ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕಳೆದ ೬ತಿಂಗಳಲ್ಲಿ ನಮ್ಮ ಜಿಲ್ಲೆ ಸೇರಿ ರಾಜ್ಯವ್ಯಾಪ್ತಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ವೇತನ ಪಾವತಿಯಾಗಿರುವದಿಲ್ಲ. ವೇತನ ಪಾವತಿಗಾಗಿ ವಿನಂತಿಸಿ ಹಲವಾರು ಬಾರಿ ಮೌಖಿಕವಾಗಿ, ಲಿಖಿತವಾಗಿ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೂ ಯಾವದೇ ರೀತಿಯ ಉಪಯೋಗವಾಗಿರುವದಿಲ್ಲ. ಆ ನಿಟ್ಟಿನಲ್ಲಿ ಶೀಘ್ರವಾಗಿ ವೇತನಕ್ಕಾಗಿ ಜು.೦೭ರಿಂದ ಕೆಲಸ ನಿರ್ವಹಿಸದೇ ಅಸಹಕಾರ ಚಳುವಳಿ ಆರಂಭಿಸಲು ರಾಜ್ಯ ಸಮಿತಿ ನಿರ್ಧರಿಸಿದೆ ಎಂದು ಸಿಂದಗಿ ಮತ್ತು ಆಲಮೇಲ ನರೇಗಾ ಸಂಘದ ತಾಲೂಕಾಧ್ಯಕ್ಷ ಭೀಮರಾಯ ಚೌಧರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಶಿವಶರಣ ವಂದಗನೂರ, ಪುಂಡಲೀಕ ಬಿಸೆ, ಬಸವರಾಜ ಹುಣಸಗಿ, ಸಂದೀಪ ಪಶುಪತಿಮಠ, ಸಾಗರ ಶೆಟ್ಟಿ, ರವಿ ರಾಠೋಡ, ಪೂಜಾ, ಆರಿಫ್ ಸೇರಿದಂತೆ ತಾಲೂಕು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮನರೇಗಾ ಸಿಬ್ಬಂದಿಗಳು ಇದ್ದರು.

