ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದಲ್ಲಿರುವ ಬಡಾವಣೆಗಳಲ್ಲಿ ಉದ್ಯಾನವನಕ್ಕೆಂದು ಮೀಸಲಿಟ್ಟ ಜಾಗಗಳಲ್ಲಿ ಇನ್ನೂ ಗಿಡಗಳನ್ನು ಹಚ್ಚಿಲ್ಲ, ಅವುಗಳನ್ನು ಗುರುತಿಸಿ, ಗಿಡಗಳನ್ನು ನೆಡುವ ಕೆಲಸ ನಿರಂತರವಾಗಿ ನಡೆಯಬೇಕು ಎಂದು ಪುರಸಭೆಯ ಸದಸ್ಯೆ ಸಂಗಮ್ಮ ದೇವರಳ್ಳಿ ಕರೆ ನೀಡಿದರು.
ಶುಕ್ರವಾರ ಪಟ್ಟಣದ ಮಾರುತಿ ನಗರದಲ್ಲಿರುವ ವರದಾನೇಶ್ವರಿ ಬಡಾವಣೆಯಲ್ಲಿ ಅರಣ್ಯ ಇಲಾಖೆ, ಪುರಸಭೆ, ಹಸಿರು ತೋರಣ ಗೆಳೆಯರ ಬಳಗ, ವರದಾನೇಶ್ವರಿ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡಗಳನ್ನು ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹಸಿರು ತೋರಣ ಗೆಳೆಯರ ಬಳಗ ಕಳೆದ ಹತ್ತು ವರ್ಷಗಳಿಂದ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಗಿಡಗಳನ್ನು ನೆಡಲು ಸತತ ಶ್ರಮಿಸುತ್ತಿದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಬಳಗದ ಸದಸ್ಯರು ಮಾಡುತ್ತಿರುವ ಕೆಲಸ ಮಾದರಿಯಾಗಿದೆ ಎಂದರು.
ಪುರಸಭೆ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ ಮಾತನಾಡಿ, ಪಟ್ಟಣದಲ್ಲಿರುವ ಉದ್ಯಾನವನಗಳಲ್ಲಿ ಅರಣ್ಯ ಇಲಾಖೆಯ ಗಿಡಗಳನ್ನು ನೆಡುವ ಕೆಲಸಕ್ಕೆ ಎಲ್ಲ ರೀತಿಯ ನೆರವು ನೀಡುವುದಾಗಿ ಹೇಳಿದರು.
ಸಾಮಾಜಿಕ ವಲಯ ಅರಣ್ಯಾಧಿಕಾರಿ ಗಿರೀಶ ಆಲಕುಡೆ ಮಾತನಾಡಿ, ಈ ವರ್ಷ ಸಾಮಾಜಿಕ ಅರಣ್ಯ ವಿಭಾಗದಿಂದ ೧೫೦೦, ಪ್ರಾದೇಶಿಕ ಅರಣ್ಯ ವಿಭಾಗದಿಂದ ೧೮೦೦ ಗಿಡಗಳನ್ನು ನೆಡುವ ಕೆಲಸ ನಡೆಯಲಿದೆ. ಹಸಿರು ತೋರಣ ಬಳಗದ ಸಹಕಾರ ದೊಡ್ಡದು ಎಂದರು.
ವರದಾನೇಶ್ವರಿ ಸೇವಾ ಸಂಸ್ಥೆ ಅಧ್ಯಕ್ಷ ಸಿದ್ದಯ್ಯ ಕಲ್ಯಾಣಮಠ, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಬಸನಗೌಡ ಬಿರಾದಾರ, ಹಸಿರು ತೋರಣ ಬಳಗದ ಅಧ್ಯಕ್ಷ ಬಿ.ಎಚ್.ಬಳಬಟ್ಟಿ, ಬಳಗದ ಸಂಚಾಲಕ ಮಹಾಬಲೇಶ್ವರ ಗಡೇದ ಮಾತನಾಡಿದರು.
ಪುರಸಭೆ ಸದಸ್ಯೆಯರಾದ ಪ್ರತಿಭಾ ಅಂಗಡಗೇರಿ, ಸಹನಾ ಬಡಿಗೇರ, ಭಾರತಿ ಪಾಟೀಲ, ತಾಲ್ಲೂಕು ಪಂಚಾಯತ ಮಾಜಿ ಸದಸ್ಯ ಶ್ರೀಶೈಲ ಮರೋಳ, ಆರೋಗ್ಯ ನಿರೀಕ್ಷಕ ಮಹಾಂತೇಶ ಕಟ್ಟಿಮನಿ, ಗಣ್ಯರಾದ ಭರತ್ ಭೋಸಲೆ, ಉಮೇಶ ನಾಗಠಾಣ, ಮಹಾಂತೇಶ ಬಸನಗೌಡ್ರ, ಬಳಗದ ಕಾರ್ಯದರ್ಶಿ ಅಮರೇಶ ಗೂಳಿ, ಉಪಾಧ್ಯಕ್ಷ ಸೋಮಶೇಖರ ಚೀರಲದಿನ್ನಿ, ಮಾಜಿ ಅಧ್ಯಕ್ಷರಾದ ಅಶೋಕ ರೇವಡಿ, ರವಿ ಗೂಳಿ, ರಾಜಶೇಖರ ಕಲ್ಯಾಣಮಠ, ಸದಸ್ಯರಾದ ಮಲ್ಲಿಕಾರ್ಜುನ ಬಾಗೇವಾಡಿ, ಸುರೇಶ ಕಲಾಲ, ಬಸವರಾಜ ಬಿಜ್ಜೂರ, ಕಿರಣ ಕಡಿ, ರವಿ ತಡಸದ, ಡಾ. ಚಂದ್ರಶೇಖರ ಶಿವಯೋಗಿಮಠ, ಕಿರಣ ಪಾಟೀಲ, ಸಂಜೀವ ಕಡೂರ, ಶಿವಾನಂದ ಇಂಡಿ, ವಿನಯ ಹಿರೇಮಠ, ಶಿವನಗೌಡ ಪಾಟೀಲ, ಲೋಹಿತ್ ನಾಲತವಾಡ, ವೀರೇಶ ಇಲಕಲ್ಲ, ಸುನೀಲ್ ಮನಗೂಳಿ, ಎಂ.ಬಿ.ಗುಡಗುಂಟಿ, ಮಹಾಂತೇಶ ಮೋಟಗಿ, ಜಾವೇದ ನಾಯ್ಕೋಡಿ ಸೇರಿದಂತೆ ಅರಣ್ಯ ಇಲಾಖೆ, ಪುರಸಭೆ, ಹಸಿರು ತೋರಣ ಬಳಗದ ಸದಸ್ಯರಿದ್ದರು. ಬಳಗದ ಸಂಚಾಲಕ ಮಹಾಬಲೇಶ್ವರ ಗಡೇದ ಸ್ವಾಗತಿಸಿ, ನಿರೂಪಿಸಿದರು. ಪರಮಾನಂದ ಪಾಟೀಲ ವಂದಿಸಿದರು.

