ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೨೦೨೫-೨೬ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ದಾಳಿಂಬೆ, ಲಿಂಬೆ, ಹಾಗೂ ದ್ರಾಕ್ಷಿ ಬೆಳೆಗೆ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲು ಅಧಿಸೂಚಿಸಲಾಗಿದೆ.
ಲಿಂಬೆ ಹಾಗೂ ದಾಳಿಂಬೆ ಬೆಳೆಯ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ನೋಂದಾಯಿಸುವ ಅವಧಿಯನ್ನು ದಿನಾಂಕ:೧೫-೦೭-೨೦೨೫ರವರೆಗೆ ವಿಸ್ತರಿಸಲಾಗಿದೆ ಹಾಗೂ ದ್ರಾಕ್ಷಿ ಬೆಳೆ ವಿಮಾ ಯೋಜನೆಯಡಿ ನೋಂದಾಯಿಸಿಕೊಳ್ಳುವ ಅವಧಿಯನ್ನು ದಿನಾಂಕ:೧೬-೦೮-೨೦೨೫ರವರೆಗೆ ವಿಸ್ತರಿಸಲಾಗಿದೆ.
ಬೆಳೆಸಾಲ ಪಡೆದ ರೈತರು ಹಾಗೂ ಬೆಳೆ ಸಾಲ ಪಡೆಯದೆ ಇರುವ ರೈತರು ತಮ್ಮ ಆಧಾರ್ ಕಾರ್ಡ್ ಝರಾಕ್ಸ್, ಪಹಣಿ ಪತ್ರಿಕೆ ಹಾಗೂ ಬ್ಯಾಂಕ್ ಪಾಸ್‌ಬುಕ್ ಪ್ರತಿಯೊಂದಿಗೆ ಹತ್ತಿರದ ಬ್ಯಾಂಕ್‌ಗಳಲ್ಲಿ ಅಥವಾ ಗ್ರಾಮ ಒನ್ ಕೇಂದ್ರ, ಸಿಎಸ್‌ಸಿ ಸೆಂಟರ್‌ಗಳಲ್ಲಿ ವಿಮಾ ಯೋಜನೆಯಡಿ ನೋಂದಾಯಿಸಿಕೊಳ್ಳಬಹುದಾಗಿದೆ. ರೈತರು ದ್ರಾಕ್ಷಿ ಬೆಳೆಗೆ ಪ್ರತಿ ಹೆಕ್ಟೆರ್‌ಗೆ ಪಾವತಿಸಬೇಕಾದ ವಿಮಾ ಕಂತಿನ ಮೊತ್ತ ೧೪,೦೦೦ ರೂ, ದಾಳಿಂಬೆ ಬೆಳೆಗೆ ಪಾವತಿಸಬೇಕಾದ ವಿಮಾ ಕಂತಿನ ಮೊತ್ತ ಪ್ರತಿ ಹೆಕ್ಟೆರಿಗೆ ೬,೩೫೦ ರೂ. ಹಾಗೂ ಲಿಂಬೆ ಬೆಳೆ ವಿಮೆ ನೋಂದಾಯಿಸಿಕೊಳ್ಳಲು ವಿಮಾ ಕಂತಿನ ಮೊತ್ತ ಪ್ರತಿ ಹೆಕ್ಟೆರಿಗೆ ೨,೮೦೦ ರೂ. ಆಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ತೋಟಗಾರಿಕೆ ಇಲಾಖೆ, ರೈತ ಸಂಪರ್ಕ ಕೇಂದ್ರ, ಹತ್ತಿರದ ಬ್ಯಾಂಕ್ ಶಾಖೆಯನ್ನು ಹಾಗೂ ಅಗ್ರಿಕಲ್ಚರಲ್ ಇನ್ಸುರನ್ಸ್ ಕಂಪನಿ ವಿಮಾ ಸಂಸ್ಥೆಯ ಪ್ರತಿನಿಧಿ (ಮೊ: ೮೩೧೦೯೩೯೭೫೩), ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ವಿಜಯಪುರ (ಮೊ:೯೫೩೫೧೮೫೯೯೯),ಇಂಡಿ (ಮೊ:೯೦೦೮೪೦೪೦೪೧), ಸಿಂದಗಿ (ಮೊ:೭೭೯೫೯೫೨೬೫೩), ಬಸವನ ಬಾಗೇವಾಡಿ (ಮೊ:೯೮೪೫೨೧೫೩೬೨) ಮುದ್ದೇಬಿಹಾಳ (ಮೊ:೯೬೨೦೫೭೮೫೫೧) ಸಂರ್ಪಕಿಸಬಹುದು ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
