ರಚನೆ
– ಸುಬ್ರಹ್ಮಣ್ಯ ಕೊಪ್ಪ
“ನಮ್ಮ ಕಥಾ ಅರಮನೆ”
ಬರಹಗಾರರು
ಉದಯರಶ್ಮಿ ದಿನಪತ್ರಿಕೆ
ಪ್ರತೀ ಜೀವಿಗೂ ಜೀವಿಸಲು ಮಣ್ಣಿನ ಅವಶ್ಯಕತೆ
ಜೋಪಾನ ಮಾಡಿದಾಗ ತಿಳಿವುದು ಸಾರ್ಥಕತೆ
ನದಿ ಕೆರೆ ಹಳ್ಳಗಳ ಇಕ್ಕೆಡೆಗೆ ತಡೆಗೋಡೆಯಂತೆ
ಆಳೆತ್ತರದ ಮರಕ್ಕೆ ಬೇರುಬಿಡಲು ಆಸರೆಯಂತೆ
ಮಣ್ಣಿನಿಂದಲೇ ಹುಟ್ಟು ಇಟ್ಟಿಗೆ ಮಡಕೆಯು
ಅಷ್ಟೇಕೆ ಹಲವು ವಿಗ್ರಹಗಳ ಕಲಾಕೃತಿಯು
ಗತಿಸಲು ಹೂಳಲು ಬೇಕು ಮಣ್ಣಿರುವ ಭೂಮಿಯು
ಬೆಳೆತೆಗೆಯಲು ಹದವಾದ ಮಣ್ಣಿನ ಆಸರೆಯು
ಮಣ್ಣು ಶಿಥಿಲವಾದರೆ ಜೀವನ ಅಯೋಮಯ
ಭೂಮಿಪೂಜೆ ನಾಗಪಂಚಮಿಯ ವಿಶೇಷತೆಯು
ಖನೀಜ ಸಂಪತ್ತು ಕಾಪಿಡಲು ಉತ್ತಮ ಜಾಗವದು
ಪರಿಸರ ಸ್ವಚ್ಛತೆ ಇಡುವ ಜವಾಬ್ದಾರಿ ನಮ್ಮದು.


