ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣದ ನಾಗೂರ ಬಡಾವಣೆಯಲ್ಲಿರುವ ವಿದ್ಯಾನಿಕೇತನ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಪ್ರೇರಣಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗಳ ಸಹಯೋಗದಲ್ಲಿ ಮಕ್ಕಳಲ್ಲಿ ಮತದಾನದ ಜಾಗೃತಿ ಮತ್ತು ಮಹತ್ವವನ್ನು ತಿಳಿಸಲು ಶಾಲೆಯಲ್ಲಿ ಚಿಣ್ಣರಿಗಾಗಿ ಹಮ್ಮಿಕೊಂಡ ಮತದಾನದ ಅಣುಕು ಪ್ರದರ್ಶನದಲ್ಲಿ ಸಂಸ್ಥೆ ಅಧ್ಯಕ್ಷ ಆರ್.ಡಿ.ಕುಲಕರ್ಣಿ ಮತ ಚಲಾಯಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ಆಗಮಿಸಿ ಸಂಭ್ರಮದಿಂದ ಮತ ಚಲಾಯಿಸಿದರು. ಮಕ್ಕಳೊಂದಿಗೆ ಶಿಕ್ಷಕರು ಒಟ್ಟುಗೂಡಿ ಮತ ಚಲಾಯಿಸಿದ್ದು ವಿಶೇಷವಾಗಿತ್ತು. ಚುನಾವಣೆಯ ಮತಗಟ್ಟೆಯ ಮುಖ್ಯ ಅಧಿಕಾರಿಯಾಗಿ ಸುಪ್ರೀತ ಬಿರಾದಾರ, ಮತಗಟ್ಟೆಯ ಅಧಿಕಾರಿಗಳಾಗಿ ಶಿವನ್ಯ ಬಿರಾದಾರ, ಸನ್ನಿಧಿ ಖೇಡಗಿ, ಸಮರ್ಥ ಕುರುಡೆ ಮತ್ತು ಭದ್ರತಾ ಅಧಿಕಾರಿಗಳಾಗಿ ಸೌರಭ ಪತ್ತಾರ, ರೋಷನ ನಾಯಕ, ಆಹಿಲ್ ಸೌದಾಗರ, ರೋಹಿತ ನಾಯಕ ಭಾಗವಹಿಸಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದರು. ಮಕ್ಕಳ ಮತದಾನ ಸಂಭ್ರಮದಲ್ಲಿ ಮಕ್ಕಳೇ ಕರ್ತವ್ಯ ನಿಭಾಯಿಸಿದ್ದು ಇಲ್ಲಿ ವಿಶೇಷವಾಗಿತ್ತು. ಮತದಾನದ ಬಗ್ಗೆ ವಿಶೇಷ ಜಾಗೃತಿಯನ್ನು ವಿವಿಧ ಹಂತಗಳಲ್ಲಿ ಶಿಕ್ಷಕರು ಮಕ್ಕಳಿಗೆ ತಿಳಿಸಿಕೊಟ್ಟರು.
ಈ ವೇಳೆ ಸಂಸ್ಥೆಯ ಅಧ್ಯಕ್ಷ ಆರ್.ಡಿ.ಕುಲಕರ್ಣಿ, ಸಂಸ್ಥೆ ನಿರ್ದೇಶಕ ಪಿ.ಡಿ.ಕುಲಕರ್ಣಿ ಮುಖ್ಯಗುರುಮಾತೆ ಎಮ್.ಪಿ.ಬುಕ್ಕಾ ಮತ ಚಲಾಯಿಸಿದರು. ಅಭ್ಯರ್ಥಿಗಳಾಗಿ ಸ್ವಾತಿ ಪಾಟೀಲ, ಸಾನ್ವಿ ಗುಗ್ಗರಿ, ಸಿದ್ದಾರ್ಥ ನಿಂಬರಗಿ, ವೈಶಾಲಿ ರಾಠೋಡ, ಪ್ರಮೋದ ಗಣಿಹಾರ, ಪ್ರೀತಮ ಹಿರೋಳ್ಳಿ, ಶುಭನ್ ಮಗದುಮ, ಶ್ರೀಗೌರಿ ಬಿರಾದಾರ ಸ್ಪರ್ಧಿಸಿದರು.
ಬೋಧಕ ಸಿಬ್ಬಂದಿಗಳಾದ ಸತೀಶ ಕುಲಕರ್ಣಿ, ಕಿರಣ ಕುಲಕರ್ಣಿ, ಕುಮಾರ ಸನತ ಕುಲಕರ್ಣಿ, ಅಲ್ತಾಪ ತಾಂಬೋಳಿ, ಅಕ್ಷಯ ಯಲಗಟ್ಟಿ, ಶ್ರೀಕಾಂತ ಹೂನಳ್ಳಿ, ಯಲ್ಲಾಲಿಂಗ ಹೊಸೂರ, ಎಸ್.ಬಿ. ಕುಂಟೋಜಿ, ಎಮ್.ಎಮ್.ಜುಮನಾಳ, ಬಿ.ಎಸ್. ಪಾಟೀಲ, ಎಸ್‌ವ್ಹಿ. ಕಡಣಿ, ಎಮ್.ಜಿ. ಧ್ಯಾಮಗೊಂಡ, ವಿ.ಎ.ನಾಯಕ, ಎಸ್.ಡಿ.ನಾಯಕ, ವಿಜಯಲಕ್ಷ್ಮಿ ಅಲಾಳಮಠ, ಸಾವಿತ್ರಿ ವೀರಾಪೂರ, ಎನ್.ಜಿ. ಬಳಗಾನೂರ, ವಿ.ಕೆ. ಚವ್ಹಾಣ, ಆರ್.ಎಮ್.ಫಕೀರಪುರ, ಆರ್.ಎಸ್.ಶಿವಸಿಂಪಿಗೇರ, ಎಸ್.ಎಸ್.ಪಾಟೀಲ ಲಕ್ಷ್ಮಿ ಸೇರಿದಂತೆ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

