Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಗ್ರಂಥಾಲಯಗಳು ಜನಸಾಮಾನ್ಯರ ವಿಶ್ವವಿದ್ಯಾಲಯಗಳು

ವಿಬಿ ಜಿ ರಾಮ್ ಜಿ ಕಾಮಗಾರಿಗಳಿಗೆ ವೇಗ ನೀಡಲು ಸಿಇಒ ಸೂಚನೆ

ಸುಸ್ಥಿರ, ಆರೋಗ್ಯಯುತ ಭಾರತಕ್ಕಾಗಿ ಕಂಕಣಬದ್ಧರಾಗಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಮಕ್ಕಳಿಗೆ ಕೌಶಲ್ಯ ಆಧಾರಿತ ಜ್ಞಾನ ಅವಶ್ಯ :ಪ್ರೊ.ತ್ಯಾಗರಾಜ
(ರಾಜ್ಯ ) ಜಿಲ್ಲೆ

ಮಕ್ಕಳಿಗೆ ಕೌಶಲ್ಯ ಆಧಾರಿತ ಜ್ಞಾನ ಅವಶ್ಯ :ಪ್ರೊ.ತ್ಯಾಗರಾಜ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಸಿಂದಗಿಯಲ್ಲಿ ಸಾಹಿತಿ ಕೆ.ಎಚ್.ಸೋಮಾಪೂರ ಅವರ ೧೩ನೇ ಕೃತಿ ’ಬಿಚ್ಚುಗತ್ತಿ’ ಗ್ರಂಥ ಲೋಕಾರ್ಪಣೆ

ಉದಯರಶ್ಮಿ ದಿನಪತ್ರಿಕೆ

ಸಿಂದಗಿ: ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಶಿಕ್ಷಕ ವರ್ಗ ಕೌಶಲ್ಯ ಆಧಾರಿತ ಜ್ಞಾನ ನೀಡುವುದು ಇಂದು ಅವಶ್ಯವಾಗಿದೆ. ತಂತ್ರಜ್ಞಾನ ಅತ್ಯಂತ ವೇಗವಾಗಿ ಸಾಗುತ್ತಿದೆ. ವಿದ್ಯಾರ್ಥಿಗಳು ಪದವಿ ಪಡೆದರೆ ಸಾಲದು ಅದರೊಂದಿಗೆ ಸ್ವಯಾರ್ಜಿತ ಶಕ್ತಿ ಸಾಮಥ್ಯವನ್ನು ಬೆಳೆಸಿಕೊಂಡು ಮೌಲ್ಯಯುತವಾದ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಬೆಳಗಾಂವ ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ ಸಿ.ಎಂ.ತ್ಯಾಗರಾಜ ಅವರು ಹೇಳಿದರು.
ಸಿಂದಗಿ ಪಟ್ಟಣದ ಶ್ರೀ ಪದ್ಮರಾಜ ವಿದ್ಯಾವರ್ಥಕ ಸಂಸ್ಥೆ, ಸಾರಂಗಮಠದ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಂಗಳವಾರ ಸಿಂದಗಿಯ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯ, ಆರ್.ಡಿ.ಪಾಟೀಲ ಪದವಿ ಪೂರ್ವ ಕಾಲೇಜು, ಮಾತೋಶ್ರೀ ಗುರುಬಸಮ್ಮ ಹ.ಸೋಮಾಪೂರ ಸೇವಾ ಸಂಸ್ಥೆ ಹಾಗೂ ಲಾಯನ್ಸ್ ಕ್ಲಬ್ ಸಿಂದಗಿ ಇವುಗಳ ಸಹಯೋಗದಲ್ಲಿ ಸಾಹಿತಿ ಕೆ.ಎಚ್.ಸೋಮಾಪೂರ ಅವರ ೧೩ನೇ ಕೃತಿ ಬಿಚ್ಚುಗತ್ತಿ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದರು.
ಪದವಿ ಮುಖ್ಯವಲ್ಲ ಅದರ ಜೊತೆಗೆ ಕೌಶಲ್ಯ ಆಧಾರಿತ ಜ್ಞಾನ ಮುಖ್ಯ ಎಂದ ಅವರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಿಂದ ಶಿಕ್ಷಣವನ್ನು ಸಾಕಷ್ಟು ಬದಲಾವಣೆ ಮಾಡಲಾಗುತ್ತಿದೆ ಮುಂದಿನ ದಿನಮಾನಗಳಲ್ಲಿ ಈ ಸಂಸ್ಥೆಯಲ್ಲಿ ವಿಶ್ವವಿದ್ಯಾನಿಲಯದ ಅಡಿಯಲ್ಲಿ ಡಿಜಟಲಿಕರಣ್ ಕೇಂದ್ರವನ್ನು ಸ್ಥಾಪನೆ ಮಾಡುವ ಯೋಜನೆ ಇದೆ ಎಂದರು.
ವೇಳೆ ಧಾರವಾಡದ ಹಿರಿಯ ಸಾಹಿತಿ ಡಾ.ಸಂಗಮನಾಥ ಲೋಕಾಪೂರ ಗ್ರಂಥವನ್ನು ಅವಲೋಕಿಸಿ ಮಾತನಾಡಿ, ಕವಿಯಾದವನಿಗೆ ಒಂದು ಪರಿಕಲ್ಪನೆಯನ್ನು ವಿಭಿನ್ನವಾಗಿ ಆಲೋಚಿಸುವ, ವಿವೇಚಿಸುವ ಮತ್ತು ವಿಮರ್ಷಿಸುವ ಗುಣ ಇರುವುದರಿಂದ ಸಾಹಿತ್ಯ ಚೆನ್ನಾಗಿ ಮೂಡಿ ಬರುತ್ತದೆ. ಕಾವ್ಯಾನುಭವ, ಅಭ್ಯಾಸದ ಬಲದಿಂದ ರೂಪಗೊಳ್ಳುತ್ತದೆ. ಆ ಹಿನ್ನಲೆಯಲ್ಲಿ ಕೆ.ಎಚ್.ಸೋಮಾಪೂರ ಅವರು ವೃತ್ತಿಯಲ್ಲಿ ದೈಹಿಕ ನಿರ್ದೇಶಕರಾಗಿದ್ದರು ಕೂಡಾ ಸಾಹಿತ್ಯದ ಜ್ಞಾನ ಬೆಳೆಸಿಕೊಂಡಿದ್ದು ಅನುಪಮ.
ಬಿಚ್ಚುಗತ್ತಿ ಕೃತಿ ಇದು ಭಾಮಿನಿ ಷಟ್ಪದಿಯಲ್ಲಿ ಮೂಡಿ ಬಂದ ಕಾವ್ಯವಾಗಿದೆ. ಈ ಭಾಗದಲ್ಲಿ ಸಾಹಿತಿ ದಿ.ಎಮ್.ವ್ಹಿ.ಗಣಾಚಾರಿ ಅವರು ಷಟ್ಪದಿ, ವ್ಯಾಖರಣದಲ್ಲಿ ಅದ್ಬುತ ಸಾಧನೆ ಮಾಡಿದವರು. ಅವರ ಗರಡಿಯಲ್ಲಿ ಬೆಳೆದ ಸೋಮಾಪೂರ ಅವರು ಭಾಮಿನಿ ಷಟ್ಪದಿಯಲ್ಲಿ ಬಿಚ್ಚುಗತ್ತಿ ಗ್ರಂಥದ ಮೂಲಕ ೩೫೨ ಕಾವ್ಯಗಳನ್ನು ರಚನೆ ಮಾಡಿದ್ದಾರೆ. ಇಂದಿನ ಆಧುನಿಕ ಕಾಲಗಟ್ಟದಲ್ಲಿ ಷಟ್ಪದಿಗಳೇ ಸಾಯುತ್ತಿವೆ. ಇದರ ಮಧ್ಯದಲ್ಲಿ ಭಾಮಿನಿ ಷಟ್ಪದಿಯಲ್ಲಿ ಕೃತಿ ರಚನೆಯಾಗಿದ್ದು ಉತ್ತಮ ಬೆಳವಣಿಗೆ. ಈ ಕೃತಿಯು ಮನುಷ್ಯನಿಗೆ ಬದುಕಿನಲ್ಲಿ ಎದುರಾಗುವ ಸಮಸ್ಯೆಗಳನ್ನು ಹೇಗೆ ಪರಿಹರಿಸಿಕೊಳ್ಳಬೇಕು, ಸಾಹಸಿಯ ಸಾಮರ್ಥ್ಯ, ಶೌರ್ಯದ ಕಲ್ಪನೆ, ಹೋರಾಟ, ವಿವೇಚನೆಗಳನ್ನು ತುಂಬಿಕೊಂಡ ಸ್ವಾರಸ್ಯಕರವಾದ ಕಾವ್ಯ ಇಲ್ಲಿ ಮೂಡಿ ಬಂದಿವೆ ಎಂದರು.
ಈ ವೇಳೆ ಅಧ್ಯಕ್ಷತೆ ವಹಿಸಿದ ನಿವೃತ್ತ ಪಾಚಾರ್ಯ ಬಿ.ಪಿ.ಕರ್ಜಗಿ, ಸಮ್ಮುಖ ವಹಿಸಿದ ಸಾರಂಗಮಠದ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಮಾತನಾಡಿ, ಇಂದು ಕೌಶಲ್ಯಭರಿತ ಶಿಕ್ಷಣ ಕಡಿಮೆಯಾಗುತ್ತಿದೆ. ಪ್ರಾರಂಭದಿಂದಲೇ ಮಕ್ಕಳಿಗೆ ಭಾಷೆ, ತಂತ್ರಜ್ಞಾನ, ವಿವಿಧ ಕಲೆ, ಕೌಶಲ್ಯದ ಬಗ್ಗೆ ವಿವರಣೆ ನೀಡುತ್ತಲೆ ಇರಬೇಕು ಎಂದರು.
ಸ್ಥಳೀಯ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ವೇದಿಕೆ ಮೇಲೆ ತಾಳಿಕೋಟಿಯ ಎಚ್.ಎಸ್.ಪಾಟೀಲ, ದೈಹಿಕ ನಿರ್ದೇಶಕ ಡಾ.ರವಿ ಗೋಲಾ, ಪ್ರಾಚಾರ್ಯ ಬಿಎಮ್.ಸಿಂಗನಳ್ಳಿ, ಎಸ್.ಎಸ್.ಪಾಟೀಲ, ಪ್ರಾಚಾರ್ಯೆ ಜೆ.ಸಿ.ನಂದಿಕೋಲ, ಕೃತಿಕರ್ತ ಕೆ.ಎಚ್.ಸೋಮಾಪೂರ ಇದ್ದರು.
ಇದೇ ಸಂದರ್ಭದಲ್ಲಿ ಶ್ರೀಮಠ ಮತ್ತು ವಿವಿಧ ಅಂಗ ಸಂಸ್ಥೆಗಳ ವತಿಯಿಂದ ಕುಲಪತಿ ಸಿ.ಎಂ.ತ್ಯಾಗರಾಜ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಸಮಾರಂಭದಲ್ಲಿ ವಿವಿಧ ಅಂಗ ಸಂಸ್ಥೆಗಳ ಪ್ರಾಚಾರ್ಯರು, ಬೋಧಕ-ಬೋಧಕೇತರ ಸಿಬ್ಬಂದಿಗಳು ಇದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಗ್ರಂಥಾಲಯಗಳು ಜನಸಾಮಾನ್ಯರ ವಿಶ್ವವಿದ್ಯಾಲಯಗಳು

ವಿಬಿ ಜಿ ರಾಮ್ ಜಿ ಕಾಮಗಾರಿಗಳಿಗೆ ವೇಗ ನೀಡಲು ಸಿಇಒ ಸೂಚನೆ

ಸುಸ್ಥಿರ, ಆರೋಗ್ಯಯುತ ಭಾರತಕ್ಕಾಗಿ ಕಂಕಣಬದ್ಧರಾಗಿ

ಸ್ವಾರ್ಥಬಿಟ್ಟು ಬಾಳೋಣ, ಮಾನವೀಯತೆ ಮೆರೆಯೋಣ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಗ್ರಂಥಾಲಯಗಳು ಜನಸಾಮಾನ್ಯರ ವಿಶ್ವವಿದ್ಯಾಲಯಗಳು
    In (ರಾಜ್ಯ ) ಜಿಲ್ಲೆ
  • ವಿಬಿ ಜಿ ರಾಮ್ ಜಿ ಕಾಮಗಾರಿಗಳಿಗೆ ವೇಗ ನೀಡಲು ಸಿಇಒ ಸೂಚನೆ
    In (ರಾಜ್ಯ ) ಜಿಲ್ಲೆ
  • ಸುಸ್ಥಿರ, ಆರೋಗ್ಯಯುತ ಭಾರತಕ್ಕಾಗಿ ಕಂಕಣಬದ್ಧರಾಗಿ
    In (ರಾಜ್ಯ ) ಜಿಲ್ಲೆ
  • ಸ್ವಾರ್ಥಬಿಟ್ಟು ಬಾಳೋಣ, ಮಾನವೀಯತೆ ಮೆರೆಯೋಣ
    In ವಿಶೇಷ ಲೇಖನ
  • ಹೆಣ್ಣಿನ ಜೀವನವನ್ನು ಮರುರೂಪಿಸಿದ ಸುಧಮ್ಮನ ಕೃತಿ
    In ವಿಶೇಷ ಲೇಖನ
  • ರಾಯಣ್ಣ ಉತ್ಸವ ಪೂರ್ವಭಾವಿ ಸಭೆ :ಆ.23 ರಂದು ಉತ್ಸವ
    In (ರಾಜ್ಯ ) ಜಿಲ್ಲೆ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಆಗಸ್ಟ್ 18, 2026
    In ದಿನಪತ್ರಿಕೆ
  • ಮಹಿಳೆಯರಿಂದ ಸಂಭ್ರಮದ ನಾಗರ ಪಂಚಮಿ ಆಚರಣೆ
    In (ರಾಜ್ಯ ) ಜಿಲ್ಲೆ
  • ಸಿಂದಗಿಯ ವಿವಿಧೆಡೆ ೮೦ ನೆಯ ಸ್ವಾತಂತ್ರ್ಯ ದಿನಾಚರಣೆ
    In (ರಾಜ್ಯ ) ಜಿಲ್ಲೆ
  • ರೂ.೨ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಮನಗೂಳಿ ಭೂಮಿಪೂಜೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.