ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಮದ್ಯಪಾನ ಹಾಗೂ ಮಾದಕ ವಸ್ತುಗಳು ಮನಸ್ಸು ಹಾಗೂ ಶರೀರದ ಮೇಲೆ ನೇರ ಪರಿಣಾಮ ಬೀರುತ್ತವೆ ಎಂದು ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಎಸ್.ಎನ್.ಬಸವರೆಡ್ಡಿ ಮಾತನಾಡಿದರು.
ಪಟ್ಟಣದ ಕೆನರಾ ಬ್ಯಾಂಕ್ ಕಾಲೋನಿಯಲ್ಲಿ ಸೋಮವಾರ ಧರ್ಮಸ್ಥಳ ಶ್ರೀಮಂಜುನಾಥೇಶ್ವರ ಗ್ರಾಮೀಣಾಭಿವೃದ್ಧಿ ಯೋಜನೆ ಟ್ರಸ್ಟ್ ಹಾಗೂ ಕರ್ನಾಟಕ ರಾಜ್ಯ ಮಧ್ಯಪಾನ ನಿರ್ಮೂಲನಾ ಮಂಡಳಿ, ಬೆಂಗಳೂರು. ಇವರ ಸಹಯೋಗದಲ್ಲಿ ಜರುಗಿದ ವಿಶ್ವ ಮಾದಕವಸ್ತು ವಿರೋಧಿ ದಿನಾಚರಣೆಯಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿ ಮಾತನಾಡಿದರು.
ಮಾದಕ ಪದಾರ್ಥಗಳು ಹಾಗೂ ಮದ್ಯ ಸೇವನೆಯ ವ್ಯಸನ ಅತ್ಯಂತ ಗಂಭೀರವಾಗಿದ್ದು, ಶರೀರದ ಮೇಲೆ ನೇರವಾದ ಪರಿಣಾಮ ಉಂಟು ಮಾಡುತ್ತವೆ ಎಂದರು.
ಯೋಜನಾಧಿಕಾರಿ ವಿಶ್ವನಾಥ ಸದಲಗಾ ಅಧ್ಯಕ್ಷತೆ ವಹಿಸಿ ಸಂಕ್ಷಿಪ್ತವಾಗಿ ಮಾತನಾಡಿದರು.
ಕಾರ್ಯಕರ್ತೆಯರಾದ ನೀಲಮ್ಮ ಬಿರಾದಾರ, ರೇಣುಕಾ ದಾನಗೊಂಡ, ಕಮಲಾ ಬಾಗೇವಾಡಿ, ಭಾಗೀರಥಿ ದೇಗಿನಾಳ ಮತ್ತು ಮಹಿಳಾ ಸಂಘಟನೆಯ ಸದಸ್ಯನೀಯರು ಭಾಗವಹಿಸಿದ್ದರು.