ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಕೃಷ್ಣಾ ನದಿಯ ಉಗಮ ಸ್ಥಾನ ಮಹಾರಾಷ್ಟ್ರ ರಾಜ್ಯದ ಸಾತಾರ ಜಿಲ್ಲೆಯ ಮಹಾಬಳೇಶ್ವರ ಕೃಷ್ಣಾ ನದಿ ಪಂಚ ಗಂಗಾ ಉಗಮ ಸ್ಥಾನದಲ್ಲಿ ದಿ.10 ಗುರುವಾರ ಕಡ್ಲಿಗಾರ ಹುಣ್ಣಿಮೆ [ಗುರು ಪೂರ್ಣಿಮಾ) ದಿವಸದಂದು ಬೆಳಗ್ಗೆ 10-30 ಘಂಟೆಗೆ ಗಂಗಾ ಪೂಜೆ ನೆರವೇರಿಸಲಾಗುವುದು ಎಂದು ಮಾಜಿ ಸಚಿವರಾದ ಎಸ್.ಕೆ. ಬೆಳ್ಳುಬ್ಬಿ ಹಾಗೂ ಬಿಜೆಪಿ ಬಸವನಬಾಗೇವಾಡಿ ಮಂಡಳ ಅಧ್ಯಕ್ಷರಾದ ಸಿದ್ರಾಮ ಕಾಖಂಡಕಿಯವರು ಜಂಟಿ ಪತ್ರಿಕಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ರಂದು ವಿಶ್ವಭಾರತಿ ಶಿಕ್ಷಣ ಸಂಸ್ಥೆಯಲ್ಲಿ ನಡೆದಂತ ಭಾರತೀಯ ಜನತಾ ಪಾರ್ಟಿ ಸಭೆಯ ನಂತರ ಮಾತನಾಡಿ, ಗಂಗಾ ಪೂಜೆ ಪೂಜೆಗೆ ಬರಬೇಕೆನ್ನುವ ಅಪೇಕ್ಷಿತರು ದಿ.9 ರಂದು ಬೆಳಗ್ಗೆ 10-30 ಘಂಟೆಗೆ ವಿಜಯಪುರದ ಅಥಣಿ ರಸ್ತೆಯಲ್ಲಿರುವ ಪ್ರವಾಸಿ ಮಂದಿರದ ಹತ್ತಿರ ಬರಬೇಕೆಂದರು. ಮುಖಂಡರಾದ ಬಸವರಾಜ ಗಬಸಾವಳಗಿ 9980206539, ಮುತ್ತು ಕಾಜಗಾರ 9663201774, ಹೇಮಾ ಬಿ ದಳವಾಯಿ 9986844318, ಬಸವರಾಜ ಬಿಜಾಪುರ 9686910917 ಇವರನ್ನು ಸಂಪರ್ಕಿಸಲು ತಿಳಿಸಿದ್ದಾರೆ.

