆಂದು ಬದುಕಲ್ಲಿ
ಬದುಕಲ್ಲಿನ ಸೊಗಡು ಉಳಿಯಲಿ ಶಾಶ್ವತವಾಗಿ
